ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಶೇಷವಾಗಿ ಪರಮೇಶ್ವರನಿಗೆ, ಅವನ ರಾಣಿಪಾರ್ವತಿ ದೇವಿ(ಭದ್ರಕಾಳಿ)ಗೆ ಚಿತ್ರಗಳಲ್ಲಿ ಲಲಾಟದಲ್ಲಿ(ಹಣೆ) ಕಣ್ಣಿನ ಚಿತ್ರಿರುವುದನ್ನು ಗಮನಿಸಬಹುದು. ಯಾಕೆ ಹೀಗೆ? ಯಾರಾದರೂ ತಿಳಿಯದವರು, ನಿಂದಕರು ಪ್ರಶ್ನಿಸಿದರೆ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಬರಲಿ ಎಂಬುದು ಈ ಲೇಖನದ ಉದ್ದೇಶ.
ಇತ್ತೀಚೆಗೆ ಯಾರೋ ಹಣೆಯ ತಿಲಕ(ನಾಮಗಳು) ಬಗ್ಗೆ ನಮ್ಮದೇ ಶ್ರೇಷ್ಟ,ಇತರರ ನಾಮಗಳು ಅಧಮ ಎಂದು ಅವರ ಮೂಗಿನ ನೇರಕ್ಕೆ ಹೇಳಿಕೊಂಡರು. ನಾನು ಅವರಿಗೆ ಒಂದು ಪ್ರಶ್ನೆ ಮಾಡಿದೆ,’ ಸರಿಯಪ್ಪಾ, ನಿಮ್ಮದೇ ಶ್ರೇಷ್ಟ ಅಂತ ಇಟ್ಕೊಳ್ಳೋಣ. ಆದರೆ ಆ ನಾಮದ ಉದ್ದೇಶ ಏನು? ಎಂದು ಕೇಳಿದೆ. ಅದಕ್ಕವರು, ಇದು ನಮ್ಮ ಮತಪರಂಪರೆಯ ಸಂಕೇತ ಎಂದು ಲೌಕಿಕ ಉತ್ತರ ಕೊಟ್ಟರು.
ಈ ಲೇಖನ ಅವರ ನಾಮಕ್ಕೂ ಉತ್ತರವಾಗಲಿ ಎಂದು ಬರೆಯುತ್ತೇನೆ.
ಶೈವ ಸಂಪ್ರದಾಯದಲ್ಲಿ ಭಸ್ಮವನ್ನು ಅಡ್ಡವಾಗಿ ಮೂರು ರೇಖೆಯ ಮೂಲಕ ನಾಮ ಹಾಕುತ್ತಾರೆ. ಮಾಧ್ವರಲ್ಲಿ ಗೋಪಿ ಚಂದನ ಉಪಯೋಗಿಸಿ ಊರ್ಧ್ವ ನಾಮ(ಊರ್ಧ್ವ ಪುಂಡ್ರ) ಹಾಕುತ್ತಾರೆ. ಶ್ರೀ ವೈಷ್ಣವರು ಮೂರು ಉದ್ದ ನಾಮ ಎಳೆಯುತ್ತಾರೆ. ಇನ್ನು ಶಾಕ್ತರು ಕುಂಕುಮ ತಿಲಕ ಇಡುತ್ತಾರೆ. ಎಲ್ಲವನ್ನೂ ಇಡುವುದು ಭ್ರೂಮಧ್ಯದ ಲಲಾಟದಲ್ಲೆ. ಬೇರೆ ಕಡೆ ಇಡಲ್ಲ !
ಸಕಲ ದೇವರೂ ಸಹಸ್ರಾಕ್ಷ ಇರುವವರೆ. ಆದರೆ ಆ ಎಲ್ಲಾ ಅಕ್ಷಿ(ಕಣ್ಣು)ಗಳನ್ನು ಗುರುತಿಸುವುದಕ್ಕಾಗಲ್ಲ. ಅದಕ್ಕಾಗಿ ಕೆಲವೊಂದು ಪ್ರಧಾನ ಅಕ್ಷಿಗಳಿಗೆ ಭಸ್ಮ,ಗೋಪಿ ಚಂದನ ನಾಮ ಇಡುತ್ತಾರೆ.ಸ್ಮಾರ್ತ ಸಂಪ್ರದಾಯದಲ್ಲಿ ಭಗನ್ನಾಮ ಉಚ್ಚರಿಸುತ್ತಾ ಲಲಾಟ, ಭುಜಗಳಿಗೆ, ನಾಭಿಗೆ, ಎದೆಗೆ ಇತ್ಯಾದಿ ಪ್ರಮುಖ ಭಾಗಗಳಿಗೆ ಮೂರು ರೇಖೆಯ ಅಡ್ಡ ನಾಮ ಇಡುತ್ತಾರೆ. ವೈಷ್ಣವರೂ ಇದೇ ಭಾಗಗಳಿಗೆ ಭಗವನ್ನಾಮೋಚ್ಛರೆಣೆಯ ಮೂಲಕ ಊರ್ಧ್ವ ನಾಮ ಹಾಕುತ್ತಾರೆ.
