No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Thursday, April 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಸಿನೆಮಾ ಕತೆಯನ್ನೇ ಮೀರಿಸುವ ಈ ನೈಜ ‘ಅಪೂರ್ಣ ಪ್ರೇಮಕಥೆ’ ನೀವು ಓದಲೇಬೇಕು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 23, 2019
in Small Bytes, Special Articles
0
ಸಿನೆಮಾ ಕತೆಯನ್ನೇ ಮೀರಿಸುವ ಈ ನೈಜ ‘ಅಪೂರ್ಣ ಪ್ರೇಮಕಥೆ’ ನೀವು ಓದಲೇಬೇಕು
Share on FacebookShare on TwitterShare on WhatsApp

ನಮಸ್ಕಾರ ಪ್ರಿಯ ಓದುಗರೇ ನಾನು ನಿಮ್ಮ ರೋಹನ್ ಪಿಂಟೋ. ಒಂದು ನೈಜ ಪ್ರೇಮಕತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ.

ಈ ಪ್ರೇಮಕಥೆ ಯಾವದೇ ಸಿನೆಮಾ ಕತೆಗೂ ಕಡಿಮೆ ಇಲ್ಲ… ಆದರೆ ಈ ಕತೆಗೂ ಸಿನೆಮಾ ಕತೆಯ ನಡುವೆ ಎರಡು ವ್ಯತ್ಯಾಸಗಳಿವೆ. ಅವುಗಳೆಂದರೆ ಬಹುತೇಕ ಪ್ರೇಮಕತೆಗೆ ಸುಖಾಂತ್ಯವೊ, ಇಲ್ಲ ದುಃಖಾಂತ್ಯವೋ ಇರುತ್ತದೆ. ಆದರೆ ಈ ಪ್ರೇಮಕತೆ ಒಂದು ರೀತಿಯಲ್ಲಿ ಅಪೂರ್ಣವಾಗಿದೆ. ಇನ್ನೊಂದು ಅಂಶವೆಂದರೆ ಈ ಕತೆಯ ನಾಯಕ ಮತ್ತು ನಾಯಕಿ ಇಬ್ಬರೂ ನನ್ನ ಅತ್ಮೀಯರು. ಈಗ ಕತೆ ಆರಂಭ ಮಾಡುತ್ತೇನೆ.

ಈ ಕತೆಯ ಆರಂಭದ ಬೇರುಗಳು ಇರುವುದು ನನ್ನ ಹೈಸ್ಕೂಲ್ ಜೀವನದಲ್ಲಿ. ಓದಿ ಗೊಂದಲಕ್ಕೆ ಒಳಗಾಗಬೇಡಿ. ಮುಂದೆ ಓದಿ ಅರ್ಥ ಆಗುತ್ತದೆ.

ಅದು ನನ್ನ ಹೈಸ್ಕೂಲ್ ಜೀವನದ ಆರಂಭಿಕ ದಿನಗಳು. ನನಗೆ ಒಬ್ಬ ಗೆಳೆಯನಾದ. ಆತನ ಹೆಸರು ಮೈಕಲ್. (ಹೆಸರು ಬದಲಾವಣೆ ಮಾಡಲಾಗಿದೆ). ಈತನೇ ಈ ಕತೆಯ ನಾಯಕ. ಸ್ನೇಹ ಒಂದಿಷ್ಟು ಮಟ್ಟಿಗೆ ಗಾಢವೂ ಆಗಿತ್ತು. ಇದಕ್ಕೆ ಕಾರಣ ಬಹುಶಃ ಧರ್ಮವೂ ಆಗಿರಬಹುದು. ಆತ ನನ್ನ ಸೀನಿಯರ್ ಆಗಿದ್ದ. ಒಂದು ವರ್ಷದ ಬಳಿಕ ಆತ ಹೈಸ್ಕೂಲ್ ಮುಗಿಸಿ ಹೊರಟು ಹೋದ. ಆದರೆ ಸ್ನೇಹದ ನೆನಪು ಮಾತ್ರ ಜೀವಂತವಾಗಿತ್ತು.

ಆ ನೆನಪುಗಳ ಜೊತೆ ನನ್ನ ಪದವಿ ಶಿಕ್ಷಣ ಸಹ ಮುಗಿಯುತ್ತ ಬಂತು. ಆದರೆ ಗೆಳೆಯ ನನಗೆ ಮರಳಿ ಸಿಗಲೇ ಇಲ್ಲ. ಹಾಗೇ ನನ್ನ ಕಾಲೇಜು ದಿನಗಳು ಮುಗಿಯೋದಕ್ಕೆ ಒಂದು ಸೆಮಿಸ್ಟರ್ ಇರುವಾಗ ನನ್ನ ಗೆಳತಿಯೊಬ್ಬಳು ನನ್ನನ್ನು ವಾಟ್ಸಾಪ್ ಗ್ರೂಪ್’ಗೆ ಸೇರಿಸಿದಳು.

