ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ನಾಗರಾಜ ಶೆಟ್ಟರ್ |
ಪ್ರಪಂಚದಲ್ಲಿ ಯಾರಿಗಾದರೂ ನಾವು ನೀಡಬಹುದಾದ ಅಮೂಲ್ಯ ಕೊಡುಗೆಯೆಂದರೆ ರಕ್ತದಾನ ಎಂಬುದು ಈಗಾಗಲೇ ಸಾಬೀತಾಗಿದೆ. ಈ ರಕ್ತದ #Blood ಮಹತ್ವವನ್ನು ಅದು ಹೊಂದಿರುವ ವಿಶೇಷ ಗುಣಗಳ ಆಧಾರದ ಮೇಲೆ ವಿಂಗಡಣೆ ಮಾಡಲಾಗಿದೆ. ರಕ್ತದಾನ #BloodDonation ಮಾಡುವಾಗ ಯಾವ ರಕ್ತದ ಗುಂಪಿನವರು ಯಾವ ರಕ್ತದ ಗುಂಪಿನವರಿಗೆ ರಕ್ತದಾನ ಮಾಡಬಹುದು ಎಂಬುದನ್ನು ತನ್ನ ಪ್ರಯೋಗಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟ ಈ ವಿಂಗಡಣೆಯ ಸೂತ್ರಧಾರನೇ ಇಂದು ನಾವು ಆಚರಿಸುತ್ತಿರುವ ವಿಶೇಷ ದಿನದ ಕಾರಣಕರ್ತ. ಈ ಮಹಾನ್ ವ್ಯಕ್ತಿಯ ಬಗ್ಗೆ ಅರಿಯದೇ ಈ ದಿನದ ಆಚರಣೆ ಮಾಡಿದರೆ ಅದರ ಮಹತ್ವ ಕಡಿಮೆಯಾಗಬಹುದು. ಅದಕ್ಕಾಗಿ ಈ ವಿಶೇಷ ಲೇಖನ.
1901ರ ಸಮಯದಲ್ಲಿ ಕಾರ್ಲ್ ಲ್ಯಾಂಡೈನರ್ ಒಬ್ಬ ಆಸ್ಟ್ರಿಯನ್ #Austrian ಮೂಲದ ಅಮೇರಿಕನ್ ಜೀವಶಾಸ್ತ್ರಜ್ಞ, ವೈದ್ಯ ಮತ್ತು ರೋಗನಿರೋಧಕ ಶಾಸ್ತçಜ್ಞ ಮಾಡಿದ ಆವಿಷ್ಕಾರ ಇಂದು ಅವನನ್ನು ಪ್ರತಿ ಕ್ಷಣ, ಪ್ರತಿ ನಿಮಿಷ ನೆನಪಿಸಿಕೊಂಡು ಈ ‘ವಿಶ್ವ ರಕ್ತದಾನಿಗಳ ದಿನ’ #WorldBloodDonorDay ಆಚರಣೆಗೆ ಸ್ಪೂರ್ತಿಯಾಗಿದ್ದಾನೆ. ಜೀವಜಗತ್ತಿನ ಪ್ರತಿ ಜೀವಿಗೂ ಬದುಕಲು ಅತಿ ಅಗತ್ಯವೆನಿಸಿದ ರಕ್ತದ ಗುಂಪುಗಳನ್ನು ವಿಂಗಡಿಸಿ ಜಗತ್ತಿಗೆ ತಿಳಿಸಿದ ನಿತ್ಯಸ್ಮರಣೀಯ ವಿಜ್ಞಾನಿ. ಈ ಮಹಾನ್ ವ್ಯಕ್ತಿಯ ಜನ್ಮದಿನವನ್ನು ನಾವು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುತ್ತಿದ್ದೇವೆ.

ABO ವ್ಯವಸ್ಥೆಯಲ್ಲಿನ 4 ವಿಭಿನ್ನ ರಕ್ತದ ಗುಂಪುಗಳು ಎ, ಬಿ, ಎಬಿ ಮತ್ತು ಓ ಎಂದು ನಾವೀಗ ಅರಿತಿದ್ದೇವೆ. ಪ್ರತಿಯೊಂದು ವ್ಯಕ್ತಿಯ ರಕ್ತದ ಗುಂಪು ಎರಡು ಜೀನ್ ಗಳ ಒಂದು ಜೋಡಿಯಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ಲ್ಯಾಂಡೈನರ್ ಪ್ರಯೋಗಗಳಿಂದ ದೃಢಪಡಿಸಿದರು. ಪ್ರತಿ ಪೋಷಕರಿಂದ ಆನುವಂಶಿಕವಾಗಿ ಪಡೆದ ಒಂದೊಂದು ಜೀನ್ ಸೇರಿ ಈ ಜೀನ್ ಜೋಡಿ ನಿರ್ಧರಿಸಲ್ಪಡುತ್ತದೆ. ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ ಅಣುಗಳಿಂದ ಗುರುತಿಸಲ್ಪಡುತ್ತದೆ. ಇವುಗಳನ್ನು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿರುವ ಪ್ರತಿಜನಕಗಳು ಅಥವಾ ಆ್ಯಂಟಿಜೆನ್ಸ್ ಎಂದು ಕರೆಯಲಾಗುತ್ತದೆ.

ಆದರೆ ವಿಶ್ವ ಆರೋಗ್ಯ ಸಂಸ್ಥೆಯು(WHO) #WHO 2004ರಲ್ಲಿ ಕಾರ್ಲ್ ಲ್ಯಾಂಡೈನರ್ ರವರ ಜನ್ಮದಿನವಾದ ಜೂನ್ 14 ನೇ ದಿನವನ್ನು ‘ವಿಶ್ವ ರಕ್ತದಾನಿಗಳ ದಿನ’ ವನ್ನಾಗಿ ಆಚರಿಸುವ ನಿರ್ಧಾರ ಕೈಗೊಂಡು 2005 ರಲ್ಲಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸುವ ಅಧಿಕೃತ ಘೋಷಣೆ ಹೊರಡಿಸುತ್ತದೆ. ಅಂದಿನಿಂದ ಇಂದಿನವರೆಗೂ ಈ ವಿಶೇಷ ದಿನದಂದು ವಿಶ್ವದಾದ್ಯಂತ ನಡೆಯುವ ರಕ್ತದಾನ ಶಿಬಿರಗಳ ಮೂಲಕ ಕೋಟ್ಯಂತರ ಯೂನಿಟ್ ರಕ್ತ ಸಂಗ್ರಹವಾಗಿ ಕೋಟ್ಯಂತರ ಜೀವಗಳು ಮರುಜನ್ಮ ಕಾಣಲು ಕಾರಣವಾಗಿದೆ.

ಮಹಿಳೆಯರಲ್ಲಿ ಸಹಜವಾಗಿ ರಕ್ತದಾನದ ಬಗ್ಗೆ ಇರುವ ಅನುಮಾನಗಳನ್ನು ಪರಿಹರಿಸಿ ರಕ್ತದಾನಕ್ಕೆ ಇದ್ದ ತೊಡಕುಗಳನ್ನು ನಿವಾರಿಸುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಸ್ವಯಂ ಆರೋಗ್ಯದಿಂದ ಆರೋಗ್ಯವಂತ ಕುಟುಂಬ ಸಾಧ್ಯ, ಅದೇರೀತಿ ಆರೋಗ್ಯವಂತ ಕುಟುಂಬದಿಂದ ಆರೋಗ್ಯವಂತ ಸಮಾಜ, ಆರೋಗ್ಯವಂತ ದೇಶ ಸಾಧ್ಯ. ಉತ್ತಮ ಆರೋಗ್ಯ ಇದ್ದರೆ ಉತ್ತಮ ಸಮಾಜ ಸಾಧ್ಯ ಎಂಬ ಘೋಷವಾಕ್ಯದಡಿ ರಕ್ತದಾನ ಮಹಾದಾನ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂಬ ಮಾತುಗಳಿಗೆ ಸಾಕ್ಷಿಯಾಗುವತ್ತ ನಮ್ಮ ಚಿತ್ತವನ್ನು ಬೆಳೆಸಿಕೊಳ್ಳುವ ಅಗತ್ಯತೆ ಇಂದು ನಮ್ಮೆದುರಿಗೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post