ಭಸ್ಮಧಾರಣೆ ಯಾಕೆ?
ಜಗತ್ತಿನಲ್ಲಿ ಪ್ರಧಾನವಾದ ಮೂರು ಶಕ್ತಿಗಳಿವೆ.ಸತ್ವ ರಜ ತಮಗಳನ್ನು ಪ್ರತಿಪಾದಿಸುವ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣಾ ಶಕ್ತಿಗಳಿವು. ಇವುಗಳು ಮಹಾಚೈತನ್ಯ ಸ್ವರೂಪಿ ಶ್ರೀಮನ್ನಾರಾಯಣನ ಆಧೀನದಲ್ಲಿರುವ ಶಕ್ತಿಗಳು. ಜಗತ್ತನ್ನು ರಕ್ಷಣೆ ಮಾಡಲೆಂದೇ ಇರುವ ಈ ತ್ರಿಗುಣಾತ್ಮಕ ಶಕ್ತಿಗಳಿವು. ಅನಿರುದ್ಧವು ಸಾತ್ವಿಕ ರೂಪದ ಮಹಾವಿಷ್ಣುವಿನ ಮಹಾಶಕ್ತಿ. ಪ್ರದ್ಯಮ್ನ ಸಂಕರ್ಷಣವು ರಾಜಸ, ತಾಮಸ(ತಾಮಸ ಎಂದರೆ ರಾಕ್ಷಸ ಎಂದು ತಿಳಿಯುವುದು ಅಪರಾಧ ಆಗುತ್ತದೆ. ಇದೆಲ್ಲವೂ ದೈವೀ ಶಕ್ತಿಯೇ ಹೊರತು, ಅಸುರೀ ಶಕ್ತಿಗಳಲ್ಲ. ಯಾವಾಗ ಇದೆಲ್ಲವೂ ದುರುಪಯೋಗ ಆಗುತ್ತೋ ಆಗ ರಾಕ್ಷಸ ಶಕ್ತಿ ಆಗಿಬಿಡುತ್ತದೆ. ಈಗ ಕೆಲ ಮನುಷ್ಯರು ಈ ನಾಮಗಳ ಬಗ್ಗೆ ಪರಸ್ಪರ ನಿಂದನೆ ಮಾಡುತ್ತಿರುವುದು ಈ ಶಕ್ತಿಗಳ ದುರುಪಯೋಗದ ಫಲ. ಅಂದರೆ ಅಸುರೀ ಶಕ್ತಿ) ಶಕ್ತಿಯಾಗಿ ಲೋಕ ಕಲ್ಯಾಣಕ್ಕಾಗಿ ಭಸ್ಮಧಾರಣೆಯ ಪ್ರತೀಕವಾದ ಶಿವ, ಸುಬ್ರಹ್ಮಣ್ಯ, ಭದ್ರಕಾಳಿ ಆರಾಧನೆಯಲ್ಲಿ ಕೆಲವೆಡೆ ಈ ನಾಮಧಾರಣೆ ಮಾಡುತ್ತಾರೆ.
ನೇತ್ರಗಳಲ್ಲೂ ಇಂತಹ ಮೂರು ಶಕ್ತಿಗಳ ಪ್ರತಿಫಲನ ಇರುತ್ತದೆ. ಉಗ್ರನಾದ, ಸೌಮ್ಯನಾದ ಇತ್ಯಾದಿ ನಾವು ರೂಢಿಯಲ್ಲಾಡುವಂತೆಯೇ ಇದಾಗಿದೆ. ಪರಶಿವನಿಗೆ ಲಲಾಟದ ಅಕ್ಷಿಗಳು ಮಹಾ ಬಲಿಷ್ಟ. ಮೂರು ಲೋಕವನ್ನೂ ಸುಡುವ ಸಾಮರ್ಥ್ಯ ಇರುತ್ತದೆ. ಅಂತಹ ಅಕ್ಷಿಗೆ ಗೌರವಾರ್ಥ ಮೂರು ರೇಖೆಗಳ ನಾಮವನ್ನು ಇಟ್ಟು ಆರಾಧಿಸುವ ಸಂಪ್ರದಾಯ ಶುರುವಾಯ್ತು. ಹೆಚ್ಚಾಗಿ ಸ್ಮಾರ್ಥರು, ವೀರ ಶೈವರು, ಲಿಂಗಾಯತರು ಇದನ್ನು ಅನುಕರಣೆ ಮಾಡುತ್ತಾರೆ. ವಿಷ್ಣುವಿನ ಅನಿರುದ್ಧ(ಸತ್ವ) ಶಕ್ತಿಯ ನೇತ್ರವೂ ಲಲಾಟದಲ್ಲಿದೆ. ಇದು ಸೌಮ್ಯವೂ, ಮೋಹಕವೂ ಆಗಿರುವುದರಿಂದ ಗೋಪಿಚಂದನದ ಮೂಲಕ ಊರ್ಧ್ವಪುಂಡ್ರ ಇಡುತ್ತಾರೆ. ಇದರ ಮಧ್ಯದಲ್ಲಿ ಒಂದು ಅಂಗಾರಕ ನಾಮವನ್ನೂ ಇಡುತ್ತಾರೆ. ನಿಂದಕರು ಇದನ್ನು ’ಸುಟ್ಟ ಮಸಿ’ ಎಂದು ನಿಂದಿಸಿ ತಮ್ಮ ಅಸುರೀ ಬುದ್ಧಿಯಲ್ಲಿ ಬರೆದರು. ಸಾಯಲಿ ಅವರು. ಅವರಿಗೆ ತಿಳುವಳಿಕೆ ಇಲ್ಲದಿದ್ದುದೇ ಈ ದುರ್ಬುದ್ಧಿಗೆ ಕಾರಣ ಅಷ್ಟೆ.
ನಿತ್ಯವೂ ಅನುಷ್ಟಾನದಲ್ಲಿ ಬ್ರಹ್ಮ ಯಜ್ಞ, ಪಿತೃ ಯಜ್ಞಾದಿಗಳೊಂದಿಗೆ ಅಗ್ನಿಕಾರ್ಯ ಮಾಡಲೇಬೇಕು. ಇದನ್ನು ವೈಶ್ವದೇವ, ಅಗ್ನಿ ಹೋತ್ರ ಎಂದೂ ಕರೆಯುತ್ತಾರೆ. ಅಂದರೆ ವಿವಾಹ ಆದ ಮೇಲೆ ಮಾಡುವ ಈ ಕಾರ್ಯಕ್ಕೆ ಈ ಹೆಸರು. ಪೂರ್ಣಾಹುತಿಯ ನಂತರ ಹುತಭಸ್ಮ ಧಾರಣೆಯಲ್ಲಿ ಅಂಗಾರಕ ಎಳೆದುಕೊಳ್ಳುವ ಸಂಪ್ರದಾಯ. ಮಧ್ಯಾಹ್ನ ಕಾಲದ ಭೋಜನಾತ್ ಪೂರ್ವ ಅಕ್ಷತ ಹಾಕುವ ಸಂಪ್ರದಾಯ ಶುರುವಾಯ್ತು. ಇದು ಆ ಬ್ರಾಹ್ಮಣನು ಭೋಜನ ಸ್ವೀಕರಿಸಿದ ಎಂಬ ಸಂಕೇತವೂ ಹೌದು. ಹೀಗೇ ತಾತ್ವಿಕವಾಗಿ ದೇಶ, ಕಾಲ, ಪಾತ್ರಕ್ಕನುಗುಣವಾಗಿ ಒಂದೊಂದು ಸಂಪ್ರದಾಯಗಳು ಬಂತೇ ವಿನಃ, ನಮ್ಮದೇ ಶ್ರೇಷ್ಟ ಎಂದು ಹೇಳಿಕೊಳ್ಳಲು ಶುರುವಾದದ್ದೇ ಅಲ್ಲ. ಪ್ರತಿಯೊಂದು ತತ್ವಗಳು ಋಷಿಮುನಿಗಳ ಸಂಶೋಧನೆಯ ಫಲವೆ. ಅದನ್ನು ನಮ್ಮಲ್ಲಿ ಶ್ರೀಗುರುಗಳಾದ ಮಧ್ವಾಚಾರ್ಯರು, ಶ್ರೀ ಶಂಕರಾಚಾರ್ಯರು, ರಾಮನುಜ ಆಚಾರ್ಯರು ಮತ್ತೆ ಅನುಷ್ಟಾನಕ್ಕೆ ತಂದರು. ಈ ಆಚಾರ್ಯ ತ್ರಯರ ಅನುಯಾಯಿಗಳಲ್ಲಿ ನಾವೆಲ್ಲರೂ ಸೇರಿರುವವರು.
