ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ಹಾವಳಿಯ ನಡುವೆಯೇ ಜಗನ್ನಿಯಾಮಕ ಶ್ರೀಕೃಷ್ಣ ಜನ್ಮಾಷ್ಠಮಿಗೆ ನಾಡು ಸಜ್ಜಾಗಿದೆ. ಇದರ ನಡುವೆಯೇ ಪುಟ್ಟ ಮಕ್ಕಳಿರುವ ಮನೆಗಳಲ್ಲಿ ಸಂಭ್ರಮ ಇನ್ನೂ ಅಧಿಕವಾಗಿದೆಯೇ ಇರುತ್ತದೆ. ಇಂತಹ ಸಂಭ್ರಮವನ್ನು ನೀವು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಹಂಚಿಕೊಳ್ಳಬಹುದು.
ಹೌದು… ಈ ಕೃಷ್ಣ ಜನ್ಮಾಷ್ಟಮಿಗೆ ನಿಮ್ಮ ಮುದ್ದು ಮಗುವಿಗೆ ಶ್ರೀಕೃಷ್ಣನ ಅಲಂಕಾರ ಮಾಡಿ ಸಂಭ್ರಮಿಸುತ್ತೀರಾ? ಹಾಗಾದರೆ ಆ ಸುಂದರ ಫೋಟೋ ಹಾಗೂ ವೀಡಿಯೋವನ್ನು ನಮ್ಮೊಂದಿಗೆ ನೀವು ಹಂಚಿಕೊಳ್ಳಬಹುದು. ನಾವು ಅದನ್ನು ಪ್ರಕಟಿಸುತ್ತೇವೆ.
ವಿವರಗಳು ಹೀಗಿವೆ:
- ಗಂಡು ಅಥವಾ ಹೆಣ್ಣು ಮಗುವಿನ ಅಲಂಕಾರದ ಫೋಟೋ ಕಳುಹಿಸಬಹುದು
- ಶ್ರೀಕೃಷ್ಣ ಹಾಗೂ ರಾಧೆಯ ಅಲಂಕಾರದ ಫೋಟೋ ಸಹ ಸ್ವೀಕೃತ
- ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಮಕ್ಕಳ ಫೋಟೋ ಮಾತ್ರ ಸ್ವೀಕೃತ
- ಫೋಟೋದಲ್ಲಿ ಮಗು ಸ್ಪಷ್ಟವಾಗಿ ಕಾಣುವಂತಿರಬೇಕು, ಬ್ಲರ್ ಇರುವಂತಹ ಫೋಟೋಗಳನ್ನು ಪರಿಗಣಿಸುವುದಿಲ್ಲ
- ಫೋಟೋ ಹಾಗೂ ವೀಡಿಯೋ ಎರಡನ್ನೂ ಸಹ ಕಳುಹಿಸಬಹುದು
- ಮಗುವಿನ ಪೂರ್ಣ ಹೆಸರು, ಲಿಂಗ, ವಯಸ್ಸು, ತಂದೆ-ತಾಯಿ ಹೆಸರು, ವಿಳಾಸ ಕಡ್ಡಾಯವಾಗಿ ನಮೂದಿಸಬೇಕು
- ಆಗಸ್ಟ್ 12ರ ಮಧ್ಯಾಹ್ನ 1 ಗಂಟೆಯ ಒಳಗಾಗಿ ಕಳುಹಿಸಬೇಕು
- ಈ ಕೆಳಗಿನ ವಾಟ್ಸಪ್ ನಂಬರ್ ಅಥವಾ ಇಮೇಲ್ ಐಡಿಗೆ ಕಳುಹಿಸಿ
+91 94812 52093 info@kalpa.news
Get In Touch With Us info@kalpa.news Whatsapp: 9481252093
Discussion about this post