ಮಲಗಿದ್ದ ಸಿಂಹವನ್ನು ಬಡಿದೆಬ್ಬಿಸಿ, ಅದನ್ನು ಗಾಯಗೊಳಿಸಿ ವ್ಯಘ್ರಗೊಳಿಸಿರುವ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತದೆ ಒಮ್ಮೆ ನೆನೆಸಿಕೊಳ್ಳಿ… ಅದೇ ಪರಿಸ್ಥಿತಿ ಭಾರತವನ್ನು ಕೆಣಕಿದ ಪಾಕಿಸ್ಥಾನಕ್ಕೂ ಶೀಘ್ರದಲ್ಲೇ ಬರಲಿದೆ.. ಇದನ್ನೊಮ್ಮೆ ಕಲ್ಪಿಸಿಕೊಳ್ಳಿ…
ತಮ್ಮದೊಂದು ರಾಷ್ಟ್ರ(?)ವಿದೆ, ತಮ್ಮದೊಂದು ಧರ್ಮ(?)ವಿದೆ, ತಮ್ಮದೊಂದು ಜೀವನ(?)ವಿದೆ. ಬಾಯಿ ಮುಚ್ಚಿಕೊಂಡು ಅದನ್ನು ಮಾಡಿಕೊಂಡು ಹೋಗಬೇಕು. ಆದರೆ, ಸುಖಾಸುಮ್ಮನೇ ಅನಾವಶ್ಯಕ ದಾಳಿ ನಡೆಸಿ ನಮ್ಮ 42 ಯೋಧರನ್ನು ಬಲಿ ಪಡೆಯುವ ಕ್ರೂರ ಕೃತ್ಯಕ್ಕೆ ಕೈ ಹಾಕುವ ಮೂಲಕ ಬಹಳ ದೊಡ್ಡ ತಪ್ಪನ್ನು ಪಾಕಿಸ್ಥಾನ ಮಾಡಿದೆ. ನಿಜಕ್ಕೂ ಹೇಳುತ್ತೇನೆ ಇದಕ್ಕೆೆ ಪಾಕ್ ತೆರುವ ಬೆಲೆಯೂ ಅಷ್ಟೆ ದೊಡ್ಡದಾಗಿದ್ದು, ಇದು ಜಾಗತಿಕ ಮಟ್ಟದಲ್ಲಿ ಒಂದು ಪಾಠವಾಗುವುದು ನಿಶ್ಚಿತ.
ನೆನಪಿರಲಿ… ನಮ್ಮ ಯೋಧರಿಗೆ ಏನಾದರೂ ಆಗಲಿ ಎಂದು ಕೈಕಟ್ಟಿ ಕುಳಿತುಕೊಳ್ಳಲು ಈಗಿರುವುದು ರಿಮೋಟ್ ಕಂಟ್ರೋಲ್ ಸರ್ಕಾರವಲ್ಲ. ದೇಶಕ್ಕಾಗಿ ತಮ್ಮನ್ನೇ ಅರ್ಪಿಸಿಕೊಂಡಿರುವ ನರೇಂದ್ರ ಮೋದಿ ಎಂಬ ಪುರುಷ ಸಿಂಹ ಪ್ರಧಾನಿಯಾಗಿರುವ ಸರ್ಕಾರ. ಪಾಕಿಸ್ಥಾನವನ್ನು ಸುಮ್ಮನೆ ಬಿಡುವ ವಿಚಾರವೇ ಇಲ್ಲ ಈಗ…
ಪ್ರತೀಕಾರದ ಕಿಚ್ಚು ಒಡಲೊಳಗೆ ಇದ್ದರೂ, ಆಡಳಿತಾತ್ಮಕ ಮುಖ್ಯಸ್ಥರಾಗಿ ಮೋದಿ ಈಗಾಗಲೇ ಎಲ್ಲ ರೀತಿಯ ರಾಜತಾಂತ್ರಿಕ ನಡೆಗಳನ್ನು ಇಡಲು ಆರಂಭಿಸಿದ್ದಾರೆ. ಈಗಾಗಲೇ, ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ಬಹಿರಂಗವಾಗಿ ಮೋದಿ ಘೋಷಣೆ ಮಾಡಿದ್ದು, ಈ ತಪ್ಪನ್ನು ಮಾಡಿದವರು ಹಾಗೂ ಇದನ್ನು ಬೆಂಬಲಿಸಿದವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಘರ್ಜಿಸಿದ್ದಾರೆ.
