No Result
View All Result
“FZ Blue Flex Yamaha’s Ethanol-Ready Ride”
English Articles

FZ Blue Flex | Yamaha Brings Ethanol-Ready Innovation to Indian Roads

by kalpa News
July 13, 2026
0

Kalpa Media House  |  Bengaluru  | India Yamaha Motor (IYM) announced the launch of the FZ-Blue Flex, a significant step...

Read moreDetails
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
  • Advertise With Us
  • Grievances
  • About Us
  • Contact Us
Monday, July 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ನೋಡಲೇಬೇಕಾದ ಚಿತ್ರ ಟ್ರಾನ್ಸ್ (ಮಲಯಾಳಂ)

ಹಲಲೂಯ..

kalpa News by kalpa News
April 16, 2020
in ಸಚಿನ್ ಪಾರ್ಶ್ವನಾಥ್
0
ನೋಡಲೇಬೇಕಾದ ಚಿತ್ರ ಟ್ರಾನ್ಸ್ (ಮಲಯಾಳಂ)
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಒಂದು ಚಿತ್ರ ಎಷ್ಟು ಚೆನ್ನಾಗಿ ಮೌಢ್ಯತೆಯ ಬಣ್ಣಿಸಬಹುದೋ ಅದನೆಲ್ಲಾ ಮಾಡಿದ ಚಿತ್ರ ಟ್ರಾನ್ಸ್. ಅಲ್ಲಿ ವೈಲೆಂಟ್ ಆಗುವ ರಾವಣರಿಲ್ಲ, ವಿದೇಶದಲ್ಲಿ ಕುಣಿದ ಹಾಡುಗಳಿಲ್ಲ, ಹೇಳುವಂತಹ ಸ್ಟಾರ್ ನಟರೂ ಇಲ್ಲ. ಕೇವಲ ಕಥೆಯಲ್ಲಿ ಕುತೂಹಲ ಕೆರಳಿಸುವ ಚಿತ್ರಗಳಿಗೆ ಇದೊಂದು ಸೇರ್ಪಡೆ. ಮಲಯಾಳಂ ಭಾಷೆಯ ಈ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯ.

ಎಷ್ಟೋ ವಿಡಿಯೋಗಳನ್ನು, ಫೋಟೋಗಳನ್ನು ನೋಡಿದ್ದೇವೆ ಮತ್ತು ಎಷ್ಟೋ ಸುದ್ಧಿಗಳು ನೋಡಿದ್ದೇವು. ಸ್ಟೇಜ್ ಮೇಲೆ ಇರುವ ಉದ್ದನೆಯ ಅಂಗಿಯ ಮಾಂತ್ರಿಕ ತನ್ನ ಕೈಗಳಿಂದ, ಮಾತುಗಳಿಂದ ಅಸಂಖ್ಯಾತ ನೆರೆದ ಜನರ ಕಾಯಿಲೆ ವಾಸಿ ಮಾಡುವುದು, ಹಾಡುತ್ತಾ ಕುಣಿಯುತ್ತಿರುವುದು, ಮತ್ತೆ ಯಾರಿಗೋ ಛಡಿಯೇಟು ಕೊಡುವುದು ಹೀಗೆ ಕ್ರೈಸ್ತ ಧರ್ಮದ ಗುರುವಿನ ಕರುಣಾಜನಕ ಮಾಯಜಾಲ. ಇದರ ಹಿಂದಿನ ಸತ್ಯವನ್ನು, ಕಾಣದ ಕೈಗಳನ್ನು ಮತ್ತು ಪರಿಣಾಮಗಳನ್ನು ಬಿಚ್ಚಿಡುವ ಚಿತ್ರ ಟ್ರಾನ್ಸ್. ಚಿತ್ರ ಆರಂಭವಾಗುವುದೇ ಹಾಗೆ. ಆತನೊಬ್ಬ ಮಧ್ಯಮ ವರ್ಗದ ಯುವಕ. ದೈಹಿಕವಾಗಿ ತೀರಾ ಆಕರ್ಷಕನಲ್ಲದ, ಅಂತಹ ಹೇಳಿಕೊಳ್ಳುವ ಉದ್ಯೋಗ ಇಲ್ಲದ, ವಿದ್ಯುತ್ ಬಿಲ್ ಕಟ್ಟಲೂ ಯೋಚಿಸಬೇಕಾದ ಹಿನ್ನೆಲೆಯ ವ್ಯಕ್ತಿ. ಆತನ ಕನಸು ತಾನೊಬ್ಬ ವ್ಯಕ್ತಿತ್ವ ವಿಕಸನ ಮಾಡುವ ಗುರು ಆಗಬೇಕೆಂದು. ಅದಕ್ಕಾಗಿ ಸದಾ ಕಾಲ ಹಂಬಲಿಸುವ, ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ ತೆರೆದುಕೊಳ್ಳುತ್ತದೆ. ಹಳೆಯ ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥ ತಮ್ಮ. ಹಣಕಾಸಿನ ಅಡಚಣೆ, ಅನಾರೋಗ್ಯದ ಚಿಂತೆ, ಹಳೆಯ ನೋವಿನ ನೆನಪುಗಳು ಅದರೊಂದಿಗೆ ಆತನ ಬದುಕು ಕಟ್ಟಿಕೊಳ್ಳುವ ಪ್ರಯತ್ನ. ಹೀಗಿರುವಾಗ ಆತನಿಗೆ ಒಮ್ಮೆ ಚಲನಚಿತ್ರ ಇನ್ನಿತರ ಕಾರ್ಯಕ್ರಮಗಳಿಗೆ ಕಲಾವಿದರ ಪೂರೈಸುವ ಮಹಿಳೆಯ ಪರಿಚಯವಾಗುತ್ತದೆ. ಅವಳು ಈ ಚಿತ್ರದಲ್ಲಿ ಮಹತ್ತರ ಬದಲಾವಣೆಯನ್ನು ತರುತ್ತಾಳೆ. ಈ ಮಧ್ಯೆ ಅಸ್ವಸ್ಥ ತಮ್ಮ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದ್ದೊಬ್ಬ ಬಂಧುವನ್ನೂ ಕಳೆದುಕೊಂಡ ಮೇಲೆ ನಾಯಕ ಇನ್ನಷ್ಟು ನೊಂದು ಮಾತ್ರೆಗಳ ಜಾಲದಲ್ಲಿ ಸಿಲುಕುತ್ತಾನೆ. ಮತ್ತು ಆ ಮನೆಯನ್ನೂ ಬಿಟ್ಟು ಹೊರಡುತ್ತಾನೆ.

