ಮಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದೊಂದು ದಿನ ಭಾರತದ ರಾಷ್ಟ್ರಪತಿಯಾಗುತ್ತಾರೆ: ಹೀಗೆಂದು ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ…
ಮಂಗಳೂರು ದಸರಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿ ಆಗೋದು ಖಂಡಿತ.
ದೇವೇಗೌಡರ ಸುಪುತ್ರ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಸಹನೆ, ವಿನಯ ಹೊಂದಿದ್ದಾರೆ. ದೇವೇಗೌಡರೇ ನಿಮ್ಮ ಮಗ ನಮ್ಮ ಇಲ್ಲಿ ಬಂದು ದೇವರಿಗೆ ಕೈಮುಗಿದರು. ಕುಮಾರಸ್ವಾಮಿಯವರಲ್ಲಿ ನಾನು ವಿಶೇಷತೆ ಕಂಡಿದ್ದೇನೆ. ಕುಮಾರಸ್ವಾಮಿ ಒಂದು ದಿನ ಭಾರತದ ರಾಷ್ಟ್ರಪತಿಗಳಾಗೋದು ಖಂಡಿತ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ.

















