ಶಿವಮೊಗ್ಗ: ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯ ಜೀವನ ಆಧಾರಿತವಾಗಿ ತೆರೆಗೆ ಬಂದು ಸಮಸ್ತ ಭಾರತೀಯರ ಮನಮುಟ್ಟಿರುವ ಮಣಿಕರ್ಣಿಕಾ-ಝಾನ್ಸಿ ರಾಣಿ ಚಿತ್ರದ ಗೀತೆಗಳೂ ಸಹ ಕೇಳುಗರ ಮನಗೆದ್ದಿದೆ.
ಈ ಚಿತ್ರದ ಗೀತೆಗಳಲ್ಲಿ ಸಿಗ್ನೇಚರ್ ಸಾಂಗ್ ಆಗಿರುವ ಮೇ ರಹೂ ಯಾ ನಾ ರಹೂ ಭಾರತ್ ಯೇ ರೆಹೆನಾ ಚಾಹಿಯೇ ಗೀತೆಯು ಪ್ರತಿ ಕೇಳುಗ ಹಾಗೂ ನೋಡುಗನ ಎದೆಯಲ್ಲಿ ಭಾರತೀಯತೆ ಜ್ಯೋತಿಯನ್ನು ಪ್ರಜ್ಚಲಿಸುತ್ತದೆ.
ಹಿಂದಿಯಲ್ಲಿರುವ ಇಂತಹ ಅದ್ಬುತ ಗೀತೆಯನ್ನು ಶಿವಮೊಗ್ಗದ ಯುವಕ ತಂಡವೊಂದು ಕನ್ನಡಕ್ಕೆ ಭಾವಾನುವಾದ ಮಾಡಿ, ಅದನ್ನು ವೀಡಿಯೋ ರೂಪದಲ್ಲಿ ಸಿದ್ದಪಡಿಸಿದ್ದಾರೆ.
ಮೂಲತಃವಾಗಿ ಪ್ರಸೂನ್ ಜೋಷಿ ರಚಿಸಿರುವ ಈ ಗೀತೆಗೆ ಶಂಕರ್ ಇಶಾನ್ ಲಾಯ್ ಅವರ ಸಂಗೀತವಿದ್ದು, ಇದಕ್ಕೆ ಅಮೋಘ ಧ್ವನಿಯಾಗಿರುವುದು ಶಂಕರ್ ಮಹಾದೇವನ್. ಈ ಗೀತೆಯನ್ನು ಕನ್ನಡಕ್ಕೆ ವಿನಯ್ ಶಿವಮೊಗ್ಗ ಅವರು ಭಾವಾನುವಾದ ಮಾಡಿ, ಅವರೇ ಧ್ವನಿಯಾಗಿದ್ದು, ಅವರೊಂದಿಗೆ ಪೃಥ್ವಿ ಆರ್ ಗೌಡ ಹಾಗೂ ಪಾರ್ಥ ಚಿರಂತನ್ ಅವರೂ ಸಹ ಜೊತೆಯಾಗಿದ್ದಾರೆ.
“ಮಣಿಕರ್ಣಿಕಾ” ಚಿತ್ರದ ಈ ಗೀತೆ ಎಲ್ಲದರಂತೆ ಇಲ್ಲ…ಒಮ್ಮೆ ಕೇಳಿದರೆ ರೋಮಾಂಚನ ಖಚಿತ!!! ಶಂಕರ್ ಮಹಾದೇವನ್ ಸಂಗೀತ -ಪ್ರಸೂನ್ ಜೋಷಿ ಸಾಹಿತ್ಯ ಅತ್ಯದ್ಭುತ!!!! ಇಂದು ಗಣತಂತ್ರ ದಿನದಂದು ಈ ಹಾಡನ್ನು ಒಮ್ಮೆ ಕಣ್ಮುಚ್ಚಿ ಕೇಳಿ….ದೇಶಭಕ್ತಿಯ ಭಾವ ಜಾಗೃತವಾಗಿ ಎದೆ ತುಂಬಿ ಕಣ್ಣುಗಳಲ್ಲಿ ಹನಿಯಾಗಿ ಹೊರಹೊಮ್ಮುವುದು ಶತಸಿದ್ಧ!
ದೇಶವೆಂದು ಪ್ರೀತಿ ಇದ್ದರೆ ಪ್ರತಿ ಕ್ಷಣವೂ ಹೇಳು ನೀ…….
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ……
ನನ್ನ ನಂತರ ಈ ಪರಂಪರೆ ಹೀಗೆ ಮುಂದೆ ಸಾಗಲಿ…..
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ……
ನನ್ನ ನರ ನರ ತಂತಿಯಾಗಲಿ ವೀಣೆ ಶೃತಿಯ ಮೀಟಲಿ…..
ರಾಗ ಭಾರತಿ ನಾನು ನುಡಿಯಲಿ ಮಧುರ ನಾದ ಮೊಳಗಲಿ….
ದೇಶಪ್ರೇಮದ ಈ ಭಾವ ನಮ್ಮ ಕಣ್ಣಲಿ ಬೆಳಗಲಿ……..
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ……
ಶತ್ರುಗಳಿಗೆ ಹೇಳು ನೀ ಗಡಿಯ ಗೌರವ ಕಲಿಯಲಿ…..
ನನ್ನ ಭಾರತ ಅದು ಅಮರ ಈ ಸತ್ಯ ನಿರಂತರ…..
ದೇಶಭಕ್ತಿಯು ಶಕ್ತಿಯಾಗಲಿ ಎತ್ತರೆತ್ತರ ಬೆಳೆಯಲಿ……
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ……
ಹೇ ಭಾರತಿ ನಿನ್ನ ಆಣೆ……
ಒಂದೂ ಕ್ಷಣವೂ ಮರೆಯೆನೂ……
ರಕ್ತದ ಪ್ರತಿ ಹನಿಯೂ ನಿನ್ನದೇ ನಿನಗೇ ತಾಯಿ ಅರ್ಪಣೆ….
ಯುದ್ಧವಿದು ಸನ್ಮಾನದಂತೆ ….
ಇದರ ಮಾನ ಉಳಿಯಲಿ…
ನಾನು ಇರಲಿ ಇಲ್ಲದಿರಲಿ ನನ್ನ ಭಾರತ ಬೆಳಗುತಿರಲಿ……
ಕನ್ನಡ ಅವತರಣಿಕೆಯ ಗೀತೆ ನೋಡಿ:
Discussion about this post