ನವದೆಹಲಿ: ಇಂದು 5ನೆಯ ವಿಶ್ವ ಯೋಗ ದಿನವನ್ನು ಜಗತ್ತಿನಾದ್ಯಂತ ಆಚರಿಸುತ್ತಿದ್ದು, ಭಾರತೀಯ ಸೇನೆಯ ಎಲ್ಲ ವಿಭಾಗದ ಯೋಧರು ವಿಶಿಷ್ಟ ರೀತಿಯಲ್ಲಿ, ವಿಭಿನ್ನ ಪ್ರದೇಶಗಳಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಭಾರತದ ಸಂಸ್ಕೃತಿಗೆ ಗೌರವ ನೀಡಿದ್ದಾರೆ.
ಇದಕ್ಕೆ ಪೂರಕವಾಗಿ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿರುವ ನಾಯಿ ಹಾಗೂ ಕುದುರೆಗಳೂ ಸಹ ಯೋಗಾಭ್ಯಾಸ ಮಾಡಿವೆ ಎಂದರೆ ನೀವು ನಂಬಲೇಬೇಕು.
ಅರುಣಾಚಲ ಪ್ರದೇಶದ ಲೋಹಿತ್’ಪುರದಲ್ಲಿರುವ ಐಟಿಬಿಪಿ ಎಟಿಎಸ್ ವಿಭಾಗದ ಯೋಧರೊಂದಿಗೆ ಇದೇ ಬೆಟಾಲಿಯನ್’ನಲ್ಲಿರುವ ತನಿಖಾ ಶ್ವಾನಗಳೂ ಸಹ ಯೋಗಾಭ್ಯಾಸ ಮಾಡುವ ಮೂಲಕ ಅಚ್ಚರಿ ಮೂಡಿಸಿವೆ.
ಇನ್ನು, ಅದೇ ರೀತಿ ಎನ್’ಟಿಸಿಡಿ, ಎ, ಬಿಟಿಸಿ, ಐಟಿಬಿಪಿ ವಿವಿಧ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಾಯಿಗಳು ಹಾಗೂ ಕುದುರೆಗಳೂ ಸಹ ಯೋಗಾಭ್ಯಾಸ ಮಾಡುವ ಮೂಲಕ ನಮ್ಮ ನೆಲಮೂಲ ಸಂಸ್ಕೃತಿಯನ್ನು ಪಾಲಿಸಿವೆ.
ಐಟಿಬಿಪಿಯ ಕುದುರೆಗಳು ಹಾಗೂ ತನಿಖಾ ಶ್ವಾನಗಳು ಯೋಧರೊಂದಿಗೆ ಯೋಗಾಭ್ಯಾಸ ಮಾಡಿದ ಫೋಟೋಗಳನ್ನು ನೋಡಿ:
Discussion about this post