ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ #Hubli ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವ ಮುನ್ನ ಮಹಿಳೆಯೊಬ್ಬರು ತಮ್ಮ ಬ್ಯಾಗನ್ನು ಆಕಸ್ಮಿಕವಾಗಿ ಮರೆತು ಹೋಗಿದ್ದು, ರೈಲ್ವೆ ಇಲಾಖೆಯ ಸಿಬ್ಬಂದಿ ಅದನ್ನು ಹುಡುಕಿ ಸುರಕ್ಷಿತವಾಗಿ ಮರಳಿಸಿರುವ ಘಟನೆ ನಡೆದಿದೆ.
ಮಹಿಳೆಯೊಬ್ಬರು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್’ಪ್ರೆಸ್ #VandeBharat ರೈಲು ಹತ್ತುವ ವೇಳೆ ತಮ್ಮ ಬ್ಯಾಗನ್ನು ಆಕಸ್ಮಿಕವಾಗಿ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದರು. ರೈಲು ಹತ್ತಿದ ತಕ್ಷಣ ಬ್ಯಾಗ್ ಕಳೆದುಕೊಂಡಿರುವುದನ್ನು ಅರಿತ ಮಹಿಳೆ ರೈಲ್ವೆ ಟಿಟಿಇ ಗುರು ಹಿರೇಮಠ್ ಅವರ ಬಳಿ ಸಹಾಯ ಕೇಳಿದ್ದಾರೆ. ತತಕ್ಷಣವೇ ಟಿಟಿಇ ಅವರು 139 ಮೂಲಕ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.

ಒಂದು ದೂರನ್ನು ಆಧರಿಸಿ ತ್ವರಿತವಾಗಿ ಪ್ರತಿಕ್ರಿಯಿಸಿ ಬ್ಯಾಗ್ ಪತ್ತೆ ಮಾಡಿ, ವಾರಸುದಾರರಿಗೆ ತಲುಪಿಸಿದ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರ್ಯ ಭಾರತೀಯ ರೈಲ್ವೆಯ ದಕ್ಷ, ವಿಶ್ವಾಸಾರ್ಹ ಮತ್ತು ಪ್ರಯಾಣಿಕ-ಆಧಾರಿತ ಸೇವೆಗೆ ಬದ್ಧತೆಯನ್ನು ಎತ್ತಿ ತೋರಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post