ತ್ರಿನೇತ್ರ
ಮುಖ್ಯ ವಿಚಾರವನ್ನೇ ಹೇಳುವುದಕ್ಕೆ ಮರೆತುಬಿಟ್ಟೆ. ನಾವು ಹಾಕಿಕೊಳ್ಳುವ ಎಲ್ಲಾ ನಾಮಗಳಲ್ಲಿ ಎದ್ದು ಕಾಣುವಂತದ್ದು ಹಣೆಯದ್ದು ಮಾತ್ರ. ಉಳಿದದ್ದನ್ನು ನಮ್ಮ ವಸ್ತ್ರಗಳು ಮುಚ್ಚಿರುತ್ತದೆ. ಹಣೆಯಲ್ಲೇ ಮೂರನೆಯ ಕಣ್ಣಿರುವುದು. ಸಾಮಾನ್ಯರಾದ ನಮಗೆ ಅದನ್ನು ಬಿಡಿಸುವುದಾಗಲೀ, ಅದರ ಅನುಭವಾಗಲೀ ತಿಳಿದಿರುವುದಿಲ್ಲ. ಅದು ತಿಳಿಯದ ಕಾರಣ ನಾವು ಕಣ್ಣಿದ್ದೂ ಕುರುಡರಂತಿದ್ದೇವೆ. ಆಗ ಇಂತಹ ನಿಂದನೆ, ಅವಹೇಳನ ವಾಕ್ಯಗಳು, ಅಹಂಕಾರದ ಮಾತುಗಳು ಬರುತ್ತದೆ. ಈ ಮೂರನೆಯ ಕಣ್ಣಿಗೆ ನಮ್ಮ ಮಾಮೂಲು ಕಣ್ಣಿನಂತೆ lens ಇರುವುದಿಲ್ಲ. ಹಾಗಾಗಿ ಹಣೆಗೆ ಮೆಣಸಿನ ಪುಡಿ ಹಾಕಿದರೂ ಉರಿ ಬರೋದಿಲ್ಲ. ಇದು ಕೇವಲ ಸ್ಪರ್ಷ ಜ್ಞಾನದ ಕಣ್ಣು. (ಉದಾಃ NASA, ISRO ಮುಂದಾದ ಖಗೋಳ ವಿಜ್ಞಾನಿಗಳು ಈ telescopic lens ಬಳಸಿ ಗ್ರಹ ನಕ್ಷತ್ರ ನೋಡುವುದಿಲ್ಲ. ಅವರು ಕೇವಲ ಮೈಕ್ರೋ, ರೇಡಿಯೋ ತರಂಗಾಂತರ ಮೂಲಕವೇ ಅನುಭವ ಪಡೆಯುತ್ತಾರೆ.) ಅದೇ ರೀತಿ ಈ ಮೂರನೆಯ ಕಣ್ಣಾಗಲೀ ಅಥವಾ ಸಹಸ್ರಾಕ್ಷವೇ ಆಗಲಿ ಇದೆಲ್ಲವೂ ಸ್ಪರ್ಷದ ಮೂಲಕವೇ ಅನುಭವಕ್ಕೆ ಬರುವಂತದ್ದು. Sensitive eyes ಎಂದು ಕರೆಯಬಹುದು.
ಇಂತಹ ಮೂರನೆಯ ಲಲಾಟದ ಕಣ್ಣಿಗೆ ಈ ನಾಮವನ್ನೆಳೆದು ಧ್ಯಾನ ಮಾಡಿದರೆ ಭಗವಂತನ ಸಾಕ್ಷಾತ್ಕಾರ ಕಾಣಬಹುದು, ನಮ್ಮನ್ನು ನಾವು ತಿಳಿದುಕೊಳ್ಳಬಹುದು ಎಂಬ ತತ್ವದಲ್ಲೇ ಈ ನಾಮಗಳ ಸೃಷ್ಟಿಯಾಯಿತು. ಮೂರ್ಖರು style ಮಾಡಲು ಹಾಕಿಕೊಳ್ಳಬಹುದು, ಇನ್ನೊಬ್ಬರನ್ನು ನಿಂದಿಸಲು ಹಾಕಿಕೊಂಡಿರಬಹುದು, ನಮ್ಮದೇ ಶ್ರೇಷ್ಟ ಎಂದು ತೋರಿಸಲೂ ಹಾಕಿಕೊಂಡದ್ದೂ ಇರಬಹುದು. ಅದೇನೇ ಇರಲಿ ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ತ್ರಿನೇತ್ರದ ಸಂಕೇತವೇ ಲಲಾಟದಲ್ಲಿ ಶೋಭಿಸುವ ತಿಲವು.
Get in Touch With Us info@kalpa.news Whatsapp: 9481252093
Discussion about this post