Friday, July 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ವಿಶೇಷ ಲೇಖನ: ಯೋಗಕ್ಕೇ ಯೋಗ ತಂದುಕೊಟ್ಟ ನಮ್ಮ ಹೆಮ್ಮೆಯ ಭಾರತ

June 20, 2019
in Special Articles
0 0
0
Share on facebookShare on TwitterWhatsapp
Read - 4 minutes

ಅಂದು ಚಿಕಾಗೋ ವಿಶ್ವ ಸಮ್ಮೇಳನದಲ್ಲಿ ಜಗತ್ತನ್ನು ದಿಗ್ಬ್ರಮೆಗೊಳಿಸಿದ ಆ ನರೇಂದ್ರ ಜಗತ್ತೇ ಭಾರತದತ್ತ ಮುಖ ಮಾಡುವಂತೆ ಮಾಡಿದರು. ಇಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯ ಅಂಗ ರಾಷ್ಟ್ರಗಳ ಸಭೆಯಲ್ಲಿ ಯೋಗದ ಕುರಿತು ಪ್ರಸ್ತಾಪಿಸಿ ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಮನ್ನಣೆ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿಯವರು ಯೋಗದ ಕುರಿತು ಪ್ರಸ್ತಾಪಿಸಿ, ಭವ್ಯ ಇತಿಹಾಸವಿರುವ ಯೋಗವನ್ನು ಜಾಗತಿಕ ಮಟ್ಟಕ್ಕೇರಿಸಿದರು. ಯೋಗ ಪ್ರಾಚೀನ ಭಾರತದ ಸಂಸ್ಕøತಿಯ ಕೊಡುಗೆ, ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸು, ಆಚಾರ ಮತ್ತು ವಿಚಾರ, ಮಾನವ ಮತ್ತು ಪ್ರಕೃತಿ, ಆರೋಗ್ಯ ಮತ್ತು ಕ್ಷೇಮದ ಬೆಸುಗೆಯಾಗುತ್ತದೆ ಎಂದು ವಿಶ್ವಕ್ಕೆ ಸಾರಿದರು. ಯೋಗ ಬರೀ ವ್ಯಾಯಾಮ ಮಾತ್ರವಲ್ಲದೆ, ನಮ್ಮನ್ನು ನಾವು ಅರಿತುಕೊಳ್ಳುವ ಸಾಧನವೆಂದು ಬಣ್ಣಿಸಿದರು. ಕೊನೆಗೆ ವಿಶ್ವಸಂಸ್ಥೆಯು ಜೂನ್ 21ನ್ನು ‘ವಿಶ್ವ ಯೋಗದಿನವನ್ನಾಗಿ’ ಘೋಷಿಸಿತು. ವಿಶ್ವ ಸಂಸ್ಥೆಯ 170 ಅಂಗ ರಾಷ್ಟ್ರಗಳು ಇದನ್ನು ಅಂಗೀಕರಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿಶ್ವ ಯೋಗದಿನವನ್ನು ಆಚರಿಸಲಾಗುತ್ತಿದೆ. ಇದು ಯೋಗಕ್ಕೆ ಕೂಡಿ ಬಂದ ಯೋಗವಲ್ಲವೇ!

ಯೋಗ ಸಿಂಧು ನಾಗರಿಕತೆಯ ಕೊಡುಗೆಯೆಂದು ಹೇಳಲಾಗಿದ್ದು, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ವೇದ, ಉಪನಿಷತ್ತು, ರಾಮಾಯಣ, ಮಹಾಭಾರತಗಳಲ್ಲಿ ಉಲ್ಲೇಖಗೊಂಡಿರುವ ಯೋಗವೆಂಬ ವಿಜ್ಞಾನ ಗತಕಾಲದ ಇತಿಹಾಸಕ್ಕೆ ಸಾಕ್ಷಿ. ವಿಶ್ವದ ವಿವಿಧ ಭಾಗಗಳಲ್ಲಿ ಯೋಗಾಭ್ಯಾಸ ರೂಢಿಯಲ್ಲಿದ್ದರೂ, ಭಾರತದಲ್ಲಿ ಅದಕ್ಕೆ ಬಹಳ ಮಹತ್ವ ದೊರೆತಿದೆ. ಮಹರ್ಷಿ ಪತಂಜಲಿ ರಚಿಸಿದ ಯೋಗ ಸೂತ್ರ ವಿಶ್ವಾದ್ಯಂತ ಹರಡಿ ಯೋಗಾಭ್ಯಾಸದ ಮೂಲವೆನಿಸಿಕೊಂಡಿದೆ. ಆರೋಗ್ಯ, ಒತ್ತಡ ನಿಯಂತ್ರಣ, ಮನಶಾಂತಿಯ ನಿಟ್ಟಿನಲ್ಲಿ ಇಂದು ಯೋಗಾಭ್ಯಾಸ ಮಹತ್ವ ಪಡೆಯುತ್ತಿದ್ದು, ಪುರಾತನ ಕಾಲದ ವಿಜ್ಞಾನ ಶಾಸ್ತ್ರವೊಂದು ಮತ್ತೆ ಅರಳುತ್ತಿದೆ.


ದೇಹ, ಮನಸ್ಸು, ಭಾವನೆ ಮತ್ತು ಶಕ್ತಿಯ ಮೇಲೆ ಯೋಗ ಪರಿಣಾಮ ಬೀರುತ್ತದೆ. ಯೋಗದಲ್ಲಿ ನಾಲ್ಕು ಪ್ರಕಾರಗಳಿದ್ದು, ಕರ್ಮಯೋಗ ದೇಹದ ಮೇಲೆ, ಜ್ಞಾನಯೋಗ ಮನಸ್ಸು, ಭಕ್ತಿಯೋಗ ಭಾವನೆ ಮತ್ತು ಕ್ರಿಯಾಯೋಗ ಶಕ್ತಿಯ ಸಂಕೇತವಾಗಿದೆ. ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಂಬ ವಿಧಗಳಿವೆ ಎಂದು ಪತಂಜಲಿ ಮಹರ್ಷಿ ಬಣ್ಣಿಸಿದ್ದಾರೆ. ಇವುಗಳಲ್ಲಿ ಆಸನ ಮತ್ತು ಪ್ರಾಣಾಯಮ ಹೆಚ್ಚು ಪ್ರಚಲಿತದಲ್ಲಿದು, ಅವು ವ್ಯಾಯಾಮ ಮತ್ತು ಉಸಿರಿನ ಹಿಡಿತಕ್ಕೆ ಸಂಬಂಧಿಸಿದ್ದಾಗಿವೆ. ಇಂದಿನ ಒತ್ತಡದ ಜೀವನ ಕ್ರಮದಿಂದ ಉಂಟಾಗುವ ರೋಗಗಳಿಗೆ ಯೋಗಾಭ್ಯಾಸ ರಾಮಬಾಣ. ಯೋಗದಿಂದ ರಕ್ತ ಪರಿಚಲನೆ, ಜೀರ್ಣಕ್ರಿಯೆ, ಮನಸ್ಸಿನ ನೆಮ್ಮದಿ ಹಲವು ಪ್ರಕಾರದ ನೋವುಗಳಿಗೂ ಬ್ರೇಕ್ ಹಾಕಬಹುದು.


ಭಾರತೀಯ ಮೂಲದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೋರೇಟ್ ಯೋಗದ ಸ್ವರೂಪ ಪಡೆದುಕೊಂಡಿದ್ದು ಪ್ರಾಚೀನ ವಿದ್ಯೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಮತ್ತು ಖಿನ್ನತೆಯನ್ನು ಜಾಗ್ರತೆ, ಸಾಮಥ್ರ್ಯ ಮತ್ತು ಅಧಿಕ ಉತ್ಪಾದಕತೆಯನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಕಾರ್ಪೋರೇಟ್ ಯೋಗದಲ್ಲಿ ನೀವು ವ್ಯಯಿಸುವ ಪ್ರತಿ ಸಮಯವು ಉದ್ಯೋಗ ನೀಡುವವರಿಗೆ ಮೂರರಷ್ಟು ಲಾಭ ನೀಡುತ್ತದೆ ಎಂಬುದು ವಾಸ್ತವ ಸಂಗತಿ. ಇದು ಉದ್ಯೋಗಿಗಳ ಸಂತೋಷ ಮತ್ತು ಸೌಖ್ಯದ ಒಂದು ಭಾಗವಾಗಿದ್ದು, ಕಾರ್ಪೋರೇಟ್‍ನಲ್ಲಿ ಯೋಗ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದೊಂದೇ ಪೂರಕವಾಗಿದೆ.


ಏಕ ಬಿಂದು ಮನಸ್ಸಿನ ಕಲೆಯಲ್ಲಿ ನಿಮ್ಮನ್ನು ತರಬೇತುಗೊಳಿಸುವ ಮೂಲಕ ಯೋಗವು ತಕ್ಷಣ ನಿಮ್ಮ ಮಾನಸಿಕ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ. ಯೋಗವು ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸಮನ್ವಯಗೊಳಿಸುತ್ತದೆ. ಇದರಿಂದ ನ್ಯಾಯಸಮ್ಮತ ಮತ್ತು ಸೃಜನಾತ್ಮಕ ಆಲೋಚನೆ ಒಟ್ಟಿಗೆ ಬರುತ್ತದೆ ಸ್ಪೂರ್ತಿಯ ಸ್ಫುರಣೆಗಳು ಸಾಮಾನ್ಯವಾಗಿ ಹೆಚ್ಚಾಗುತ್ತದೆ.


ಯೋಗವು ನಿಮ್ಮ ನರಗಳು, ಎಂಡೋಕ್ರೈನ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ವ್ಯವಸ್ಥೆ ಒಳಗಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇದರಿಂದ ಮಂಪರು ಮತ್ತು ಕ್ಷೋಭೆಗಳು ಜಾಗೃತ ಮತ್ತು ಚೈತನ್ಯವಾಗಿ ಪರಿವರ್ತನೆಗೊಳ್ಳುತ್ತವೆ.


ಯೋಗವು ಮೆದುಳಿಗೆ ಆಮ್ಲಜನಕ ಪೂರೈಕೆ ಮತ್ತು ರಕ್ತದಲ್ಲಿ ಎಂಡೋರ್ ಫೈನ್ ಹೆಚ್ಚಳದ ಮೂಲಕ ಜಡತ್ವ, ಮನೋವಿಕಾರತೆ ಮತ್ತು ಖಿನ್ನತೆಯನ್ನು ಮಾನಸಿಕವಾಗಿ ಪರಿವರ್ತಿಸುತ್ತದೆ.


ಯೋಗವು ಹಲವಾರು ಶಾಖೆಗಳನ್ನು ಒಳಗೊಂಡಿದೆ. ಹಠ ಯೋಗ ಒಂದು ದೈಹಿಕ ವ್ಯಾಯಾಮವಾಗಿದ್ದು, ಮನಸ್ಸು-ದೇಹ-ಉಸಿರಾಟ ಸಂಪರ್ಕದ ಯೋಗ ಏಕಾಗ್ರತೆಯ ಭಾಗವಾಗಿರುತ್ತದೆ. ಪ್ರಾಣ ಜೀವನ ಶಕ್ತಿಯೊಂದಿಗೆ ಪುನಃಶ್ಚೇತನಗೊಳಿಸಿ ಇಡೀ ದೇಹವನ್ನು ವಿಷಮುಕ್ತಗೊಳಿಸುತ್ತದೆ. ಎಲ್ಲ ನರಗಳು ಮತ್ತು ದೇಹದ ವಿವಿಧ ವ್ಯವಸ್ತೆಗಳನ್ನು ಉಪಶಮನಗೊಳಿಸುತ್ತದೆ. ಧ್ಯಾನವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.


ನಮ್ಮ ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತೇವೆ ಎಂಬ ಪ್ರತಿಜ್ಞೆಯನ್ನು ಆನ್‍ಲೈನ್ ಮೂಲಕ ಮಾಡುವ ಅಭಿಯಾನವೂ ನಮ್ಮ ದೇಶದಲ್ಲಿ ನಡೆದಿದೆ. ಒಟ್ಟಿನಲ್ಲಿ ಯೋಗ ಪ್ರತಿ ಪ್ರಜೆಗೂ ತಲುಪಿ ಯೋಗಕ್ಷೇಮದ ಅಭಿವೃದ್ಧಿಯಾಗಲಿ ಎಂಬುದೇ ಎಲ್ಲರ ಆಶಯ.

ಯೋಗ ಫಲಾನುಭವಿಗಳ ನುಡಿ

ಕಳೆದ ಕೆಲವು ತಿಂಗಳುಗಳಿಂದ ಯೋಗ ಕಲಿಯುತ್ತಿದ್ದು ಆಸನ, ಪ್ರಾಣಾಯಾಮ, ಮುದ್ರೆಗಳ ಪ್ರಯೋಜನ ಪಡೆದಿದ್ದೇನೆ. ನಮ್ಮ ಕಚೇರಿಯಲ್ಲೂ ಯೋಗ ಶಿಬಿರ ನಡೆಸಿ ಸರಕಾರಿ ಅಧಿಕಾರಿಗಳು , ಸಿಬ್ಬಂದಿಗಳು ಕೆಲಸದ ಒತ್ತಡದಿಂದ ಚೇತರಿಕೆ ಪಡೆಯಲು ಯೋಗದ ಸಹಾಯ ಪಡೆಯುತ್ತಿದ್ದೇವೆ. ಫಲವು ಸಿಕ್ಕಿದೆ. ಶ್ರದ್ಧೆಯಿಂದ ಅಭ್ಯಾಸ ಮಾಡಿದಲ್ಲಿ ಯೋಗ ಆರೋಗ್ಯಕ್ಕೆ ಸಹಕಾರಿ.
– ಮಾನಸ, ಪ್ರಥಮ ದರ್ಜೆ ಸಹಾಯಕರು 

ಏಳೆಂಟು ವರ್ಷಗಳಿಂದ ಯೋಗಾಭ್ಯಾಸ ನಡೆಸಿ ನನ್ನ ನಿತ್ಯ ಪ್ರಯಾಣದಿಂದಾಗುವ ಒತ್ತಡ, ಬೆನ್ನುನೋವುಗಳಿಗೆ ಪರಿಹಾರ ಕಂಡುಕೊಂಡಿದ್ದೇನೆ. ಪ್ರಯಾಣದಲ್ಲಿ ಮುದ್ರೆಗಳು ಸಹಕಾರಿಯಾಗುತ್ತವೆ. ಯೋಗಕ್ಕೆ ಸ್ವಯಂ ಕಲಿಕೆ ಸೂಕ್ತವಲ್ಲ. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿಯೇ ಕಲಿಯಬೇಕು. ಅಸ್ತಮಾದಂಥ ಕಾಯಿಲೆಗಳಿಗೆ ಯೋಗ ಪ್ರಾಣಾಯಾಮಗಳು ಖಂಡಿತ ಸಹಾಯವಾಗುತ್ತವೆ.
- ಕೆ ವಿ ಪದ್ಮಾವತಿ, ಉಪನ್ಯಾಸಕಿ

ಕ್ರೀಡಾಳುವೂ ಸೈನಿಕನೂ ಆಗಿದ್ದ ನಾನು ಸೈನ್ಯದಲ್ಲಿನ ಕಠಿಣ ವ್ಯಾಯಾಮಗಳಿಗೆ ದೇಹ ಬಗ್ಗಿಸಿಕೊಂಡು ಸಾಕಷ್ಟು ಫಿಟ್ ಇದ್ದೆ. ಸೇವಾ ನಿವೃತ್ತಿಯ ನಂತರ ರಕ್ಷಣಾ ಕಾರ್ಯದ ಹೊಣೆ ಹೊತ್ತ ಬಳಿಕ ಕೆಲಸದ ಒತ್ತಡ, ಜೀವನ ಶೈಲಿಯ ಬದಲಾವಣೆಗಳಿಂದ ಬೆನ್ನು, ಸೊಂಟ ನೋವುಗಳಿಂದ ಬಳಲುತೊಡಗಿ ಆಸ್ಪತ್ರೆವಾಸವೂ ಪ್ರಾಪ್ತವಾಯ್ತು. ಸ್ನೇಹಿತರ ಸಲಹೆಯಂತೆ ಯೋಗಾಭ್ಯಾಸ ಪ್ರಾರಂಭಿಸಿದೆ. ನಾಲ್ಕು ವಾರಗಳಲ್ಲಿ ಸುಧಾರಣೆ ಕಾಣತೊಡಗಿತು. ಆರೇಳು ಕೆ.ಜಿ. (6 ಅಡಿ 94 ಕೆಜಿ) ತೂಕ ಕಡಿಮೆಯಾಗಿ ಸೊಂಟದ 2’’ ಕಡಿಮೆ, ನೋವು ಕಡಿಮೆಯಾಗಿ ಲವಲವಿಕೆ ಕಾಣಿಸಿಕೊಂಡಿದೆ.
– ಮಂಜಪ್ಪ , ಸೆಕ್ಯುರಿಟಿ ಗಾರ್ಡ

ಮಕ್ಕಳ ಹಾಗೂ ಹದಿಹರೆಯದವರ ಮನೋ ಸಂಬಂಧೀ ಕಾಯಿಲೆಗಳಾದ ಏಕಾಗ್ರತೆಯ ಕೊರತೆ, ಅತೀ ಚಟುವಟಿಕೆ, ಆತಂಕಗಳಿಗೆ ನಾನು ಯೋಗವನ್ನೂ ಶಿಫಾರಸು ಮಾಡುತ್ತೇನೆ. ದೈಹಿಕ ಚಟುವಟಿಕೆಗಳಿಂದ ವಂಚಿತರಾದ ಇಂದಿನ ಮಕ್ಕಳಿಗೆ ಯೋಗ ಕಲಿಸುವುದು ಅಪೇಕ್ಷಣೀಯ. ಆದರೆ, ಯೋಗಾಭ್ಯಾಸ ನಿರಂತರ ಜಾರಿಯಲ್ಲಿಟ್ಟರೆ ಮಾತ್ರ ಅದರ ಪೂರ್ಣ ಪ್ರಯೋಜನ ನಮಗೆ ದೊರೆಯಲು ಸಾಧ್ಯ.
- ಶೃತಿ.ಆರ್, ವಿದ್ಯಾರ್ಥಿನಿ

47 ವರ್ಷದ ಗೃಹಿಣಿಯಾದ ನನಗೆ ತೀವ್ರವಾದ ‘ವರ್ಟಿಗೋ’ ಸಮಸ್ಯೆ ಇತ್ತು. ಮಲಗಿ ಏಳುವಾಗ, ಬಗ್ಗಿದಾಗ, ಮೇಲೆ ನೋಡಿದರೆ ತಲೆ ಸುತ್ತಿ ಬರುತ್ತಿತ್ತು. ಯೋಗಾಭ್ಯಾಸ ಪ್ರಾರಂಭಿಸಿ 10 ದಿನಗಳಲ್ಲಿ ಪ್ರಯೋಜನ ಕಾಣತೊಡಗಿ ಈಗ ಆ ಸಮಸ್ಯೆ ಇತ್ತೆಂಬುದೇ ಮರೆತಂತಾಗಿದೆ. ನಿತ್ಯ ಯೋಗವನ್ನು ಶ್ರದ್ಧೆಯಿಂದ ಮಾಡಿ ಪರಿಹಾರ ಪಡೆದ ನಾನು ಯೋಗಕ್ಕೂ ಗುರುವಿಗೂ ಋಣಿಯಾಗಿರುವೆ.
-ಶಾಂತ, ಗೃಹಿಣಿ

ನನಗೆ ಯೋಗದಿಂದ ತುಂಬಾ ಶಕ್ತಿ ಬಂದಿದೆ. ಪ್ರತಿ ವಾರ 4-5 ಗಂಟೆಗಳ ಕಾಲ ಯೋಗ ಮಾಡುತ್ತೇನೆ. ಒತ್ತಡದ ಕೆಲಸವನ್ನು ನಿಭಾಯಿಸುವುದು ಸಾಧ್ಯವಾಗಿದ್ದು ಯೋಗದಿಂದಲೇ. ವಾರಕ್ಕೆ 3-4 ಗಂಟೆಗಳ ಕಾಲ ಯೋಗ ಮಾಡಿದರೆ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗ ಮಾಡುವುದರಿಂದ ಸಿಗುವ ಲಾಭ ಕೂಡಾ ಹೆಚ್ಚು.
- ಚಂದ್ರಶೇಖರ್ ಹೆಚ್, ಉದ್ಯಮಿ 

ಲೇಖನ: ಸುಮಾ ಚಂದ್ರಶೇಖರ್
ಬೆಂಗಳೂರು

Tags: ConcentrationHealthInternational Yoga DayKannada ArticleOxygenPM Narendra Modiಏಕಾಗ್ರತೆಚಿಕಾಗೋ ವಿಶ್ವ ಸಮ್ಮೇಳನಯೋಗಾಭ್ಯಾಸವಿಶ್ವ ಯೋಗದಿನ
Previous Post

The first Indian Naval Air Squadron celebrates its Diamond Jubilee in Kochi

Next Post

ಯೋಗದಿಂದ ಅಂತರಂಗ ಗಟ್ಟಿಗೊಂಡು ಬಹಿರಂಗ ಸೊಗಸಾಗುತ್ತದೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಯೋಗದಿಂದ ಅಂತರಂಗ ಗಟ್ಟಿಗೊಂಡು ಬಹಿರಂಗ ಸೊಗಸಾಗುತ್ತದೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ಸೂಚನೆ

July 25, 2025
Internet Image

ಗಮನಿಸಿ! ಜು.26, 27ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

July 25, 2025

ಶಿವಮೊಗ್ಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೇಂದ್ರದ ಮುಂದೆ ಎಂಪಿ ರಾಘವೇಂದ್ರ ಮಹತ್ವದ ಬೇಡಿಕೆ

July 25, 2025

ವೀಕೆಂಡ್ ನಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಫಿನಾಲೆ | ಯಾರ ಪಾಲಾಗಿದೆ ವಿನ್ನರ್ಸ್ ಮಾಲೆ?

July 25, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಶಾಸಕ ಚನ್ನಬಸಪ್ಪ ಸೂಚನೆ

July 25, 2025
Internet Image

ಗಮನಿಸಿ! ಜು.26, 27ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

July 25, 2025

ಶಿವಮೊಗ್ಗ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೇಂದ್ರದ ಮುಂದೆ ಎಂಪಿ ರಾಘವೇಂದ್ರ ಮಹತ್ವದ ಬೇಡಿಕೆ

July 25, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!