ಈ ತಿಂಗಳು ರಾಷ್ಟ್ರಪ್ರೇಮಿ ಸಿನಿಪ್ರಿಯರಿಗೆ ಹಬ್ಬ. ಏಕೆಂದರೆ ದೇಶವೇ ಹೆಮ್ಮೆಪಡಬಹುದಾದ ಐದು ಸಿನಿಮಾಗಳು ಈ ತಿಂಗಳು ತೆರೆ ಕಾಣಲಿವೆ.
ಅವುಗಳೆಂದರೆ,
1. ಉರಿ – ದ ಸರ್ಜಿಕಲ್ ಸ್ಟ್ರೈಕ್ (ಹೆಸರೇ ಹೇಳುವಂತೆ ಭಾರತೀಯ ಸೈನಿಕರ ಸಾಹಸದ ಕುರಿತಾದ ಸಿನಿಮಾ. ಸರ್ಜಿಕಲ್ ಸ್ಟ್ರೈಕ್ ನ ಕುರಿತಾದ ಈ ಸಿನಿಮಾದ ಟ್ರೈಲರ್ ಅದಾಗಲೇ ಬಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಜನವರಿ 11 ರಂದು ಬಿಡುಗಡೆ.)
2. ಮಣಿಕರ್ಣಿಕಾ – ದ ಕ್ವೀನ್ ಆಫ್ ಝಾನ್ಸಿ (ಝಾನ್ಸಿ ರಾಣಿ ಲಕ್ಷ್ಮಿ ಬಾಯಿಯ ಜೀವನ ಚರಿತ್ರೆ. ಕಂಗನಾ ರಣೌತ್ ರಾಣಿಯಾಗಿ ಕಂಗೊಳಿಸಿರುವ ಟ್ರೈಲರ್ ಅದಾಗಲೇ ಸೂಪರ್ ಹಿಟ್ ಆಗಿದೆ. ಜನವರಿ 25 ರಂದು ಬಿಡುಗಡೆ)
3. ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ (ಅನುಪಮ್ ಖೇರ್ ಭಾರತದ ಮಾಜಿಪ್ರಧಾನಿ ಮನಮೋಹನ್ ಸಿಂಗ್ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾದ ಟ್ರೈಲರ್ ಕಾಂಗಿಗಳ ಕಣ್ಣು ಕೆಂಪಾಗಿಸಿದ್ದು ಚಿತ್ರವನ್ನು ಬ್ಯಾನ್ ಮಾಡಲು ಆಗ್ರಹಿಸಲಾಗುತ್ತಿದೆ. ಜನವರಿ 11 ರಂದು ಬಿಡುಗಡೆ.)
4. ಠಾಕ್ರೆ – ದ ಫಿಲ್ಮ್ (ಹಿಂದುತ್ವವಾದಿ ದಿವಂಗತ ಭಾಳಾ ಸಾಹೇಬ್ ಠಾಕ್ರೆ ಜೀವನಾಧಾರಿತ ಚಿತ್ರ. ಇದರಲ್ಲಿ ಠಾಕ್ರೆ ಪಾತ್ರ ವಹಿಸಿರುವ ನಟ ಒಬ್ಬ ಮುಸಲ್ಮಾನ ಎಂಬುದು ವಿಶೇಷ. ಜನವರಿ 23 ರಂದು ಬಿಡುಗಡೆ.)
5. 72 ಹವರ್ಸ್ – ಮಾರ್ಟಿಯರ್ ಹೂ ನೆವರ್ ಡೈಡ್* (1962 ರ ಭಾರತ – ಚೀನಾ ಯುದ್ಧದಲ್ಲಿ ಮರಣೋತ್ತರ ಮಹಾವೀರ ಚಕ್ರ ಪ್ರಶಸ್ತಿ ಪಡೆದ ರೈಫಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್ ರವರ ಜೀವನಾಧಾರಿತ ಚಿತ್ರ. ಅತ್ಯಂತ ರೋಚಕ ಕಥೆ ಹೊಂದಿರುವ ಈ ಚಿತ್ರಕ್ಕಾಗಿ ಸಿನಿ ರಸಿಕರು ಕಾದು ಕುಳಿತಿದ್ದಾರೆ. ಜನವರಿ 18 ರಂದು ಬಿಡುಗಡೆ.)
ದಯಮಾಡಿ ಈ ಚಿತ್ರಗಳನ್ನು ಕುಟುಂಬದವರೊಡನೆ, ಗೆಳೆಯರೊಡನೆ ಸಿನಿಮಾ ಮಂದಿರದಲ್ಲಿ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ವಿಮರ್ಶೆ ಬರೆದು ಪ್ರೋತ್ಸಾಹದಾಯಕ ಕಾಮೆಂಟ್ ಮಾಡಿ. ಎಲ್ಲ ಕಡೆ 5 ಸ್ಟಾರ್ ಅಥವಾ ಉತ್ತಮ ರೇಟಿಂಗ್ ನೀಡಿ. ಗೆಳೆಯರಿಗೆ ಈ ಚಿತ್ರಗಳನ್ನು ನೋಡುವಂತೆ ಪ್ರೇರೇಪಿಸಿ. ತನ್ಮೂಲಕ ದೇಶಭಕ್ತಿ ಆಧಾರಿತ ಚಿತ್ರಗಳು ಹೆಚ್ಚು ಹೆಚ್ಚು ತೆರೆಕಾಣಲು ಸ್ಫೂರ್ತಿ ನೀಡಿ. ಈ ಮೆಸೇಜನ್ನು ಎಲ್ಲೆಡೆ ಶೇರ್ ಮಾಡಿ. ಧನ್ಯವಾದಗಳು.
– ವಿವೇಕವಂಶಿ
Discussion about this post