ಮತ್ತೆ ಆ ಮಹಿಳೆಯ ಭೇಟಿ ಆಗಿ ತನ್ನ ವಿಡಿಯೋಗಳನ್ನು ನೀಡುತ್ತಾನೆ. ಅವಳು ತನಗೆ ಪರಿಚಿತರಾದ ಉದ್ಯಮಿಗಳಿಗೆ ಕಳಿಸುತ್ತಾಳೆ ಮತ್ತು ಅವರು ಈತನನ್ನು ಆಯ್ಕೆ ಮಾಡಿ ಬರಲು ಹೇಳುತ್ತಾರೆ. ಅವರನ್ನು ಭೇಟಿ ಆಗಲು ತೆರಳುವ ನಾಯಕನಿಗೆ ಅಲ್ಲಿ ಒಂದು ಆಘಾತ ಕಾದಿರುತ್ತದೆ. ಅಲ್ಲಿ ಆತನ ಆಯ್ಕೆ ಮ್ಯಾನೇಜ್‌ಮೆಂಟ್ ಗುರು ಸ್ಥಾನದ ಬದಲು ದೈವ ದೂತನ ಪದವಿಯ ಆಯ್ಕೆ ನೀಡುತ್ತಾರೆ. ಮತ್ತು ಈತನ ಅಷ್ಟೂ ಪೂರ್ವಾಪರ ಅವರು ಅರಿತಿರುತ್ತಾರೆ. ಆ ಪರಿಸ್ಥಿತಿಯಲ್ಲಿ ಅವರ ಆಯ್ಕೆ ಒಪ್ಪದೇ ಬೇರೆ ದಾರಿಯೂ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೇಲೆ ಆತನಿಗೆ ಅನೇಕ ಬಗೆಯ ತರಬೇತಿ ನೀಡಲಾಗುತ್ತದೆ. ಹೆಚ್ಚು ವೈಭವೋಪೆತವಾಗಿ ನೋಡಿಕೊಳ್ಳಲಾಗುತ್ತದೆ. ಮಾತ್ರೆಗಳಿಗೆ ಆತ ಅದಾಗಲೇ ಅಡಿಕ್ಟ್ ಆಗಿರುತ್ತಾನೆ. ತರಬೇತಿ ಪೂರ್ಣಗೊಳ್ಳುವ ಹೊತ್ತಿಗೆ ಜೀವನವೊಂದೇ ಅಲ್ಲ, ಆತನ ಹೆಸರು ಬದಲಾಗುತ್ತದೆ.

