ಟೋಕಿಯೋ: ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ರೂಪಾಂತರ ಹೊಂದುತ್ತಿದ್ದು, ನಮ್ಮ ದೇಶದ ಮಾನವೀಯತೆಯನ್ನು ವಿಶ್ವವೇ ಸ್ಮರಿಸುತ್ತಿದೆ. ನಮ್ಮ ನೀತಿ ಹಾಗೂ ಕಲ್ಯಾಣ ಕಾರ್ಯಕ್ಕೆ ವಿಶ್ವವೇ ಇಂದು ಕೊಂಡಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ರಾಜಧಾನಿ ಟೋಕಿಯೋಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅವಧಿಯ ಭಾರತದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.
Addressing a seminar on ‘Make in India’, technology and the India-Japan partnership in Africa. https://t.co/b3Ssw0myQT
— Narendra Modi (@narendramodi) October 29, 2018
ಭಾರತ ಪ್ರಸ್ತುತ ಬೆಳವಣಿಗೆಯಲ್ಲಿ ವೇಗವಾಗಿ ಸಾಗುತ್ತಿದೆ. ಮುಂದಿನ ದಶಕಗಳಲ್ಲಿ ಭಾರತದ ಅಭಿವೃದ್ಧಿಯ ಪಯಣ ಸಾಗುವ ಹಾದಿಯನ್ನು ಜಾಗತಿಕ ಉದ್ಯಮಗಳೇ ಹೇಳುತ್ತಿವೆ ಎಂದಿದ್ದಾರೆ.
ಹಣಕಾಸಿನ ಒಳಹರಿವಿಕೆಗೆ ಭಾರತದ ಮಾದರಿಗಳಾದ ಜನ ಧನ ಯೋಜನೆ, ಮೊಬೈಲ್, ಆರ್ಧಾ, ಪಾವಿತ್ರ್ಯತೆ ಮತ್ತು ಡಿಜಿಟಲ್ ಮಾದರಿ ವಹಿವಾಟು ಇತ್ಯಾದಿಗಳನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ
-ನರೇಂದ್ರ ಮೋದಿ
ಇಂದು ಮೇಕ್ ಇನ್ ಇಂಡಿಯಾ ಅಭಿಯಾನ ಜಾಗತಿಕ ವ್ಯಾಪಾರದ ಗುರುತಾಗಿ ಸೃಷ್ಟಿಯಾಗಿದೆ. ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಭಾರತ ಜಾಗತಿಕ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಾನಿಕ್‌ಸ್ ಮತ್ತು ಆಟೋಮೊಬೈಲ್ ಉತ್ಪನ್ನ ಕ್ಷೇತ್ರಗಳಲ್ಲಿ ನಾವು ಸಾಧನೆ ಮಾಡುತ್ತಿದ್ದೇವೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಾವು ವಿಶ್ವಕ್ಕೆ ನಂಬರ್ 1 ಸ್ಥಾನಕ್ಕೆ ತಲುಪಲು ನಾವು ಮುನ್ನುಗ್ಗುತ್ತಿದ್ದೇವೆ ಎಂದಿದ್ದಾರೆ.
ಮೋದಿ ಮಾತಿನ ಮುಖ್ಯಾಂಶಗಳು:
-
ಸೇವಾ ಪೂರೈಕೆಗೆ ಈ ದತ್ತಾಂಶಗಳು ಸಾಧನವಾಗಿವೆ
-
ಅಂತರ್ಜಾಲ ಸಂಪರ್ಕ ಭಾರತದಲ್ಲಿ ಇಂದು ಹಳ್ಳಿ ಹಳ್ಳಿಗೆ ತಲುಪುತ್ತಿದೆ
-
100 ಕೋಟಿಗೂ ಅಧಿಕ ಮೊಬೈಲ್ ಫೋನ್ ಭಾರತದಲ್ಲಿ ಸಕ್ರಿಯ
-
ಡಿಜಿಟಲ್ ಮೂಲಭೂತ ಸೌಕರ್ಯಗಳಲ್ಲಿ ಇಂದು ಭಾರತ ಮಹತ್ವಪೂರ್ಣ ಬೆಳವಣಿಗೆಯತ್ತ ಸಾಗುತ್ತಿದೆ
-
ಇಂದು ಭಾರತದಲ್ಲಿ ತಂಪು ಪಾನೀಯದ ಸಣ್ಣ ಬಾಟಲ್ ಗಿಂತ 1ಜಿಬಿ ನೀರು ಅಗ್ಗ
-
ಭಾರತದಲ್ಲಿ ಇಂದು ಟೆಲಿ ಕಮ್ಯುನಿಕೇಶನ್ ಮತ್ತು ಅಂತರ್ಜಾಲ ಸಂಪರ್ಕ ವ್ಯವಸ್ಥೆ ಕೂಡ ವಿಸ್ತಾರಗೊಂಡಿದೆ
Discussion about this post