ಆ ಗ್ರೂಪ್ ನಲ್ಲಿ ನನಗೆ ಒಬ್ಬ ಹುಡುಗಿ ಪರಿಚತವಾದಳ್ು. ಆಕೆಯ ಹೆಸರು ಸ್ಟೆಲ್ಲಾ (ಹೆಸರು ಬದಲಾಯಿಸಿದೆ) ಈಕೆಯೇ ಕಥೆಯ ನಾಯಕಿ. ಆ ಪರಿಚಯ ಸ್ನೇಹಕ್ಕೆ ತಿರುಗಿತು. ಅವಳಿಗೆ ಆಗಾಗ ತಲೆ ತಿನ್ನಲಾಂಭಿಸಿದೆ. ಹೀಗೆ ಇಬ್ಬರೂ ಉತ್ತಮ ಗೆಳಯರಾದೆವು. ಅದಾದ ಕೆಲ ದಿನಗಳ ಬಳಿಕ ನಾನೊಂದು ದಿನ ಫೇಸ್’ಬುಕ್ ಓಪನ್ ಮಾಡಿದೆ. ಅಲ್ಲಿ ಒಂದು ನನಗೆ ಫ್ರೆಂಡ್ ರಿಕ್ವೆಸ್ಟ್‌ ಬಂದಿತ್ತು. ಪ್ರೊಫೈಲ್ ನೋಡಿದಾಗ ಅದು ನನ್ನ ಹೈಸ್ಕೂಲ್’ನ ಗೆಳೆಯ ಮೈಕಲ್’ನದೆ ಎಂದು ಖಾತ್ರಿ ಆಗಿತ್ತು. ಕೊನೆಗೆ ಚಾಟ್ ಆರಂಭಿಸಿ ವಾಟ್ಸಾಪ್ ನಂಬರ್ ಸಹ ವಿನಿಮಯ ಮಾಡಿಕೊಂಡೆವು. ಹಲವು ವರ್ಷಗಳಿಂದ ಸಂಪರ್ಕವೇ ಇಲ್ಲದ ಗೆಳೆಯ ಮರಳಿ ದೊರೆತ್ತದ್ದು ನನಗೆ ಸಂತೋಷ ಉಂಟು ಮಾಡಿತ್ತು.

ನನಗೆ ಒಂದು ಅಭ್ಯಾಸವಿದೆ ಅದೇನೆಂದರೆ ನನ್ನ ಆತ್ಮೀಯರ ಫೋಟೋವನ್ನು ಸ್ಟೇಟಸ್’ಗೆ ಆಗಾಗ ಹಾಕುವುದು.. ಹೀಗೆ ಹಲವು ದಿನಗಳ ಕಾಲ ಅವಳ ಒಪ್ಪಿಗೆ ಪಡೆದು ಫೊಟೊವನ್ನು ಸ್ಟೇಟಸ್’ಗೆ ಹಾಕಿದೆ. (ಮೈಕಲ್ ಮರಳಿ ಪರಿಚಯವಾಗುವ ಮುನ್ನ)

ಒಂದು ದಿನ ಹೀಗೆ ಸ್ಟೇಟಸ್ ಗೆ ಅವಳ ಫೊಟೋ ಹಾಕಿದೆ. ಅದು ಮೈಕಲ್ ಪರಿಚಯ ಆದ ಬಳಿಕ ಮೊದಲ ಬಾರಿ ಹಾಕಿದ್ದು. ಇದನ್ನು ನೋಡಿ ಆತ ಏಕೋ ಸ್ವಲ್ಪ ಅಸಮಾಧಾನಗೊಂಡ ಕಾರಣ ಕೇಳಿದ ಕೂಡಲೇ ನನಗೆ ಒಂದು ರೀತಿಯಲ್ಲಿ ಆಶ್ಚರ್ಯ ಕಾದಿತ್ತು. ಕಾರಣ ಅವರಿಬ್ಬರೂ ಪ್ರೀತಿಸುತ್ತಿದ್ದರು. ಕೊನೆಗೆ ಅವರಿಬ್ಬರಿಂದ ಅವರ ಪ್ರೇಮ ಕತೆ ತಿಳಿದುಕೊಂಡೆ. ಪರಸ್ಪರ ದೂರದ ಸಂಬಂಧಿಕರಾದರೂ ಫೇಸ್’ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಭೇಟಿಯೂ ಆಗದೆ ಪ್ರೀತಿಸುತ್ತಿರುವ ವಿಚಾರ ಸಹ ತಿಳಿಯಿತು.

ಇವರಿಬ್ಬರ ಬದುಕಿನಲ್ಲಿ ಭಗವಂತ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಮಾತು ನಿಜವಾಯಿತು. ಅರ್ಥಾತ್ ಬಹುತೇಕ ಪ್ರೇಮಕತೆಗಳಲ್ಲಿ ಆಗುವ ರೀತಿಯಲ್ಲೇ ಈ ಕತೆಗೂ ವಿರೋಧ ವ್ಯಕ್ತಪಡಿಸಿದ್ದು ಹುಡುಗಿಯ ಕುಟುಂಬಸ್ಥರು. ಹೌದು ಹುಡುಗಿ ಎಷ್ಟೇ ಕೇಳಿಕೊಂಡರೂ ಒಪ್ಪಿಗೆ ನೀಡದ ಅಪ್ಪ ಅಮ್ಮ ಆ. ಹುಡುಗನನ್ನು ಮರೆಯುವಂತೆ ಒತ್ತಡ ಹಾಕಿದ್ದೂ ಈಗಲೂ ಅದೇ ನಿಲುವು ಹೊಂದಿದ್ದಾರೆ. ಆದರೆ ಹುಡುಗನ ಕುಟುಂಬ ಈ ಹುಡುಗಿಯನ್ನು ಸೊಸೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.

ಗುಣದಲ್ಲಿ ಮತ್ತು ನೋಡಲು ಹುಡುಗ ಚೆನ್ನಾಗಿಯೆ ಇದ್ದು ವಿದೇಶದಲ್ಲಿ ಕೆಲಸದಲ್ಲಿ ಸಹ ಇದ್ದಾನೆ. ಇಷ್ಟಾದರೂ ದೂರದ ಸಂಬಂಧ ಎಂಬ ಕಾರಣ ನೀಡಿ ಇಬ್ಬರು ಪ್ರೇಮಿಗಳನ್ನು ದೂರ ಮಾಡುವುದು ಎಷ್ಟು ಸರಿ?

ಏನೇ ಆದರೂ ತನ್ನ ಪ್ರೀತಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹುಡುಗ… ಇತ್ತ ಕುಟುಂಬದ ವಿರುದ್ಧ ಹೋಗಲು ಆಗದೆ ಇತ್ತ ಪ್ರೀತಿಸಿದ ಹುಡುಗನನ್ನು ಬಿಟ್ಟಿರಲಾರದೆ ಚಡಪಡಿಸುತ್ತಿರುವ ಹುಡುಗಿ ಒಂದೆಡೆ. ಇವರಿಬ್ಬರ ಪ್ರೀತಿ ಗೆಲ್ಲಬೇಕೆಂಬ. ಆಸೆ ಹೊತ್ತಿರುವ ನಾನೊಂದೆಡೆ…. ಮೂವರೂ ಸಹ ಮುಂದೇನಾಗುವುದೋ ಎಂಬ ಭಯದೊಂದಿಗೆ ನಮ್ಮ ಮೂವರ ಬದುಕು ಸಾಗಿದೆ…

ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವ ಜನಕ್ಕೆ ಇವರಿಬ್ಬರ ನಿಷ್ಕಲ್ಮಷ ಪ್ರೀತಿ ನಿಜಕ್ಕೂ ಒಂದು ಉದಾಹರಣೆ. ಇಬ್ಬರೂ ಒಂದಾಗಲಿ ಎನ್ನುವ ಮಹದಾಸೆ ನನ್ನದು. ಓದುಗರಾದ ನಿಮ್ಮ ಅನಿಸಿಕೆಯೇನು? ತಿಳಿಸಿ.
ನಮಸ್ಕಾರ….

ಬರೆಹ: ರೋಹನ್ ಪಿಂಟೋ ಗೇರುಸೊಪ್ಪ

Tags: An incomplete Real Love StoryKannada ArticleLove StoryMoviesSpecial Articleಅಪೂರ್ಣ ಪ್ರೇಮಕಥೆಪ್ರೇಮಕಥೆರೋಹನ್ ಪಿಂಟೋಸಿನೆಮಾ ಕತೆ
Share196Tweet123Send
Previous Post

Breaking: ಸಾಗರ ಬಳಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

Next Post

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

ಅವಲೋಕನ: ಲೋಕಸಭಾ ಚುನಾವಣೆ ಫಲಿತಾಂಶ ಮತ್ತೆ ತೂಗುಯ್ಯಾಲೆಯೆ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL