ನವದೆಹಲಿ: ಪೂರ್ವ ಆಫ್ರಿಕಾ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ರವಾಂಡ ದೇಶಕ್ಕೆ ಸುಮಾರು 200 ಹಸುಗಳನ್ನು ದಾನ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಹೌದು… ರವಾಂಡ ದೇಶದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ಪ್ರಯತ್ನದ ಭಾಗವಾಗಿ ಅಲ್ಲಿನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಮೋದಿ ಈ ಕಾರ್ಯ ಮಾಡಿದ್ದಾರೆ.
ಗಿರಿಂಕಾ ಯೋಜನೆ ಅಡಿ ಸುಮಾರು 200 ಹಸುಗಳನ್ನು ಆ ದೇಶಕ್ಕೆ ದಾನ ನೀಡರುವ ಮೋದಿ, ಅಲ್ಲಿನ ರವೇರು ಗ್ರಾಮದಲ್ಲಿರುವ ಪ್ರತಿ ಬಡ ಕುಟುಂಬಕ್ಕೆ ಒಂದು ಹಸುವನ್ನು ನೀಡುವಂತೆ ಹೇಳಿದ್ದಾರೆ.
ಅಲ್ಲಿನ ಬಡಜನರ ಅಭಿವೃದ್ದಿಗಾಗಿ, ಸಾಮಾಜಿಕ ಭದ್ರತಾ ಯೋಜನೆಯ ಭಾಗವಾಗಿ ಗಿರಿಂಕಾ ಯೋಜನೆಯನ್ನು ಅಲ್ಲಿನ ಸರ್ಕಾರ ಜಾರಿಗೊಳಿಸಿದ್ದು, ಅದನ್ನು ಅಲ್ಲಿನ ಅಧ್ಯಕ್ಷ ಪೌಲ್ ಕಗಮೆ ವೈಯಕ್ತಿಕವಾಗಿ ಮುತುವರ್ಜಿ ವಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಲ್ಲಿನ 200 ಬಡ ಕುಟುಂಬಗಳಿಗೆ ಸಹಕಾರಿಯಾಗುವಂತೆ 200 ಹಸುಗಳನ್ನು ಮೋದಿ ದಾನ ಮಾಡಿದ್ದು, ಆ ಪ್ರದೇಶಗಳಿಗೆ ಇಂದು ಭೇಟಿ ನೀಡಿದ್ದರು.
Discussion about this post