ಕಲ್ಪ ಮೀಡಿಯಾ ಹೌಸ್
ಕೊರೋನಾ ಸಂಕಷ್ಟದ ಈ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಒಂದಲ್ಲಾ ಒಂದು ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕಲೆಯ ಮೂಲಕ ಸೇವೆ ಸಲ್ಲಿಸುತ್ತಿರುವವರು ಯುವ ನಟ, ವೇಷ ಚಿತ್ರದ ನಾಯಕ ರಾಘವೇಂದ್ರ.
ಆಡು ಮುಟ್ಟದ ಸೊಪ್ಪಿಲ್ಲ ರಾಘವೇಂದ್ರ ಅವರು ಸೇವೆ ಸಲ್ಲಿಸದೇ ಇರುವ ಕ್ಷೇತ್ರವಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಅವರು ರಾಜಕೀಯ ಸಾಮಾಜಿಕ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಅನೇಕ ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದು ಈಗ ಸಿನಿಮಾ ರಂಗಕ್ಕೆ ವೇಷ ಚಿತ್ರದ ಮೂಲಕ ನಾಯಕ ನಟರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ನಾಡಿಗೆ ಬಂದರೆಗಿರುವ ಕೊರೋನಾ ಎಂಬ ಪೆಡಂಭೂತದ ವಿರುದ್ದ ಹೋರಾಡಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರದೇ ಆದ ವಿಭಿನ್ನ ಶೈಲಿಯಲ್ಲಿ – ಮಲೆನಾಡಿನ ಮಡಿಲಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಜನತೆಗೆ ಅವರು ಹಾಡಿನ ಮೂಲಕ ರಂಜಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ.
ರಂಗಭೂಮಿ, ರಾಜಕೀಯಾ ಹಾಗೂ ಸಮಾಜ ಸೇವೆಯ ಜೊತೆ ಜೊತೆ ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಡುತ್ತಾ ಇದ್ದೇನೆ. ಮಲೆನಾಡು ಸಾಧಕರ ತವರೊರು, ಹೊಸ ತಂಡದ ಜೊತೆ ಹೊಸ ಹುರುಪಿನೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ನಾಡಿನ ಜನತೆ ಹರಸಿ, ಚಿತ್ರ ಬಿಡುಗಡೆಯಾದ ನಂತರ ಚಿತ್ರ ಮಂದಿರಕ್ಕೆ ಬಂದು ನೋಡಿ ಹೊಸ ತಂಡವನ್ನು ಆರ್ಶಿವಾದ ಮಾಡಿ ಎನ್ನುತ್ತಾ ರಾಘು. ನನ್ನ ತಾಯಿ ಮನೆ ಕುರುವಳ್ಳಿ, ಬಾಲ್ಯದಿಂದ ನನಗೆ ಮಲೆನಾಡು ಅಂದ್ರೆ ಪ್ರಾಣ-ಎಂದು ಅವರಿಗೆ ಮಲೆನಾಡಿನ ಮೇಲೆ ಇರುವ ಭಾವನಾತ್ಮಕ ಸಂಬಂಧದ ಬಗ್ಗೆ ಮಾತನಾಡುತ್ತ ನಾಡಿನ ಜನತೆ ಹರಸಿ-ಬೆಳಸಿ ಎನ್ನುತ್ತಾ ಭಾವುಕರಾಗುತ್ತಾರೆ ಮಲೆನಾಡಿನ ಹೆಮ್ಮೆಯ ಪುತ್ರ. ಶಿವಮೊಗ್ಗ-ತೀರ್ಥಹಳ್ಳಿ-ಕುಂದಾಪುರ-ಆಗುಂಬೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇದು ಇವರ ಚೊಚ್ಚಲ ಸಿನಿಮಾ. ಚಿತ್ರರಂಗಕ್ಕೆ ವೇಷ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿರುವ ಇವರಿಗೆ ಬಣ್ಣದ ಲೋಕದಲ್ಲಿ ಅಭೂತ ಪೂರ್ವ ಯಶಸ್ಸು ಸಿಗಲಿ, ಮಲೆನಾಡಿನ ಹಿರಿಮೆಗೆ ಮತ್ತೊಂದು ಗರಿ ಸೇರಿಕೊಳ್ಳಲ್ಲಿ ಎಂದು ಕಲ್ಪ ಮೀಡಿಯಾ ಹೌಸ್ ಶುಭ ಹಾರೈಸುತ್ತದೆ.
ರಾಘವೇಂದ್ರ ಅವರ ಕುರಿತು
ಹೆಬ್ರಿಯ ಸೂರ್ಯ ಮತ್ತು ಶ್ರೀಮತಿ ರತ್ನ ದಂಪತಿಯ ಸುಪುತ್ರರಾಗಿ 1980 ರ ಆಗಸ್ಟ್ 17 ರಂದು ಜನಿಸಿದ ರಾಘವೇಂದ್ರ ಅವರು ಹಲವು ವರ್ಷಗಳಿಂದ ತಮ್ಮನ್ನು ಸಾಮಾಜಿಕ ಸೇವೆಗೆ ಸರ್ಮಪಣೆ ಮಾಡಿಕೊಂಡಿದ್ದಾರೆ. ತೀರ್ಥಹಳ್ಳಿ ಇವರ ತಾಯಿಯ ತವರೂರು, ಆದರಿಂದ ಇವರು ನಿರಂತರ ಓಡಾಟ ಹೆಬ್ರಿಯಿಂದ ತೀರ್ಥಹಳ್ಳಿಗೆ!
ಪ್ರಸುತ್ತ ಹಂಸನಿ ಕ್ರಿಯೇಷನ್ ಎಂಬ ಚಲನಚಿತ್ರ ಕಚೇರಿಯನ್ನು ಇವರು ತೀರ್ಥಹಳ್ಳಿಯಲ್ಲಿ ತೆರೆದಿದ್ದಾರೆ. ಇವರದೇ ಆದ ಹಂಸನಿ ಕ್ರಿಯೇಷನ್ ಎಂಬ ಬ್ಯಾನರ್’ನಲ್ಲಿ ಬರುತ್ತಿರುವ ವೇಷ ಚಿತ್ರಕ್ಕೆ ನಾಯಕರಾಗಿದ್ದು, ಜೀವನದಲ್ಲಿ ಮಹತ್ವದ ಸಾಧನೆ ಮಾಡಬೇಕು, ಕಲಾ ಸೇವೆ ಮಾಡಬೇಕು, ಸಿಕ್ಕ ಅವಕಾಶ ಬಳಸಿಕೊಂಡು ಕರುನಾಡಿನಲ್ಲಿ ಕಲಾಸೇವೆ ಮಾಡಬೇಕು ಎಂಬ ಆಶಯವನ್ನು ಹೊಂದಿದ್ದಾರೆ.
ರಂಗಭೂಮಿ ಕಲಾವಿದರಾದ ರಾಘವೇಂದ್ರ ಅವರೇ ಸ್ವತಃ ಕಥೆ ಬರೆದು ರಂಗದ ಮೇಲೆ ನಾಟಕ ಮಾಡಿ ಅನುಭವ ಇರುವ ಇವರು ಸುಮಾರು 20 ವರುಷಗಳಿಂದ ರಂಗ ಭೂಮಿಯಲ್ಲಿ ಸಕ್ರಿಯವಾಗಿ ಇವರನ್ನು ತೊಡಗಿಕೊಂಡಿದ್ದಾರೆ. ಇವರೊಂದಿಗೆ ಕಲ್ಪ ಮೀಡಿಯಾ ಹೌಸ್ ಮಾತನಾಡಿದ್ದು, ಅದರ ಸಾರ ಹೀಗಿದೆ.
ಕಲ್ಪ ಮೀಡಿಯಾ ಹೌಸ್: ನಿಮ್ಮ ಚಿತ್ರದ ಬಗ್ಗೆ ತಮ್ಮ ಸಂದೇಶವೇನು?
ರಾಘವೇಂದ್ರ: ಒಂದೊಳ್ಳೆ ಸಂದೇಶ ಇರೋ, ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾಗೋ ರೋಚಕಥೆ, ಆಕ್ಷನ್, ಪ್ರೀತಿ, ಇರೋ ಕಥೆ, ಇಡೀ ಫ್ಯಾಮಿಲಿ ಜೊತೆಯಾಗಿ ನೋಡಬಹುದಾದಂತ ಚಿತ್ರ!
ಕಲ್ಪ ಮೀಡಿಯಾ ಹೌಸ್: ಕೊರೋನಾ ಸಂಕಷ್ಟ ಕಾಲದಲ್ಲಿ ಮಲೆನಾಡಿನ ಜನತೆಗೆ ನಿಮ್ಮ ಸಂದೇಶ ಏನು?
ರಾಘವೇಂದ್ರ: ತುಂಬಾ ಸರಳ… ಕೆಲವೊಂದು ಪರಿಹಾರಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಅಷ್ಟೇ. ಆತ್ಮವಿಶ್ವಾಸ, ಒಳ್ಳೆಯ ಆಹಾರ, ಸರಕಾರ ಸೂಚಿಸದ ಮಾರ್ಗಸೂಚಿ ಅನುಸರಿಸಿದರೆ ಸುಲಭದಲ್ಲಿ ಇದರಿಂದ ಪಾರಾಗಬಹುದು.