ಕೋಟ್ಯಾಂತರ ರೂಪಾಯಿಗಳ ದುಡಿಮೆ, ಬಯಸಿದ್ದೆ ದೊರಕುವ ಜೀವನ, ನಿಲ್ಲದೆ ಓಡುವ ಕಾಲ ಹೀಗೆ ಆತನ ಪ್ರತಿಭೆ ಮತ್ತೊಂದು ಬಗೆಯಲ್ಲಿ ಬಳಕೆಯಾಗುತ್ತದೆ. ತಾನು ಮಾಡುತ್ತಿರುವುದು ಸರಿಯೋ ತಪ್ಪೋ ಅಂತಲೂ ಯೋಚಿಸದೆ ಇನ್ನಿಲ್ಲದಂತೆ ಬದುಕುತ್ತಾನೆ. ಈ ಸಂದರ್ಭದಲ್ಲಿ ನಡೆಯುವ ಟಿವಿ ಸಂದರ್ಶನ, ತಾನು ಎಚ್ಚೆತ್ತುಕೊಳ್ಳುವ ಪ್ರಯತ್ನ, ಆಘಾತ, ಮುಂದೆ ಎದುರಾಗುವ ತಿರುವುಗಳನ್ನು ನೋಡಿಯೇ ಅರಿಯಬೇಕು. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅದ್ಭುತ.

ಪಿಕ್ಕೆ ಹಾಕಿದ ಆಮೀರು, ಹುಲಿಕಲ್ಲಿನ ಹುಲಿಯನನ್ನು ಸೇರಿ ಅನೇಕ ‘ವಿದ್ವಾಂಸರು’ ಕೇವಲ ಒಂದು ದಿವ್ಯ ಪರಂಪರೆಯನ್ನು ಅಷ್ಟೇ ಪ್ರಶ್ನೆ ಮಾಡಿ ಜಾಣ ಕುರುಡು ತೋರಿಸಿದರು. ದೇವರ ಹೆಸರಿನಲ್ಲಿ ಸುಲಭವಾಗಿ ದೊರೆಯುವ ಜನರ ಮೌಢ್ಯತೆಯನ್ನು ಸುಲಭವಾಗಿ ಕೋಟಿ ರೂಪಾಯಿಗಳ ಉದ್ದಿಮೆಯಾಗಿ ಹೇಗೆ ಮಾಡಿಕೊಳ್ಳುತ್ತಾರೆ, ಅದಕ್ಕಾಗಿ ನಡೆಯುವ ತಯಾರಿ, ನಾಯಿಕೊಡೆಗಳಂತೆ ಹುಟ್ಟುವ ದೇವದೂತರು, ಅವರ ಹೆಸರಿನಲ್ಲಿ ನಡೆಯುವ ಔಷಧ, ತೈಲ ಇನ್ನಿತರ ವಸ್ತುಗಳ ಮಾರಾಟ, ಅಂತಹ ಗುರುಗಳನ್ನು ನಂಬಿ ತನ್ನ ಕಂದನ ಬಲಿ ಮಾಡಿ ಆಮೇಲೆ ಬದುಕಿಸಲು ಬೇಡುವ ಅಪ್ಪ ಹೀಗೆ ಚಿತ್ರ ಸತ್ಯದ ಬೆನ್ನಟ್ಟಿ ಬೆಳಕು ಚೆಲ್ಲುತ್ತದೆ.

