ಉಡುಪಿ: ಕಾಶಿ ಮಠದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಪ್ರಥಮ ಆರಾಧನ ಮಹೋತ್ಸವದ ಸಂದರ್ಭದಲ್ಲಿ ಹರಿದ್ವಾರದಲ್ಲಿ ಪ್ರತಿಷ್ಠಾಪಿಸಲು ಕೊಚ್ಚಿಯ ಶ್ರೀ ತಿರುಮಲ ದೇವಸ್ಥಾನದಿಂದ ಸೆ.7ರಂದು ಹೊರಟಿರುವ ಹನುಮನ ವಿಗ್ರಹವನ್ನು ಹೊತ್ತಿರುವ ರಥವು ಗುರುವಾರ ಮಧ್ಯಾಹ್ನ ಉಡುಪಿಯ ತೆಂಕುಪೇಟೆಯ ಲಕ್ಷ್ಮೀ ವೆಂಕಟೇಶ ದೇವಸ್ಥಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.
ಸ್ವಾಮೀಜಿಯವರ ಭಾವಚಿತ್ರಕ್ಕೆ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ ಪುಷ್ಪಾರ್ಚನೆ ನೆರವೇರಿಸಿದರು. ಅರ್ಚಕರಾದ ವಿನಾಯಕ ಭಟ್ ಮಂಗಳಾರತಿ ಬೆಳಗಿಸಿದರು. ರಥ ಯಾತ್ರೆಯ ಪ್ರಮುಖ ಮಂಗಳೂರಿನ ಗುರುದತ್ತ ಕಾಮತ್ ರಥ ಯಾತ್ರೆಯ ಉದ್ದೇಶವನ್ನು ವಿವರಿಸುತ್ತಾ ರಥಯಾತ್ರೆಯು ಸುಮಾರು 385 ದೇವಸ್ಥಾನಗಳಿಗೆ ಭೇಟಿ ನೀಡುವುದಿದ್ದು, 2017ರ ಜ.3ರಂದು ಹನುಮ ಮೂತರ್ಿಯು ಹರಿದ್ವಾರದ ಕಾಶಿ ಮಠದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುಂಡಲೀಕ ಕಾಮತ್, ವಸಂತ ಕಿಣಿ, ವಿಶ್ವನಾಥ್ ಭಟ್, ರೋಹಿತಾಕ್ಷ ಪಡಿಯಾರ್, ಶಾಂತರಾಮ್ ಶ್ಯಾನ್ಬಾಗ್, ನಾರಾಯಣ ಪ್ರಭು, ಗಣೇಶ್ ಕಿಣಿ, ಅಮ್ಮುಂಜೆ ಕೃಷ್ಣಾನಂದ ನಾಯಕ್, ಚೇಂಪಿ ರಾಮಚಂದ್ರ ಅನಂತ ಭಟ್, ನಗರಸಭಾ ಸದಸ್ಯರಾದ ಶಾಮ್ ಪ್ರಸಾದ್ ಕುಡುವ, ದೇವದಾಸ್ ಶ್ಯಾನುಬಾಗ್, ಹರೀಶ ಪೈ ಮುಂತಾದವರು ಉಪಸ್ಥಿತರಿದ್ದರು.
Discussion about this post