ನವದೆಹಲಿ, ಸೆ.3: ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿ ಎಎಪಿ ಸರ್ಕಾರದಿಂದ ವಜಾಗೊಂಡಿರುವ ಸಂದೀಪ್ ಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸಿಡಿಯಲ್ಲಿರುವ ಮಹಿಳೆ ಸಂದೀಪ್ ವಿರುದ್ಧ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಿಡಿಯಲ್ಲಿರುವ ಮಹಿಳೆ ಈ ದೂರು ದಾಖಲಿಸಿದ್ದು, ಸಂದೀಪ್ ಕುಮಾರ್ ನೀಡಿದ ಕೋಲ್ಡ್ ಡ್ರಿಂಕ್ಸ್‌ನಲ್ಲಿ ಡ್ರಗ್ಸ್ ಅಥವಾ ಮತ್ತಿನ ಔಷಧಿ ಬೆರೆಸಲಾಗಿತ್ತು. ಸಂದೀಪ್ ನೀಡಿದ ಕೂಲ್ಡ್ ಡ್ರಿಂಕ್ಸ್ ಕುಡಿದ ನಂತರ ಪ್ರಜ್ಞೆ ತಪ್ಪಿದೆ. ಆ ವೇಳೆ ಸಂದೀಪ್ ಈ ವೀಡಿಯೋ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಪ್ರಕರಣದ ಹಿನ್ನೆಲೆಯಲ್ಲಿ ಎಎಪಿಯಿಂದ ಸಂದೀಪ್ ಕುಮಾರ್‌ರನ್ನು ಪಕ್ಷದಿಂದ ವಜಾ ಮಾಡಿದ ನಂತರ ಹೇಳಿಕೆ ನೀಡಿರುವ ಯುವತಿ, ತಾನು ರೇಶನ್ ಕಾರ್ಡ್‌ವೊಂದರ ಕುರಿತಾಗಿ ಸಹಾಯ ಕೇಳಲು ಸಂದೀಪ್ ಬಳಿ ತೆರಳಿದ್ದೆ ಎಂದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಯುವತಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಎಎಪಿ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಯುವತಿ ಮಾಡಿರುವ ಆರೋಪ ನಿಜವೇ ಆಗಿದ್ದರೆ, ಅದು ಗಂಭೀರ ಅಪರಾಧವಾಗುತ್ತದೆ. ಈ ಪ್ರಕರಣದಲ್ಲಿ ಸಂದೀಪ್‌ಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
Discussion about this post