ಮೌಢ್ಯತೆಯ ಸೋಗು ಪ್ರತಿ ವ್ಯಕ್ತಿಯಲ್ಲೂ, ಪ್ರತಿ ಧರ್ಮದಲ್ಲೂ ಇದೆ. ಆದರೆ ಪ್ರಶ್ನಿಸುವವರು ಮಾತ್ರ ಆಯ್ಕೆ ಮಾಡಿಕೊಂಡು ತೋರುತ್ತಿದ್ದರು. ಧರ್ಮ ನಂಬಿ ಕಾಯಿಲೆ ಹಂಚೋಣ ಎನ್ನುವವರ , ದೈವಾಂಶಸಭೂತರ ದೆಸೆ ಕಾಯುವ ಈ ಹೊತ್ತಿನಲ್ಲಿ ಇಂತಹ ಚಿತ್ರಗಳನ್ನು ನೋಡುವುದು ಅವಶ್ಯಕ. ಫಹಾದ್ ಫಾಸಿಲ್, ಗೌತಮ್ ವಾಸುದೇವ್ ಮೆನನ್, ಚೆಂಬನ್ ವಿನೋದ್ ಜೋಸ್, ನಜ್ರಿಯಾ ನಜೀಂ, ದಿಲೀಶ್ ಪೋಥನ್, ವಿನಾಯಕನ್ ಮತ್ತು ಸೌಭಿನ್ ಶಾಹಿರ್ ಇವರ ಅತ್ತ್ಯುತ್ತಮ ನಟನೆ, ಗಟ್ಟಿ ಕಥೆ ಮತ್ತು ಗಂಭೀರ ನಿರೂಪಣೆಯಿಂದ ಚಿತ್ರ ಮನಸ್ಸಿಗೆ ಹತ್ತಿರವಾಗುವುದು ಖಂಡಿತ. ಹಿಂದೂ ಸಂಸ್ಕೃತಿಯ ಆಚರಣೆಗಳು, ಯಜ್ಞ ಯಾಗಾದಿಗಳು, ವಿಚಾರಗಳನ್ನು ಹೀಗಳೆದು ಮುದ್ರಿಸುವ, ಚಿತ್ರಿಸುವ ಮತ್ತು ದೇವರುಗಳ ಮೇಲೆ ಮೂತ್ರಿಸುವ ಮಾತನಾಡುವ ಚೆರ್ರಿ ಪಿಕ್ಕಿಂಗ್ (Cherry Picking) ಅವಿಚಾರವಂತರೂ ಈ ಚಿತ್ರ ನೋಡುವುದು ಒಳಿತು.


Get in Touch With Us info@kalpa.news Whatsapp: 9481252093

Tags: KannadaNewsWebsiteLatestNewsKannadaMalayalamSachin ParshwanathSillinessTrans Malayalam movieಟ್ರಾನ್ಸ್ ಮಲಯಾಳಂ ಚಿತ್ರಮಲಯಾಳಂಮೌಢ್ಯತೆಸಚಿನ್ ಪಾರ್ಶ್ವನಾಥ್
Share211Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

18 ಪುರಾಣಗಳಲ್ಲಿ ಯಾವುದು ಏನು ಹೇಳುತ್ತದೆ?: ಮಾಲಿಕೆ-18 ಬ್ರಹ್ಮಾಂಡ ಪುರಾಣ

Next Post

ಲಾಕ್ ಡೌನ್ ಅವಧಿಯಲ್ಲಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದಿಂದ ಉಚಿತ ಹೆಲ್ತ್‌ ಟಿಪ್ಸ್‌: ಕರೆ ಮಾಡಿ

kalpa News

kalpa News

Next Post
ಲಾಕ್ ಡೌನ್ ಅವಧಿಯಲ್ಲಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದಿಂದ ಉಚಿತ ಹೆಲ್ತ್‌ ಟಿಪ್ಸ್‌: ಕರೆ ಮಾಡಿ

ಲಾಕ್ ಡೌನ್ ಅವಧಿಯಲ್ಲಿ ಉದ್ಗೀಥ ಆಯುರ್ವೇದ ಚಿಕಿತ್ಸಾಲಯದಿಂದ ಉಚಿತ ಹೆಲ್ತ್‌ ಟಿಪ್ಸ್‌: ಕರೆ ಮಾಡಿ

Leave a Reply Cancel reply

Your email address will not be published. Required fields are marked *

No Result
View All Result
“FZ Blue Flex Yamaha’s Ethanol-Ready Ride”
English Articles

FZ Blue Flex | Yamaha Brings Ethanol-Ready Innovation to Indian Roads

by kalpa News
July 13, 2026
0

Kalpa Media House  |  Bengaluru  | India Yamaha Motor (IYM) announced the launch of the FZ-Blue Flex, a significant step...

Read moreDetails
“My Dad, My Hero Celebrating the Ultimate Bond with Hero Destini”

“My Dad, My Hero: Celebrating the Ultimate Bond with Hero Destini”

July 13, 2026
ಚಿತ್ರೋದ್ಯಮಕ್ಕೆ‌ ಹೊಸ ಕಳೆ ತಂದ ಹೇಮಂತ್ ಹವಾ!

Indian Railways | Partial Cancellation of Trains on Bengaluru–Chennai

July 10, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

Shivamogga SIR | District Achieves 81% e-Form Distribution

July 8, 2026
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL