ಆಹಾರವನ್ನು ಬಿಸಿ ಮಾಡಿ ತಿನ್ನುವ ಮೊದಲು ಎಚ್ಚರವಹಿಸಿ. ವೈಜ್ಞಾನಿಕವಾಗಿ ಕೆಲ ಆಹಾರಗಳನ್ನು ಬಿಸಿ ಮಾಡಿ ತಿನ್ನುವುದರಿಂದ ಜೀರ್ಣಶಕ್ತಿ ಕಡಿಮೆಗೊಳ್ಳಲಿದ್ದು, ಹಾಗೂ ಪೋಷ್ಟಿಕಾಂಶ ಕೊರತೆಕೂಡ ಉಂಟಾಗಲಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಹಾಗಾದರೆ ಅಂತಹ ಆಹಾರ ಪದಾರ್ಥಗಳು ಯಾವುದುಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
(ಹೆಚ್ಎಸ್ ವಿಶೇಷ ವರದಿ)
ಮಾಂಸ:
ಅಧಿಕ ಪ್ರೋಟಿನ್ಇರುವ ಮಾಂಸದಲ್ಲಿ ತಯಾರಾದ ಆಹಾರವನ್ನು ತಯಾರಿಸಿದ ದಿನವೇ ಸೇವಿಸಬೇಕು. ಇದನ್ನುಇಟ್ಟು ಮಾರನೇ ದಿನ ಬಿಸಿ ಮಾಡಿ ತಿನ್ನುವ ಹಾಗಿಲ್ಲ, ಒಮ್ಮೆ ತಿಂದರೆ ಫ್ರಿಡ್ಜ್ ನಲ್ಲಿಟ್ಟು (ಸೀಮಿತಾವಧಿಗೆ) ಸಲಾಡ್ ರೂಪದಲ್ಲಿ ತಿನ್ನಿ ಎಂದು ವರದಿ ಹೇಳಿದೆ.
ಅನ್ನ:
ಫುಡ್ ಸ್ಟಾಂಡರ್ಡ್ ಏಜನ್ಸಿ ಪ್ರಕಾರ ಅಕ್ಕಿಯಲ್ಲಿ ಜೀವಾಣುಗಳು ಇರಲಿದೆ. ಅನ್ನ ಮಾಡಿದ ಮೇಲೂ ಈ ಜೀವಾಣುಗಳು ಜೀವಂತವಾಗಿರಲಿದೆ.ಇದನ್ನುಇಟ್ಟು ನಂತರ ಬಿಸಿ ಮಾಡಿ ತಿನ್ನಲು ಹೋದರೆ “ಫುಡ್ ಪಾಯ್ಸನ್” ಆಗುವ ಸಾಧ್ಯತೆ ಇದೆ.
ಆಲೂಗಡ್ಡೆ:
ಆಲೂಗಡ್ಡೆಯನ್ನು ಕೂಡ ಬಿಸಿ ಮಾಡಿ ತಿಂದರೆ ಅದರಲ್ಲಿನ ಪೋಷ್ಟಿಕಾಂಶಗಳು ಕುಗ್ಗಿರುತ್ತವೆ. ಇದುಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಪಾಲಾಕ್:
ಪಾಲಾಕ್ ಆರೋಗ್ಯಕ್ಕೆ ಅತ್ಯುತ್ತಮ ಸೊಪ್ಪು. ಹಾಗೆಂದ ಮಾತ್ರಕ್ಕೆ ಇದನ್ನು ಕೂಡ ಮಾರನೇ ದಿನ ತಿಂದರೆ ವಿಷವಾಗಿರಲಿದೆ.
ಅಣಬೆ:
ಆಹಾರ ಪದಾರ್ಥತಯಾರಿಸುವ ವೇಳೆಯೇ ಇದರ ಪೋಷ್ಟಿಕಾಂಶ ಕಡಿಮೆಯಾಗಲಿದೆ. ಇನ್ನುಇದನ್ನುಇಟ್ಟು ಬಿಸಿ ಮಾಡಿತಿನ್ನುವುದರಲ್ಲಿ ಅರ್ಥವೇ ಇಲ್ಲ ಎನ್ನುತ್ತೆ ಸಂಶೋಧನೆ.
Discussion about this post