(ಇದು ಕೇವಲ ಜ್ಯೋತಿಷ್ಯ(ಜಾತಕ) ವಿಚಾರದ ವಿಮರ್ಷೆಯಷ್ಟೆ. ರಾಜ ತಾಂತ್ರಿಕತೆಯ ವಿಚಾರ ಬರೆಯಲು ನಾನು ಅಂತಹ ವಿದ್ವತ್ಪೂರ್ಣನೇನಲ್ಲ)
ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಮಾಡಿದರು. ಹಲವು ಒಪ್ಪಂದಗಳಿಗೂ ಪರಸ್ಪರ ಒಪ್ಪಿಗೆಯೂ ಆಯ್ತು. ಇದರಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸ್ವಲ್ಪ ಮುನಿಸು ಆಗಿದೆ. ಈಗ ಈ ಈರ್ವರೊಳಗೆ ಭಾರತಕ್ಕೆ ಪರವಾಗಿ ಇರುವವರು ಯಾರು?
ಯಾರು ಅಪಾಯಕಾರಿ ಮೋದಿಗೆ?
ಮೇಲ್ನೋಟಕ್ಕೆ ಹತ್ತಿರದ ಪುಟಿನ್ ಕಾಣಬಹುದು. ಆದರೆ ಒಳಗಣ್ಣನ್ನು ಬಿಡಿಸಿದರೆ ಪುಟಿನ್ ಬಹಳ ಅಪಾಯಕಾರಿ ಎಂದು ಜಾತಕ ರೀತಿಯಲ್ಲಿ ತಿಳಿಯುತ್ತದೆ. ಈಗ ಈ ಇಬ್ಬರ ಜಾತಕ ವಿಷ್ಲೇಷಣೆ ಮಾಡಿ ನೋಡೋಣ.
ಹೇಗೆ ಮೋದಿಯವರು ಬಲಿಷ್ಟ ಶನಿಯನ್ನು (29.5° ಸಿಂಹ) ಹೊಂದಿ ಚಾಣಕ್ಯರೋ, ಹಾಗೆಯೇ ಪುಟಿನ್ ಕೂಡಾ ಬಲಿಷ್ಟ ಶನಿಯನ್ನು(24° ಕನ್ಯಾ) ಹೊಂದಿ ಮೋದಿಯನ್ನು ತನ್ನ ಶೈಲಿಯಲ್ಲಿ ಮೋಡಿ ಮಾಡುವ ಚಾಣಕ್ಷನು. ಅವರ ಸ್ವಾರ್ಥ ದೃಷ್ಟಿಯಿಂದ ಎಂತಹ ಮರುಳು ಬೇಕಾದರೂ ಮಾಡಬಹುದು.
ಆದರೆ, ಮೋದಿಯವರಿಗೆ ಕಲಿಸಿಕೊಡಬೇಕಾಗಿಯೂ ಇಲ್ಲ. ಯಾಕೆಂದರೆ ಮೋದಿಯದ್ದು ಸ್ವತಂತ್ರ ಶನಿ. ಪುಟಿನ್ನದ್ದು ರವಿ ಸಂಪರ್ಕದಲ್ಲಿ ಬಲ ಕಳೆದುಕೊಳ್ಳುತ್ತಿರುವ ಬಲಿಷ್ಟ ಶನಿ!! ಹಾಗಾಗಿ ಮೋದಿಯವರನ್ನು ಮೋಡಿ ಮಾಡಿ ಬುಟ್ಟಿಗೆ ಹಾಕಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. ಆದರೆ ಈ ಸಂಭಂದದಿಂದ ಟ್ರಂಪ್ ಮಿತ್ರತ್ವ ಹಾಳಾದೀತು.
ಇವರನ್ನು ದೂರವಿಟ್ಟರೆ ಅಪಾಯ
ಟ್ರಂಪ್ ಗೆ ಕರ್ಕದಲ್ಲಿ ದುರ್ಬಲ(2° ಕರ್ಕ) ಶನಿ ಇದ್ದು, ಚಂದ್ರ ದಶಮದಲ್ಲಿ ಕುಜನೂ ಇರುವುದರಿಂದ, ಕುಜನು ಸಿಂಹ ಲಗ್ನದಲ್ಲೇ ಇರುವುದರಿಂದ ಸಂಶಯ ಜಾಸ್ತಿ. ಶೀಘ್ರ ಕೋಪಿಷ್ಟನೂ ಹೌದು. ಶೀಘ್ರ ನಿರ್ಧಾರಕ್ಕೂ ಬರುವವರು. ಸಂಶಯ ಇರುವವರಿಗೆ ಶನಿ ಬಲಿಷ್ಟನಿದ್ದಿದ್ದರೆ ಪರವಾಗಿಲ್ಲ. ಆದರೆ ಇಲ್ಲಿ ದುರ್ಬಲ ಶನಿ. ಹಿಂದು ಮುಂದು ನೋಡದೆ actionಗೆ ಹೋಗಿ ಬಿಡುತ್ತಾನೆ. ಇಂತವರನ್ನು ದೂರವಿಟ್ಟರೆ ಅಪಾಯ. ಹತ್ತಿರ ಇಟ್ಟುಕೊಂಡು, ಪರಮಾಪ್ತನಂತೆ ಇದ್ದರೆ ಮಿತ್ರರ ಸಮಸ್ಯೆಗಳಿಗೆ ಪ್ರತಿಸ್ಪಂದಿಸಿ risk ಅವರೇ ತೆಗೆದುಕೊಳ್ಳುತ್ತಾರೆ.(ಪಾಕನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಲ್ಲಿ ಟ್ರಂಪ್ ಪಾತ್ರವೇ ದೊಡ್ಡದು. ಯಾಕೆಂದರೆ ಅವರು ಮೋದಿಯ ಮಿತ್ರತ್ವ ಬಯಸಿದ್ದರು ಎಂಬುದನ್ನು ಸ್ಮರಿಸಬೇಕು).
ಟ್ರಂಪ್ ಜೊತೆ ಮುನಿಸು ತರವಲ್ಲ
ಟ್ರಂಪ್ ಒಬ್ಬ ಹುಚ್ಚು ಆಡಳಿತಗಾರ. ಆದರೆ ಪುಟಿನ್ ಮಹಾ ಚಾಣಕ್ಯ. ಯಾರಲ್ಲಿ ಒಳಗೊಳಗೆ ಮತ್ಸರ ಇದೆಯೋ ಅವರನ್ನು ಹತ್ತಿರ ಕರೆದು, ಸ್ನೇಹ ಸಂಪಾದಿಸಿ, ಅವರ ಮಿತ್ರರನ್ನು ದೂರ ಮಾಡಿ ಬೇಳೆ ಬೇಯಿಸಿಕೊಳ್ಳುವ ಜಾಯಮಾನ ಪುಟಿನ್ನದ್ದು. ಟ್ರಂಪ್ ಹಾಗಲ್ಲ. ಅವರೊಡನೆ ಇದ್ದುಬಿಟ್ಟರೆ ಯಾವ ಕೆಲಸವನ್ನೂ ಮಾಡಿಸಿಕೊಳ್ಳಬಹುದು. ಒಬ್ಬರನ್ನು ಒಪ್ಪಿಕೊಂಡರೆ ಅವರ ಶತ್ರುಗಳು ತನಗೂ ಶತ್ರು ಎಂದೆಣಿಸುವವರು. ವಿರುದ್ಧವಾದರೋ, ಏನಾದರೂ ಒಂದು ಅಪಾಯ ತಂದೇ ತರುವ ಜಾಯಮಾನ ಡೋನಾಲ್ಡ್ ಟ್ರಂಪಿನದ್ದು. ಹಾಗಾಗಿ ಟಂಪ್ ಹತ್ತಿರ ಮುನಿಸು ಮಾಡಿಕೊಳ್ಳಲೇ ಬಾರದು.
ಪುಟಿನ್ ಯಾವ ಕಾಲಕ್ಕೆ ಹೇಗೆ ಬೇಕೋ ಹಾಗೆ turn ಆಗುವ ಜಾಯಮಾನ. ಒಟ್ಟಿನಲ್ಲಿ ಯಾವುದೋ ವ್ಯವಹಾರಿಕವಾಗಿ ಪುಟಿನ್ ಸಂಬಂಧ ಒಪ್ಪಬಹುದಾದರೂ ಹಲವು ಕಣ್ಣುಗಳನ್ನು ಅವರ ಮೇಲೆ ಇಡುವುದು ಉತ್ತಮ. ಟ್ರಂಪ್ ಒಮ್ಮೆ ದೋಸ್ತಿಯಾದರೆ ಅವರ ಹಿಂದೆ ಯಾವ ಕಣ್ಣೂ ಬೇಡ. ನಿಷ್ಟುರವಾದರೆ ಮಾತ್ರ ಅಪಾಯಕಾರಿ. ಟ್ರಂಪ್ ಮತ್ಸರಿಯಲ್ಲ. ಪುಟಿನ್ ಮತ್ಸರ ಗೊತ್ತಾಗಲ್ಲ. ಟ್ರಂಪ್ ನ ಮತ್ಸರ ಗೊತ್ತಾಗಿಬಿಡುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಡೋನಾಲ್‌ಡ್ ಟ್ರಂಪ್ ಸ್ನೇಹವನ್ನು ವೃದ್ಧಿಸಿಕೊಳ್ಳಲು.
ಸದ್ಯ ಮೋದಿಗೆ ಈ ಎರಡು ಜಾತಕ ಹೋಲಿಸುವುದಾದರೆ ಪುಟಿನ್ – ಮೋದಿಗೆ ಚಂದ್ರ ಸಮ ಸಪ್ತಕ, ಗ್ರಹ ಮಿತ್ರತ್ವ ಇಲ್ಲ, ಸಾದಕ ವಧಾ ತಾರೆ ತಾರಾನುಕೂಲದಲ್ಲಿ. ಟ್ರಂಪ್ -ಮೋದಿ ಗ್ರಹ ಮಿತ್ರತ್ವ ಇದೆ, ತಾರಾಬಲವೂ ಇದೆ. ಹಾಗಾಗಿ ಪುಟಿನ್ ಮೋದಿಗಿಂತ, ಟ್ರಂಪ್ ಮೋದಿ ಬಾಂಧವ್ಯವೇ ಉತ್ತಮ…
-ಪ್ರಕಾಶ್ ಅಮ್ಮಣ್ಣಾಯ,
ಜ್ಯೋರ್ತಿವಿಜ್ಞಾನಂ
Discussion about this post