Read - < 1 minute
ಗ್ರೇಟರ್ ನೋಯ್ಡಾ: ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ನಡುವಿನ ನಾಲ್ಕನೆ ದಿನದಾಟದ ಪಂದ್ಯ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಕಂಡಿತು. ದುಲೀಪ್ ಟ್ರೋಪಿಯ ಪ್ರಶಸ್ತಿ ಸುತ್ತಿಗೆ ಬಲಿಷ್ಠ ರೆಡ್ ಇಂಡಿಯಾ ಪ್ರವೇಶ ಮಾಡಿದೆ.
ಗುರುವಾರ ನಾಲ್ಕನೆ ದಿನ 78.2 ಓವರ್ ಗಳನ್ನು ಮಾತ್ರ ಹಾಕಲು ಸಾಧ್ಯವಾಯಿತು. ಎರಡೂ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಯುವರಾಜ್ ಸಿಂಗ್ ನೇತೃತ್ವದ ರೆಡ್ ಇಂಡಿಯಾ ಎರಡು ಪಂದ್ಯಗಳಿಂದ 7 ಅಂಕ ಪಡೆದಿದ್ದರಿಂದ ಫೈನಲ್ ಗೆ ಪ್ರವೇಶ ಪಡೆಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಪಡೆಯುವ ತಂಡ ಪೈನಲ್ ಪ್ರವೇಶ ಪಡೆಯಲಿದೆ. ಸೆ.4ರಿಂದ ಇಂಡಿಯಾ ಬ್ಲೂ ಮತ್ತು ಇಂಡಿಯಾ ಗ್ರೀನ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಕೂಡ ಮಳೆಗೆ ಆಹುತಿಯಾದರೆ ಅಂಕ ಹಂಚಿಕೆ ಆಧಾರದ ಮೇಲೆ ಇಂಡಿಯಾ ಬ್ಲೂ ತಂಡ ಫೈನಲ್ ಪ್ರವೇಶ ಪಡೆಯಲಿದೆ. ಗ್ರೀನ್ ತಂಡ ಅಂಕ ಪಡೆದಿರುವುದು ಒಂದು ಅಂಕ ಮಾತ್ರ.
ಸಂಕ್ಷಿಪ್ತ ಸ್ಕೋರ್
ಇಂಡಿಯಾ ಬ್ಲೂ 5ಕ್ಕೆ 285(ಓವರ್ 78.2)
ಅಗರ್ವಾಲ್ 92, ಗೌತಮ್ ಗಂಭೀರ್ 77
ಕಾರ್ತಿಕ್ ಅಜೇಯ 35, ಜಾನ್ಸನ್ ಅಜೇಯ 48
ಕುಲದೀಪ್ 78ಕ್ಕೆ 4
Discussion about this post