ಬೆಳಗಾವಿ: ರಾಜ್ಯದಾದ್ಯಂತ ತೀವ್ರ ವಿರೋಧವಿದ್ದರೂ ಸಹ ಟಿಪ್ಪು ಜಯಂತಿಯ ಆಚರಿಸಿ ರಾಜ್ಯ ಸರ್ಕಾರ ಹಠ ಸಾಧಿಸಿದ ಬೆನ್ನಲ್ಲೇ, ಮೈಸೂರು ಮಹಾರಾಣಿ ಪ್ರಮೋದಾದೇವಿ ಒಡೆಯರ್ ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದೆಯೇ ನಮಗೆ ತಿಳಿದಿಲ್ಲ. ಆದರೆ, ಟಿಪ್ಪು ಸುಲ್ತಾನ್ ನಿಂದ ಮಾತ್ರ ನಮ್ಮ ಕುಟುಂಬಕ್ಕೆ ತೀವ್ರ ನಷ್ಟ ಹಾಗೂ ತೊಂದರೆ ಉಂಟಾಗಿದೆ. ಹೀಗಾಗಿ, ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿಯನ್ನು ಬೆಂಬಲಿಸುವುದಿಲ್ಲ ಹಾಗೂ ಟಿಪ್ಪು ಜಯಂತಿ ಕುರಿತು ಹೆಚ್ಚು ಮಾತನಾಡುವುದೂ ಇಲ್ಲ ಎಂದಿದ್ದಾರೆ.
ಟಿಪ್ಪುವಿನಿಂದ ಸಾಕಷ್ಟು ಅನ್ಯಾಯವಾಗಿದೆ. ಅವನ ದಾಳಿಗಳಿಂದ ಸಾಕಷ್ಟು ತೊಂದರೆಯಾಗಿದೆ. ಈಗ ಅದರ ಕುರಿತಾಗಿ ಮಾತನಾಡಿ ಪ್ರಯೋಜನವಿಲ್ಲ. ಟಿಪ್ಪು ಜಯಂತಿ ಆಚರಣೆ ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಟಿಪ್ಪುವಿನಿಂದ ನಮ್ಮ ಕುಟುಂಬಕ್ಕಾದ ತೊಂದರೆ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ನಾನು ಬೆಂಬಲಿಸುವುದಿಲ್ಲ.
Discussion about this post