ಕಲ್ಪ ಮೀಡಿಯಾ ಹೌಸ್ | ಆನಂದಪುರಂ |
ಮದುವೆ ಸಮಾರಂಭವೊಂದರಲ್ಲಿ ಯುವಕನೊಬ್ಬನು ಗೃಹಿಣಿಯೊಬ್ಬರ ಸೊಂಟ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಪರಸ್ಪರ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಆನಂದಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
Also Read>> ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ | ಶಿಕಾರಿಪುರದ ಕುಮದ್ವತಿ ಕೇಂದ್ರಿಯ ವಸತಿ ಶಾಲೆಗೆ ಶೇ.100 ಫಲಿತಾಂಶ
ಮಹಿಳೆಯೊಬ್ಬರು ತನ್ನ ಸಹೋದರಿಯೊಂದಿಗೆ ಮದುವೆ ಸಮಾರಂಭದಲ್ಲಿ ರಾತ್ರಿ ಊಟಕ್ಕೆ ಪಂಕ್ತಿಯಲ್ಲಿ ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನೊಬ್ಬ ಗೃಹಿಣಿಯ ಸಹೋದರಿಯನ್ನು ಚುಡಾಯಿಸಿದ್ದಾನೆ. ಬಳಿಕ ಆಕೆಯ ಮೈ ಮುಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಯುವಕನ ಕೃತ್ಯದಿಂದ ಎಚ್ಚೆತ್ತ ಗೃಹಿಣಿಯು ಆತನಿಗೆ ಬೈದಿದ್ದಾರೆ. ಅಲ್ಲದೇ, ಈ ವೇಳೆ ಗೃಹಿಣಿಯು ಕಿರುಚಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದ್ದಾರೆ. ಪಕ್ಕದಲ್ಲಿದ್ದ ವ್ಯಕ್ತಿಯು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಯುವಕನನ್ನು ಪ್ರಶ್ನೆ ಮಾಡಿದ್ದಾರೆ.
ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಯುವಕ ಮತ್ತಿತರರು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Comments 1