ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಪರ ಜಿಲ್ಲಾಧಿಕಾರಿಯಂತಹ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಎಂ.ಎಲ್. ವೈಶಾಲಿ ಮತ್ತು ಜಿ. ಅನುರಾಧ ಅವರು ಜಿಲ್ಲೆಯ ಯುವತಿಯರಿಗೆ ಸ್ಪೂರ್ತಿಯಾಗಿದ್ದಾರೆ.
ಕೇವಲ ಕಾರ್ಯಾಂಗದಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಹುದ್ದೆಗಳ ಚುಕ್ಕಾಣಿಯನ್ನು ಸಹ ಮಹಿಳೆಯರು ಹಿಡಿದಿರುವುದು ವಿಶೇಷ. ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಯಿಂದ ಹಿಡಿದು ಸಿಇಓ, ಹಿರಿಯ ಸಿವಿಲ್ ನ್ಯಾಯಧೀಶೆ ಹುದ್ದೆ, ಪಾಲಿಕೆ ಮೇಯರ್, ಉಪ ಮೇಯರ್ ಉನ್ನತ ಸ್ಥಾನಗಳು ಮಹಿಳೆಯರ ಪಾಲಾಗಿವೆ.
ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಜಕೀಯ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಹಿಂದೆ ಅಡುಗೆ ಮನೆಗೆ ಮಾತ್ರ ಸೀಮಿತ ಎಂಬಂತಿದ್ದ ಮಹಿಳೆಯರು ಇತ್ತೀಚೆಗೆ ರಾಜಕೀಯ, ಆರ್ಥಿಕ, ವಿಜ್ಞಾನ, ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆ, ಹಿರಿಯ ಸಿವಿಲ್ ನ್ಯಾಯಧೀಶರ ಹುದ್ದೆ, ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಲ್ಲಿಯೂ ಮಹಿಳೆಯರು ಸೇವೆ ಸಲ್ಲಿರುತ್ತಿರುವುದು ಗಮನಾರ್ಹ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳನ್ನು ಸಹ ಮಹಿಳೆಯರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.

ಅಪರ ಜಿಲ್ಲಾಧಿಕಾರಿ ಜಿ. ಅನುರಾಧ
ಮಹಿಳೆಯರು ಆಧುನಿಕತೆಯ ಬೆನ್ನು ಹತ್ತದೆ ಸಂಸ್ಕಾರವನ್ನು ಉಳಿಸಿಕೊಂಡು ತಮ್ಮ ಕುಟುಂಬವನ್ನು ಮುನ್ನಡೆಸಬೇಕು. ಸ್ವಚ್ಛ ಪರಿಸರವನ್ನು ರೂಪಿಸುತ್ತಾ ಸಮಾಜದಲ್ಲಿ ಅದರ್ಶವನ್ನು ಬೆಳೆಸುತ್ತ, ಎಲ್ಲ ಕಟ್ಟುಪಾಡನ್ನು ದಾಟಿ ಹೊಸ್ತಿಲಿನಿಂದಾಚೆ ಹೊರಬರಬೇಕಿದೆ. ಏನಾದರೂ ಸಾಧಿಸುವ ಮನಃಸ್ಥಿತಿಯನ್ನು ಬೆಳೆಸಿಕೊಂಡು ಆದರ್ಶ ಮಹಿಳೆಯಾಗಿ, ತಾಯಿಯಾಗಿ ಸಮಾಜದಲ್ಲಿ ಉತ್ತಮ ಹೆಸರುಗಳಿಸಬೇಕಿದೆ.
ಸಿಇಓ ಎಂ.ಎಲ್. ವೈಶಾಲಿ
21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಹೆಣ್ಣು ಇದೀಗ ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಳ್ಳವ ನಿಟ್ಟಿನಲ್ಲಿ ಮಹಿಳೆಯು ಮುಂದಾಗಬೇಕಾಗಿದೆ.
Get in Touch With Us info@kalpa.news Whatsapp: 9481252093







Discussion about this post