ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡು ದಿನಗಳ ಭಾರತ ಭೇಟಿ ಮುಕ್ತಾಯಗೊಳಿಸಿ ಹಿಂತಿರುಗಿದ್ದಾರೆ. ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟಕ್ಕೆ ಆಹ್ವಾನಿಸಲಾಗಿದ್ದ ಕೆಲವೇ ಗಣ್ಯರಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೂ ಸಹ ಈ ಗೌರವ ಸಲ್ಲಿಕೆಯಾಗಿತ್ತು ಎಂಬುದು ರಾಜ್ಯದ ಹೆಮ್ಮೆ.
ನಿನ್ನೆ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡು ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಅವರನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ಪಾಲ್ಗೊಂಡು ಟ್ರಂಪ್ ದಂಪತಿಗಳನ್ನು ಅಭಿನಂದಿಸಿದರು.

ಆದರೆ, ಅದಕ್ಕೆ ಮುಖ್ಯಮಂತ್ರಿಗಳ ಕಚೇರಿಯ ಮೂಲಗಳು ಮಾಹಿತಿ ನೀಡಿದ್ದು, ಇದು ಇಡಿಯ ದೇಶಕ್ಕೇ ಮಾದರಿಯಾಗಿದೆ.
ಟ್ರಂಪ್ ಅವರ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಅವರೊಬ್ಬರಿಗೆ ಮಾತ್ರ ಅಧಿಕೃತ ಆಹ್ವಾನವಿತ್ತು. ಒಂದು ವೇಳೆ ಅಧಿಕಾರಿಗಳು ಹಾಗೂ ವಿಜಯೇಂದ್ರ ಸಿಎಂ ಜೊತೆಯಲ್ಲಿ ತೆರಳಿದ್ದರೂ ಕರ್ನಾಟಕ ಭವನದಲ್ಲಿ ಕಾಯಬೇಕಿತ್ತು. ಬೇರೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿದಲ್ಲದೇ ಸುಮ್ಮನೇ ಎಲ್ಲರೂ ಸಿಎಂ ಜೊತೆಯಲ್ಲಿ ತೆರಳಿದರೆ ಅದಕ್ಕಾಗಿ ಲಕ್ಷಾಂತರ ರೂ. ವ್ಯಯವಾಗುತ್ತದೆ. ಜನರ ತೆರಿಗೆ ಹಣವನ್ನು ಸುಖಾಸುಮ್ಮನೆ ವ್ಯರ್ಥವಾಗುತ್ತದೆ. ಹೀಗಾಗಿ, ಓರ್ವ ವಿಶೇಷ ಅಧಿಕಾರಿಯೊಂದಿಗೆ ಮಾತ್ರ ಬಿಎಸ್’ವೈ ಅವರು ಔತಣಕೂಟಕ್ಕೆ ತೆರಳಿದ್ದಾರೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುವುದನ್ನು ತಪ್ಪಿಸಿದ್ದೇವೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093






Discussion about this post