ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಇತ್ತೀಚೆಗೆ ನಡೆದ ಮಹಾತ್ಮ ಗಾಂಧಿಯವರ 150ನೆಯ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಅಸಮಾಧಾನ ಹೊರಹಾಕಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಹೌದು… ಇತ್ತೀಚೆಗೆ ನಡೆದ ಈ ಕಾರ್ಯಕ್ರಮದಲ್ಲಿ ಬಾಲಿವುಡ್’ನ ಗಣ್ಯಾತಿಗಣ್ಯರಿಗೂ ಆಹ್ವಾನ ನೀಡಲಾಗಿತ್ತು. ಇದರಲ್ಲಿ ಎಸ್’ಪಿಬಿ ಅವರೂ ಸಹ ಪಾಲ್ಗೊಂಡಿದ್ದರು. ಅಲ್ಲಿ ತಮಗಾದ ನೋವನ್ನು ಅವರ ಫೇಸ್’ಬುಕ್’ನಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಕುರಿತಂತೆ ಬರೆದುಕೊಂಡಿರುವ ಅವರು, ಮಹಾತ್ಮ ಗಾಂಧಿ 150ನೆಯ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ, ಖುಷಿಕೊಟ್ಟಿತು ಎಂದಿದ್ದಾರೆ.
ಆನಂತರ ಪ್ರಧಾನಿ ನಿವಾಸಕ್ಕೆ ಪ್ರವೇಶಿಸುವಾಗ ಎಸ್’ಪಿಬಿಯವರಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಸೆಲ್ ಫೋನ್ ಬಿಟ್ಟು ಹೋಗಿ ಎಂದು ಹೇಳಿ ಟೋಕನ್ ಕೊಟ್ಟರಂತೆ. ಆದರೆ ಒಳಗೆ ಹೋಗಿ ನೋಡುವಾಗ ಬಾಲಿವುಡ್ ಸ್ಟಾರ್’ಗಳೆಲ್ಲಾ ತಮ್ಮ ಕೈಯಲ್ಲೇ ಮೊಬೈಲ್ ಇಟ್ಟುಕೊಂಡಿದ್ದಾರೆ. ಮಾತ್ರವಲ್ಲ, ಪ್ರಧಾನಿಯವರ ಜೊತೆ ಬೇಕಾದಷ್ಟು ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಪಡುತ್ತಿದ್ದರಂತೆ. ಎಸ್’ಪಿಬಿಗೆ ಮಾತ್ರ ಮೋದಿ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಅವಾಕಶ ಸಿಕ್ಕಿಲ್ಲ. ಈ ತಾರತಮ್ಯವೇಕೆ ಎಂಬರ್ಥದಲ್ಲಿ ಎಸ್’ಪಿಬಿತಮ್ಮ ಬೇಸರ ಹೊರಹಾಕಿದ್ದಾರೆ. ಆದರೆ ಒಳಗೆ ನೋಡಿದೆ ಬಾಲಿವುಡ್ ಸ್ಟಾರ್ ಬಳಿ ಮೊಬೈಲ್ ಇದೆ. ಪ್ರಧಾನಿ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸಪಡುತ್ತಿದ್ದಾರೆ. ಇದನ್ನು ನೋಡಿ ಬೇಸರಗೊಂಡೆ ಎಂದಿದ್ದಾರೆ.
ಈ ವಿಚಾರವಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post