No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 2, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

‘ಯೋಸೆಮಿಟಿ’ ಪ್ರವಾಸಿಗರ ಸಾಹಸಿ ಸ್ವರ್ಗ

kalpa News by kalpa News
October 24, 2019
in Special Articles
0
Share on FacebookShare on TwitterShare on WhatsApp

ಅಮೆರಿಕಾ, ಎಲ್ಲರಂತೆ ನಮಗೆಲ್ಲ ಚಿಕ್ಕಂದಿನಿಂದಲೂ ಕುತೂಹಲ ಹುಟ್ಟಿಸಿದ ದೇಶ. ವಿದೇಶ ಅಂದ್ರೆ ಅಮೆರಿಕಾ! ಮತ್ತೆ ತಪ್ಪಿದರೆ ಲಂಡನ್! ಇವೆರಡೇ ನಮ್ಮ ಕಿವಿಗೆ ಬೀಳುತ್ತಿದ್ದ ಹೆಸರುಗಳು!

ಈಗ ಬಿಡಿ ಫಾರಿನ್ ಅಂದ್ರೆ ಅಡುಗೆ ಮನೆ, ನಡುಮನೆ ಆಗಿಬಿಟ್ಟಿದೆ. ನಾನು ಮೊದಲ ಬಾರಿ ಅಮೆರಿಕಾ ಭೇಟಿ ನೀಡಿದಾಗ ನನಗೆ ಪ್ರವಾಸ ಪ್ರಸಿದ್ಧ ತಾಣಗಳನ್ನ ನೋಡಲು ನ್ಯೂಯಾರ್ಕ್, ವಾಷಿಂಗ್ಟನ್, ನಯಾಗರಾ ಫಾಲ್ಸ್ ಬಿಟ್ಟರೆ ಬೇರೆ ಕಡೆ ತಿರುಗಲು ಆಗಿರಲಿಲ್ಲ.

ಈ ಬಾರಿ ತುಸು ಸಿದ್ಧನಾಗಿಯೇ ಹೊರಟೆ. ಮೊದಲ ಛಾನ್ಸ್‌ ಸಿಕ್ಕಿದ್ದು ಪ್ರಸಿದ್ಧ ಯೊಸಮಿಟಿ ರಾಷ್ಟ್ರೀಯ ಉದ್ಯಾನಕ್ಕೆ!

ಕ್ಯಾಲಿಫೋರ್ನಿಯಾದ ಮಾರಿಪೋಸ ಜಿಲ್ಲೆಯಲ್ಲಿ ಹರಡಿಕೊಂಡಿದೆ. ಸುಮಾರು 1,169 ಚದರಮೈಲಿಗಳ ವ್ಯಾಪ್ತಿ ಹೊಂದಿದೆ. 1890ರಲ್ಲಿ ರಾಷ್ಟ್ರೀಯ ಉದ್ಯಾನವಾಗಿ ಮನ್ನಣೆ ನೀಡಲಾಯಿತು. ನಿಸರ್ಗಪ್ರಿಯರು, ಶಿಲಾ ವಿಜ್ಣಾನಿಗಳು, ಪ್ರವಾಸಪ್ರಿಯರು ಈ ತಾಣಕ್ಕೆ ಆಗಿನಿಂದಲೇ ಮುಗಿಬಿದ್ದರು.


ನಂತರ ಮೊದಲಿಗೆ ಏಕಶಿಲಾ ವೈಭವ ನಮ್ಮ ಕಣ್ಣುಗಳನ್ನ ಸರಕ್ಕನೆ ಸೆಳೆಯುತ್ತದೆ. ಅದೇ ಎಲ್ ಕ್ಯಾಪಿಟಾನ್. ನಮ್ಮ ವೀಕ್ಷಣೆಗೆ ಸಿಗುವ ಹಾಫ್ ಡೋಮ್ ಶಿಲಾಗೋಳವು ನಮಗೆ ಹೋರಿಯ ಬೆನ್ನ ಹಿಣಿಲಿನಂತೆ ಭಾಸವಾಗುತ್ತದೆ. ಅಮೆರಿಕನ್ನರು ಅದನ್ನ ಹಾಫ್ ಡೋಮ್ ಎಂದು ಹೆಸರಿಸಿದ್ದಾರೆ.


ಅಮೆರಿಕನ್ ಇಂಡಿಯನ್’ರ ಜನಪದ ಐತಿಹ್ಯವು ಒಂದು ಕುತೂಹಲದ ಕತೆಯನ್ನೇ ಹೇಳುತ್ತದೆ. ಒಮ್ಮೆ ಪತಿಪತ್ನಿಯರಿಗೂ ವಾಗ್ಯುದ್ಧ, ಕಾದಾಟ ನಡೆಯಿತಂತೆ. ಅಸಮಾಧಾನಗೊಂಡ ದೈವಗಳು ಅವರೀರ್ವರನ್ನೂ ಕಲ್ಲಾಗಿ ಮಾರ್ಪಾಡು ಮಾಡಿದವಂತೆ. ಒಂದನ್ನ ಹಾಫ್ ಡೋಮ್ ಅಂತಲೂ ಇನ್ನೊಂದು ಭಾಗವನ್ನ ನಾರ್ತ್ ಡೋಮ್ ಅಂತಲೂ ಹೆಸರಿಸಲಾಗಿದೆ.

ಶಿಲಾವಿಜ್ಞಾನಿಗಳು ಭೂಗರ್ಭದೊಳಗೆ ಐದು ಮೈಲಿಗಳಲ್ಲಿ ಗ್ರಾನೈಟ್ ಶಿಲೆಗಳು ಘನೀಕೃತಗೊಂಡಿವೆ. ಮೇಲ್ಪದರದ ಶಿಲೆ ಸವಕಳಿಯಾಗಿದೆ. ಗ್ರಾನೈಟ್ ಶಿಲೆಗಳು ಈಗಿನ ಸ್ವರೂಪದಲ್ಲಿ ನಿಂತಿವೆ ಎಂದು ಅಭಿಪ್ರಾಯ ಪಡುತ್ತಾರೆ.

ಶಿಲಾರೋಹಿಗಳಿಗೆ ಸವಾಲು!
ಶಿಖರವೇರುವ ಸಾಹಸಿಗರಿಗೆ 1868 ರಲ್ಲಿ ಒಂದು ಪಂಥಾಹ್ವಾನ ನೀಡಲಾಯಿತಂತೆ. ಹಾಫ್ ಡೋಮ್ ಮೇಲೆ ಯಾರೂ ಕಾಲಿಡುವ ಸಾಹಸ ಮಾಡುವುದಿಲ್ಲ ಎಂದು ಯೊಸಮಿಟಿ ಗೈಡ್ ಪುಸ್ತಕದಲ್ಲಿ ಅಸಾಧ್ಯವೆಂಬಂತೆ ಬರೆದಿದ್ದರು. ಆ ಸವಾಲನ್ನ ಸ್ವೀಕರಿಸಿ 1875 ರಲ್ಲಿ ಜಾರ್ಜ್ ಅಂಡರ್ಸನ್ ಎಂಬ ಸಾಹಸಿಗ ಅದರ ತುದಿಗೇರಿ ಬಾವುಟನೆಟ್ಟ.

ನಂತರ ಬಹಳಷ್ಟು ಸಾಹಸಿಗರು ಆತನನ್ನ ಅನುಸರಿಸಿದರು. ನಮಗೆ ಸಿಗುವ ಮೊದಲ ತಾಣವೇ ಬ್ರೈಡಲ್ ವೈಲ್(Bridal veil falls) ಜಲಪಾತ. ಸುಮಾರು 2,450 ಅಡಿಗಳಷ್ಟು ಎತ್ತರವಿದೆ.


ಮದುವಣಗಿತ್ತಿಯ ಮೋರೆ ಮುಚ್ಚುವ ತೆಳು ಮೇಲುದದಂತೆ ನೀರು ಧಾರೆಯಾಗಿ ಬೀಳುತ್ತದೆ.


ತೆನಾಯ ಸರೋವರ ನೋಡಲು ತೆರಳುವ ಮಾರ್ಗದಲ್ಲಿ ವೀಕ್ಷಣಾ ತಾಣ ಇದೆ. ಅಲ್ಲಿ ಉದ್ಯಾನದವರೇ ದೂರದರ್ಶಕ ಸೌಲಭ್ಯವಿರಿಸಿದ್ದಾರೆ. ಅಲ್ಲಿಂದ ಹಾಫ್ ಡೋಮ್ ಶಿಲಾಗೋಳದ ಆರೋಹಣ ಮಾಡುತ್ತಿರುವ ಚಾರಣಿಗರು ನಮ್ಮ ಕಣ್ಣಿಗೆ ಇರುವೆಗಳಂತೆ ಕಂಡುಬರುತ್ತಾರೆ. ಒಂದುಕ್ಷಣ ವಾಹ್. ಅದ್ಭುತ! ಎಂದು ನಮಗರಿವಿಲ್ಲದೇ ಉದ್ಗರಿಸುತ್ತೇವೆ.

ಈ ಆರೋಹಣ ಎಲ್ಲದರಂತೆ ಸುಲಭವಲ್ಲ, ಪ್ರಾಣಾಂತಿಕ. ಪ್ರತೀವರ್ಷ ಹತ್ತರಿಂದ ಹನ್ನೆರಡು ಮಂದಿ ಸಾಹಸಿಗರು ಜಾರಿಬಿದ್ದು ಜೀವ ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.

ಅಬ್ರಾಹಾಂ ಲಿಂಕನ್ ಅವರ ಅಧ್ಯಕ್ಷೀಯ ಅವಧಿಯಲ್ಲಿ(ಕ್ರಿಶ 1864) ನಿಸರ್ಗದ ಈ ಸುಂದರತಾಣ ಸಂರಕ್ಷಣೆ ಕಾನೂನಿಗೊಳಪಟ್ಟಿತು. ಈಗ ವರ್ಷವೊಂದಕ್ಕೇ ಸುಮಾರು ನಾಲ್ಕು ಮಿಲಿಯನ್ನಿಗೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಎಲ್ಲೆಲ್ಲೂ ಪೈನ್ ವೃಕ್ಷಗಳು ಗಗನಕ್ಕೆ ಚಾಚಿನಿಂತು ಹಸಿರ ಸೈನಿಕ ಪಡೆಯಂತೆ ಗೋಚರಿಸುತ್ತವೆ. ಕೆಲವೆಡೆ ಸೂರ್ಯರಶ್ಮಿ ತೂರಿ ಬರಲು ಸಾಧ್ಯವಿಲ್ಲ. ಅಷ್ಟುದಟ್ಟ ನೇರ ನಿಂತಿವೆ.

ನಿಸರ್ಗ ಪ್ರಿಯ ಲೇಖಕ ಜಾನ್ ಮುಯಿರ್ ಪ್ರಕೃತಿಯೇ ಮೈವೆತ್ತ ಈ ಪ್ರದೇಶವನ್ನು ಯಾವುದೇ ಮನುಷ್ಯ ಶಿಲ್ಪಿ ಕಡೆದ ದೇವಾಲಯವನ್ನ ಈ ನಿಸರ್ಗ ಆಲಯಕ್ಕೆ ಹೋಲಿಸಲಾಗದು ಎಂದು ಹಾಡಿ ಹೊಗಳಿದ್ದಾನೆ.

ಇನ್ನೂ ಒಂದು ಕಣ್ಮನಸೆಳೆಯುವ ತಾಣ, ಗ್ಲೆಸಿಯರ್ ಪಾಯಿಂಟ್. ಇದು ಉದ್ಯಾನದ ನೆತ್ತಿಯ ಭಾಗ. ಸುಮಾರು 5000 ಅಡಿಗಳಷ್ಟು ಎತ್ತರದಲ್ಲಿದೆ. ಡಿಸೆಂಬರ್ ಮಾಹೆ ಹಿಮಸುರಿವ ವೇಳೆ ಐಸ್ ಕ್ರೀಂ ಸಿಂಪಡಿಸಿದ ದುಂಡು ಕೇಕಿನಂತೆ ಕಲ್ಲು ಬಂಡೆಗಳು ತಮ್ಮ ಸ್ವರೂಪ ಬದಲಾಯಿಸಿ ಪ್ರವಾಸಿಗರ ನೋಟ ಅಪಹರಿಸುತ್ತವೆ.

ಹಿಮಪಾತವಾದಾಗ ಬಹಳಕಡೆ ಮಾರ್ಗಗಳು ಬಂದ್! ಕೆಲವೆಡೆಯಿಂದ ಮಾತ್ರ ಚಾರಣಿಗರಿಗೆ ಪ್ರವೇಶ. ಈ ಬಗ್ಗೆ ಪಾರ್ಕ್ ಪ್ರಾಧಿಕಾರ ಆಗಾಗ್ಗೆ ಮಾಹಿತಿ ಪ್ರಕಟಿಸುತ್ತಿರುತ್ತದೆ. ಪ್ರವಾಸಿಗಳು ಇದನ್ನು ಗಮನಿಸಿಯೇ ವಾಹನ ಚಾಲನೆ ಮಾಡಬೇಕು.


ನೆವಡಾ ಮತ್ತು ವರ್ನಲ್ ಜಲಪಾತಗಳು ಬೇರೆಬೇರೆಯಾಗಿ ಧುಮುಕುತ್ತವೆ. ಮುಂದೆ ಅವು ಮರ್ಸೆಡ್ ನದಿಯ ಭಾಗವಾಗುತ್ತವೆ. ಯೋಸೆಮಿಟಿ ಜಲಪಾತವು ಇಲ್ಲಿನ ಪ್ರಮುಖ ಆಕರ್ಷಣೆ. ಮಳೆಬಿದ್ದರೆ, ಹಿಮಪಾತವಾದರೆ ಅದು ಹಾಲಿನ ನೊರೆಯಂತೆಯೇ ಕಾಣುತ್ತದೆ.


ಅದು ಅಮೆರಿಕಾ ದೇಶದ ಅತಿದೊಡ್ಡ ಜಲಪಾತ. ಜಗತ್ತಿನಲ್ಲಿ ಐದನೆಯದು. (ಕೆಲವು ತಿಂಗಳುಗಳಲ್ಲಿ ಬತ್ತಿ ಅದೃಶ್ಯವಾಗಿರುತ್ತದೆ.) ಇದೂ ಮುಂದೆ ಮರ್ಸೆಡ್ ನದಿಗೆ ಸೇರಿಕೊಂಡು ಯೊಸೆಮಿಟಿ ಕಣಿವೆಯಲ್ಲಿ ವೈಯಾರದಿಂದ ಹರಿಯುತ್ತದೆ.


ಮರ್ಸೆಡ್ ನದಿ… ಯೊಸೆಮಿಟಿ ರಾಷ್ಟ್ರೀಯ ಉದ್ಯಾನಕ್ಕೆ ಸಾಗುವ ಮಾರ್ಗದಲ್ಲಿ ಗುಂಟವೇ ನಮ್ಮ ಎಡ ಮತ್ತು ಬಲಬದಿ ಜತೆಗೇ ಇರುತ್ತದೆ. ಜುಳುಜುಳು ಸದ್ದಿನೊಂದಿಗೆ ಕಣಿವೆಯ ತುಂಬ ಹರಿಯುತ್ತದೆ. ಸ್ಫಟಿಕದಂತೆ ಸ್ವಚ್ಛ. ತುಂಗೆಯಂತೆ ಸಿಹಿ.ಅದರ ಆಜೂಬಾಜಿನಲ್ಲೇ ಪ್ರವಾಸಿಗರು ಊಟ್ ಉಪಾಹಾರ ಸೇವನೆ ಮಾಡಬಹುದಾಗಿದೆ. ಅದೂ ಪಿಕ್ನಿಕ್ ಏರಿಯಾ ಅಂತ ಸೂಚನಾಫಲಕಗಳಿವೆ. ಅಲ್ಲಿಯೇ ಊಟ ತಿಂಡಿ ಸೇವನೆ. ಪರಿಸರ ಸ್ವಚ್ಛತೆಗೆ ಆದ್ಯತೆ. ಯೊಸೆಮಿಟಿ ಉದ್ಯಾನವನ ವೀಕ್ಷಣೆಗೆ ಕನಿಷ್ಠ ಒಂದು ವಾರವಾದರೂ ಬೇಕು. ಕೈಕಾಲು ಘಟ್ಟಿಯೂ ಇರಬೇಕು. ಸಾಹಸೀ ಮನೋಭಾವವಿರುವವರಿಗೆ ಮಾತ್ರ ಇದು ಮೈ ಚಳಿ ಬಿಡಿಸುತ್ತದೆ.

ಸುಮ್ಮನೆ ಕೂತು ನೋಡುವ ಯಾವ ಸ್ಥಳವೂ ಇಲ್ಲಿಲ್ಲ. ನಡೆಯಬೇಕು, ಹತ್ತಬೇಕು ಮತ್ತೆ ಇಳಿಯಬೇಕು. ದೇಹ ಬಗ್ಗಿಸಿ, ಕುಗ್ಗಿಸಿ ಉಸಿರು ಬಿಗಿ ಹಿಡಿದು ನಂತರ ಸಿಗುವ ಮನೋಲ್ಲಾಸ ಅನುಭವಿಸಬೇಕು. ಆಗ ಮಾತ್ರ ದೈತ್ಯ ಯೋಸೆಮಿಟಿ ನಮಗೆ ಆಪ್ತತೆಯ ಅನುಭವ ನೀಡುತ್ತದೆ. ವಿಸಿಟರ್ಸ್ ಸೆಂಟರ್’ನಲ್ಲಿ ಪ್ರವಾಸಿಗರು ತಮಗೆ ಅಗತ್ಯವಾದ ಮಾಹಿತಿ ಪಡೆಯಬಹುದು.


ಅಲ್ಲಿನ ಮ್ಯೂಸಿಯಂ ಕೂಡ ಯೊಸೆಮಿಟಿ ಬಗ್ಗೆ ಸಾಂಕೇತಿಕ ವಸ್ತು ಮತ್ತು ಮಾದರಿ ವಿನ್ಯಾಸಗಳ ಮೂಲಕ ಅರ್ಥೈಸಲು ಸಹಕಾರಿಯಾಗಿದೆ.
ಯೋಸೆಮಿಟಿಯನ್ನು ಒಂದು ಪುಟ್ಟಬರಹದಲ್ಲಿ ಅಡಗಿಸಿಡಲು ಅಸಾಧ್ಯ. ಅಂತಹ ದೈತ್ಯ ನಿಸರ್ಗದ ಮಡಿಲು. ಒಬ್ಬೊಬ್ಬರಿಗೂ ಒಂದೊಂದು ದಿವ್ಯ ಅನುಭವ ನೀಡುವುದಂತೂ ಸತ್ಯ. ಸೌಂದರ್ಯ ಗುರು ಪ್ರಕೃತಿ ಮಂಕುತಿಮ್ಮ ಎಂಬ ದಾರ್ಶನಿಕ ಡಿವಿಜಿ ಅವರ ನುಡಿಗಳಿಗೆ ಇದು ಸಾದೃಶವಾದ ಸ್ಥಳ.

ಯೋಸೆಮಿಟಿ… ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ 287 ಮೈಲುಗಳ ದೂರದಲ್ಲಿದೆ. ಅಲ್ಲಿ ಪ್ರವೇಶ ದ್ವಾರದಲ್ಲಿ ಟಿಕೀಟು ಪಡೆದ ಮೇಲೆ ಎಲ್ ಕ್ಯಾಪಿಟಾನ್ ನಿಲ್ದಾಣದಿಂದ ಉಚಿತ ಬಸ್ ಸೌಕರ್ಯವಿದೆ.


ಈ ಎಲ್ಲ ಮುಂಜಾಗ್ರತೆ ಇರಲಿ

  • ಇದು ಕರಡಿಗಳ ಪ್ರದೇಶ, ಜಾಗ್ರತೆ. ವನ್ಯಪ್ರಾಣಿಗಳನ್ನು ಹಿಂಸಿಸಬಾರದು. ವಾಹನ ಚಾಲನೆಯಲ್ಲಿ ಅತಿವೇಗ ಬೇಡ. ಅವುಗಳಿಗೆ ಆಹಾರ ತೋರಿಸಿ ಕರೆದರೆ ನಿಮಗೆ 5000 ಡಾಲರ್ ದಂಡ ವಿಧಿಸಲಾಗುತ್ತದೆ.
  • ನದಿಗಳ ನೀರು ಹಿಮದಷ್ಟು ಕೊರೆಯುತ್ತವೆ. ನೀರಿನಲ್ಲಿ ಕಾಲಿಟ್ಟರೆ ಪಾಚಿ
    ಕಟ್ಟಿರುವ ಕಲ್ಲುಗಳು ಜಾರಿ ಬೀಳಿಸುತ್ತವೆ.
  • ಹಠಾತ್ತನೆ ಬದಲಾಗುವ ವಾತಾವರಣಕ್ಕೆ ಹೊಂದಿಕೊಳ್ಳುವಂತಿರಬೇಕು.
  • ಪ್ಲಾಸ್ಟಿಕ್ ನಿಷೇಧ.
  • ಕೈತಪ್ಪಿ ಕಸ ಹಾಕಿದಿರೋ ದಂಡ ತೆರಬೇಕಾಗುತ್ತದೆ.
  • ಪಿಕ್ನಿಕ್ ಏರಿಯಾ ಎಂಬ ಫಲಕವಿರುವೆಡೆ ಮಾತ್ರ ಊಟ ಉಪಾಹಾರ ಸೇವನೆಗೆ ಅವಕಾಶ. ರೆಸ್ಟ್‌ ರೂಮ್ ಸೌಕರ್ಯ.
  • ಸಾಕಷ್ಟು ಆಹಾರ ಪಾನೀಯ ಜತೆಗಿದ್ದರೆ ನಿಮಗೆ ಹಣ ಉಳಿತಾಯ.
  • ಭೇಟಿ ತಿಂಗಳು: ಮಾರ್ಚ್ ಏಪ್ರಿಲ್ ಮತ್ತು ಸೆಪ್ಟೆಂಬರ್ ಅಕ್ಟೋಬರ್.
  • ಹೋಂ ಸ್ಟೇ ಮತ್ತು ವಸತಿ ಸೌಲಭ್ಯಗಳಿವೆ
  • ಮುಂಚೆಯೇ ಬುಕ್ ಮಾಡಿದರೆ ನಿಮ್ಮ ಪ್ರವಾಸ ಸುಖದಾಯಕ.
  • ನಿಮ್ಮ ಆರೋಗ್ಯ ನಿಮ್ಮ ಕೈಲಿ. ಆಹಾರದಲ್ಲಿ ನಿಯಂತ್ರಣವಿರಲಿ.
ವಸತಿ ಸೌಕರ್ಯ ಮತ್ತು ಹೆಚ್ಚಿನ ಮಾಹಿತಿಗೆ:
Yosemite National Park
CA 953890577
2093720200 ಅಥವಾ
TTY 2093724726
www.nps.gov/yose
ಸಂಪರ್ಕಿಸಬಹುದು

ಲೇಖನ: ಡಾ.ಚನ್ನಗಿರಿ ಸುಧೀಂದ್ರ

Tags: Abraham LincolnAdventurerAmericaDr Channagiri SudheendraTouristWashingtonYosemiteYosemite National Parkಅಬ್ರಾಹಾಂ ಲಿಂಕನ್ಅಮೆರಿಕಾವಾಷಿಂಗ್ಟನ್ಶಿಲಾರೋಹಿ
Share236Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಮಹಾರಾಷ್ಟ್ರ ಚುನಾವಣೆ: ಮತ್ತೆ ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ

Next Post

ಪ್ರವಾಹ ಸಂತ್ರಸ್ತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದಿರಿ: ಸಚಿವ ಈಶ್ವರಪ್ಪ ಎಚ್ಚರಿಕೆ

kalpa News

kalpa News

Next Post

ಪ್ರವಾಹ ಸಂತ್ರಸ್ತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದಿರಿ: ಸಚಿವ ಈಶ್ವರಪ್ಪ ಎಚ್ಚರಿಕೆ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL