ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಷಿಂಗ್ಟನ್: ಕೊರೋನಾ ವೈರಸ್ ಕೋವಿಡ್ 19 ರೋಗಿಗಳಿಗೆ ಬಳಸಲಾಗುವ ಮಲೇರಿಯಾ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲಿನ ರಫ್ತು ನಿಷೇಧವನ್ನು ಹಿಂಪಡೆಯದೇ ಇದ್ದರೆ, ನಾವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎಚ್ಚರಿಕೆಯ ಸುಳಿವು ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಮ್ಮ ದೇಶದಲ್ಲಿ ಕೋವಿಡ್ 19 ತಹಬಂಧಿಗೆ ತರಲು ಬಹಳಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣಕ್ಕೆ ತರಲಾಗುತ್ತಿಲ್ಲ. ಕೋವಿಡ್ 19ಕ್ಕೆ ವಿರೋಧವಾಗಿ ಇದನ್ನು ಬಳಸಬಹುದು ಎಂದು ಸಂಶೋಧನೆಯಿಂದಲೂ ದೃಢಪಟ್ಟಿದೆ. ಈ ಬೆಳವಣಿಗೆಯ ನಡುವೆ ಭಾರತ ಇದರ ರಫ್ತು ಮಾಡುವುದನ್ನು ನಿಷೇಧಿಸಿತ್ತು. ಆರಂಭದಲ್ಲಿ ಇದರತ್ತ ಅಷ್ಟಾಗಿ ಗಮನ ಹರಿಯದಿದ್ದರೂ ಇದೀಗ ಭಾರತದ ನಿರ್ಧಾರ ಅಮೆರಿಕಾಕ್ಕೆ ಸಂಕಟ ತಂದೊಡ್ಡಿದೆ.
ಟ್ರಂಪ್ ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ. ನಮ್ಮ ಬೇಡಿಕೆಯ ಹೈಡ್ರೋಕ್ಸಿಕ್ಲೋರೋಕ್ವಿನ್ ಪೂರೈಕೆಯನ್ನು ಒದಗಿಸಿದರೆ ಮೆಚ್ಚುತ್ತೇವೆ. ಒಂದೊಮ್ಮೆ ನಿರಾಕರಿಸಿದರೆ ಸಮಸ್ಯೆಯೇನಿಲ್ಲ, ಆದರೆ ಸಹಜವಾಗಿ ಪ್ರತಿಕಾರವೂ ಇರಬಹುದು, ಯಾಕೆ ಇರಬಾರದು ಎಂದು ಸವಾಲನ್ನು ಎಸೆದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post