ಕಲ್ಪ ಮೀಡಿಯಾ ಹೌಸ್: ನೀವು ರಂಗಭೂಮಿಯ ಜೊತೆ ಜೊತೆಗೆ ಸಾಮಾಜಿಕ ಸೇವೆಗೆ ನಿಮ್ಮನ್ನು ತೊಡಗಿಸಿಕೊಂಡಿದ್ದು ಯಾವಾಗ?
ರಾಘವೇಂದ್ರ: ರಂಗಭೂಮಿ ಶುರುವಾಗಿದ್ದು 5ನೆಯ ತರಗತಿಯಲ್ಲಿ. ನನ್ನ ಶಾಲಾ ಮೊದಲ ಗುರುಗಳು ಸುಬ್ರಾಯ ಅಡಿಗರ ನಾಟಕದ ತಂಡದಲ್ಲಿ ಭಾಗಿಯಾದಾಗ ಅಲ್ಲಿಂದ ಶುರುವಾಯ್ತು ರಂಗಭೂಮಿ, ನಾಟಕ, ಅಂತ..
ಕಲ್ಪ ಮೀಡಿಯಾ ಹೌಸ್: ನೀವು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಇದ್ದೀರಾ?
ರಾಘವೇಂದ್ರ: ಹೌದು.. ಪ್ರಸ್ತುತ ಕಾರ್ಕಳ ಕ್ಷೇತ್ರ ಬಿಜೆಪಿ ಕಾರ್ಯದರ್ಶಿ.
ಕಲ್ಪ ಮೀಡಿಯಾ ಹೌಸ್: ವೇಷ ಚಿತ್ರದ ಮೂಲಕ ರಾಜ್ಯ ಹಾಗೂ ಮಲೆನಾಡಿನ ಜನತೆಗೆ ಏನನ್ನು ಹೇಳಲು ಹೊರಟಿದ್ದೀರಾ?
ರಾಘವೇಂದ್ರ: ಒಬ್ಬ ನಟ ಬಯಸೋದು ಜನ ನನ್ನನ್ನು ಗುರುತಿಸಲಿ, ಪ್ರೋತ್ಸಾಹಿಸಲಿ ಅಂತ. ನಾನು ಅಷ್ಟೇ ಬಾರಿ ನಿರೀಕ್ಷೆ ಇಟ್ಟು ಹತಾಶರಾಗೋದಕ್ಕಿಂತ, ನಾವು ಕಷ್ಟ ಪಟ್ಟು ತನು ಮನ ಧನ ಹಾಕಿದ್ದೇವೆ. ನಮ್ಮ ಒಳ್ಳೆಯ ಪ್ರಯತ್ನಕ್ಕೆ ಫಲ ಒಳ್ಳೆ ಸಿಕ್ಕರೆ ಸಾಕು ಅಂತ ಕೇಳಿಕೊಳ್ಳುತ್ತೇವೆ, ಭುವಿಗಿಳಿದ ಸ್ವರ್ಗ ಮಲೆನಾಡಿನ ಜನತೆ ಹಾಗೂ ಕರ್ನಾಟಕದ ಜನತೆ ಖಂಡಿತ ಆಶೀರ್ವಾದ ಮಾಡುತ್ತಾರೆ ಅನ್ನುವ ನಂಬಿಕೆ ಇದೆ.
ಕಲ್ಪ ಮೀಡಿಯಾ ಹೌಸ್: ವೇಷ ಚಿತ್ರ ಬಿಡುಗಡೆ ಯಾವಾಗ?
ರಾಘವೇಂದ್ರ: ನಾಡಿಗೆ ಬಂದಿರುವ ಕೊರೋನಾ ಸಮಸ್ಯೆ ಪ್ರಮಾಣ ಕಡಿಮೆ ಆಗಿ ಜನರ ಬದುಕು ಹಸನಾದ ನಂತರ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದ್ದು, ಭಗವಂತನಲ್ಲಿ ದೇಶ ಹಾಗೂ ರಾಜ್ಯಕ್ಕೆ ಬಂದೆರಗಿರುವ ಸಮಸ್ಯೆ ಬಗೆಹರಿಸುವಂತೆ ಪ್ರಾರ್ಥನೆ ಮಾಡಿದ್ದೇನೆ ಹಾಗೂ ಬರಲಿರುವ 2021 ಆಗಸ್ಟ್ ಅಥವಾ ಸೆಪ್ಟೆಂಬರ್’ನಲ್ಲಿ ತೆರೆ ಕಾಣುವ ಸಾಧ್ಯತೆಗಳಿವೆ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post