ಪಾಪಿ ಪಾಕಿಸ್ಥಾನಿಗಳೇ,
ನಮ್ಮ ಯೋಧರನ್ನು ಭೀಕರವಾಗಿ ಹತ್ಯೆ ಮಾಡಿ, ಇದಕ್ಕೆ ನಮ್ಮ ದೇಶದೊಳಗಿದ್ದೇ ಬೆಂಬಲ ನೀಡಿದವರೆಲ್ಲಾ ಗೆದ್ದೆವೆಂದು ಬೀಗುವ ಮುನ್ನ, ನಿಮ್ಮ ಮುಂದಿನ ಪರಿಸ್ಥಿತಿಯನ್ನು ಒಮ್ಮೆ ನೀವೇ ಕಲ್ಪನೆ ಮಾಡಿಕೊಳ್ಳಿ… ಮಲಗಿದ್ದ ಸಿಂಹವನ್ನು ಕೆಣಕಿ ಗಾಯಗೊಳಿಸಿದ್ದೀರಿ. ಅದು ಈಗ ವ್ಯಘ್ರವಾಗಿದೆ. ನಿಮ್ಮ ರಕ್ತ ಕುಡಿಯದೇ ಬಿಡುವುದಿಲ್ಲ..
ನಮ್ಮನ್ನು ಕೆಣಕಿ ನೀವು ನೆಮ್ಮದಿಯಾಗಿರಬಹುದು ಎಂದಕೊಳ್ಳಬೇಡಿ. ಈಗಾಗಲೇ ನಿಮ್ಮ ಸಮಾಧಿಗೆ ವೇದಿಕೆ ಸಿದ್ದವಾಗುತ್ತಿದೆ. ಮೊನ್ನೆಯ ಘಟನೆಯಿಂದಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಬೆನ್ನಿಗೆ ನಿಂತಿವೆ. ಇದು ರಾಜತಾಂತ್ರಿಕವಾಗಿ ನಿಮ್ಮನ್ನು ಮತ್ತಷ್ಟು ಬಿಕಾರಿಯನ್ನಾಗಿಸುತ್ತವೆ. ಇಸ್ರೇಲ್ ಸಹ ಭಾರತದ ಬೆನ್ನಿಗೆ ನಿಂತಿದ್ದರೆ, ಉಗ್ರರ ಪೋಷಣೆಯನ್ನು ನಿಲ್ಲಿಸುವಂತೆ ಅಮೆರಿಕಾ ನಿಮಗೆ ಎಚ್ಚರಿಕೆ ನೀಡಿರುವುದು, ಅದೂ ಸಹ ಭಾರತದೊಂದಿಗೆ ಇದೆ ಎನ್ನುವುದು ಸ್ಪಷ್ಟ.
ನಿಮಗೆ ನೀಡಿದ್ದ ಪರಮಾಪ್ತ ಸ್ಥಾನವನ್ನು ಮೋದಿ ಹಿಂಪಡೆದಿದ್ದಾರೆ. ನಿಮ್ಮ ಜೊತೆಗಿನ ವ್ಯಾಪಾರ ವ್ಯವಹಾರಗಳು ಬಂದ್ ಆಗಲು ಆರಂಭವಾಗಿವೆ. ಇದು ನಿಮ್ಮ ಆರ್ಥಿಕತೆಯ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಚಿಂತಿಸಿ.. ಒಟ್ಟಾರೆಯಾಗಿ ರಾಜತಾಂತ್ರಿಕವಾಗಿ ನೀವು ಬೇವರ್ಸಿಯಾಗುತ್ತಿರುವುದು ನಿಶ್ಚಿತ.
ಇನ್ನು, ನಿಮ್ಮ ಯೋಗ್ಯತೆಯನ್ನೊಮ್ಮೆ ನೋಡಿಕೊಳ್ಳಿ. ಈಗಾಗಲೇ ನಿಮ್ಮಲ್ಲಿ ದೇಶ ನಡೆಸಲು ಹಣವಿಲ್ಲದೇ, ಕಂಡ ಕಂಡ ರಾಷ್ಟçಗಳ ಬಳಿ ಭಿಕ್ಷೆ ಬೇಡಿ ಬದುಕುವ ಸ್ಥಿತಿಗೆ ಬಂದಿದ್ದೀರೀ. ಆದರೂ ಉಗ್ರರನ್ನು ಪೋಷಣೆ ಮಾಡುವ ಶೋಕಿ ಬೇರೆ ನಿಮಗೆ. ನಿಮ್ಮದೇನಾದರೂ ಸ್ವಂತ ಸಾಧನೆ ಎನ್ನುವುದು ಇದೆಯೇ? ಕಂಡ ಕಂಡ ರಾಷ್ಟ್ರಗಳಿಂದ ಸಹಾಯಧನ ಪಡೆದು ದೇಶ ನಡೆಸುವುದಕ್ಕಿಂತಲೂ ಸೂಳೆಗಾರಿಕೆಯೇ ಮೇಲು.
ವಾಸ್ತವವಾಗಿ ನಮ್ಮ ಸೈನಿಕರನ್ನು ನಿಮ್ಮ ಬಗ್ಗೆ ಇರುವ ಆಕ್ರೋಶದ ಕಿಚ್ಚು ಎಂತಹದ್ದು ಎನ್ನುವುದು ನಿಮಗೆ ತಿಳಿದಿಲ್ಲ. ಉರಿ ಸೆಕ್ಟರ್ ಮೇಲಿನ ದಾಳಿ ನಡೆದ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್’ನಲ್ಲಿ ನಮ್ಮ ಒಬ್ಬನೇ ಒಬ್ಬ ಯೋಧ ಪ್ರಾಣತ್ಯಾಗ ಮಾಡದೇ ನಿಮ್ಮವರನ್ನೆಲ್ಲಾ ಬಲಿ ಹಾಕಿದ್ದು ನಮ್ಮ ಸೇನೆಯ ತಾಕತ್ತು ಅರ್ಥವಾಗುತ್ತದೆ.
ನಮ್ಮ ಪ್ರಧಾನಿ ಹೇಳಿದಂತೆ ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟಿರಿ. ಪರಿಣಾಮ ಎದುರಿಸಲು ಸಿದ್ದವಾಗಿ. ಈಗ ನಮ್ಮ ದೇಶ ಹಾಗೂ ಸೇನೆ ನೀಡುವ ಪ್ರತ್ಯುತ್ತರಕ್ಕೆ ಬೇವರ್ಸಿಗಳಂತೆ ಜೀವ ಉಳಿಸಿಕೊಳ್ಳಲು ಅಲೆದಾಡುವ ಪರಿಸ್ಥಿತಿ ಬರುವುದು ನಿಶ್ಚಿತ..
ಉರಿ ದಾಳಿಯಲ್ಲಿ ವೀರಸ್ವರ್ಗ ಸೇರಿದ್ದ 7 ಯೋಧರು. ಅಷ್ಟಕ್ಕೆ ನಮ್ಮ ಪ್ರತಿಕ್ರಿಯೆ ಹಾಗಿತ್ತು. ಈಗ ಅದರ ಆರು ಪಟ್ಟು ಯೋಧರನ್ನು ಬಲಿ ಪಡೆದಿದ್ದೀರಿ. ಈಗ ನಮ್ಮ ಸೇನೆಯ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ನಿಮ್ಮ ಕಲ್ಪನೆಗೇ ಬಿಡುತ್ತೇವೆ.
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post