Read - < 1 minute
ನವದೆಹಲಿ, ಸೆ.3: ಭಾರತದ ವಾಯುಪ್ರದೇಶದಲ್ಲಿ ಪಾಕಿಸ್ಥಾನದ ವಿಮಾನವೊಂದು ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದ ಬೆನ್ನೆಲ್ಲೇ ದೇಶಕ್ಕೆ ತಲೆನೋವಾಗಿರುವ ಚೀನಾದ ಅತ್ಯಂತ ರಹಸ್ಯ ಫೈಟರ್ ಜೆಟ್ ಭಾರತೀಯ ಗಡಿ ಸಮೀಪದ ಟಿಬೆಟ್ ಪ್ರಾಂತ್ಯದಲ್ಲಿ ಗೋಚರಿಸಿದೆ. ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಗಡಿಯಲ್ಲಿ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸುವುದಾಗಿ ಭಾರತವು ಹೇಳಿಕೆ ನೀಡಿದ ಹಿಂದೆಯೇ ಶಾಂತಿ ಕದಡುವ ಈ ಬೆಳವಣಿಗೆ ಕಂಡುಬಂದಿದೆ.
ಚೀನಾದಲ್ಲಿ ಭಾನುವಾರ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿರುವ ಸಂದರ್ಭದಲ್ಲೇ, ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿರುವ ಟಿಬೆಟ್ನ ಸ್ವಾಯತ್ತ ಮುಖಜಭೂಮಿಯ ಎತ್ತರದ ಪ್ರದೇಶದಲ್ಲಿನ ಡಾವೊಚೆಂಗ್ ಯಾಡಿಂಗ್ ಏರ್ ಪೋರ್ಟ್ ನಲ್ಲಿ ಚೀನಾದ ಗೌಪ್ಯ ಫೈಟರ್ ಜೆಟ್ ಜೆ-20 ಕಂಡುಬಂದಿದೆ
ಹಿಮಾಲಯ ಪ್ರಾಂತ್ಯಗಳಲ್ಲಿ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯನ್ನು ನಿಯೋಜಿಸುವ ಭಾರತದ ಕ್ರಮಕ್ಕೆ ಚೀನಾ ಎಚ್ಚರಿಕೆ ನೀಡಿದ ಒಂದು ವಾರದ ನಂತರ ಈ ಪ್ರದೇಶದ ಬಳಿ ತೀವ್ರ ನಿಗಾವಹಿಸುವ ಚೀನಿ ಯುದ್ಧ ವಿಮಾನ ಗೋಚರಿಸುವುದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
Discussion about this post