Read - < 1 minute
ನವದೆಹಲಿ, ಅ.೩: ೨೦೦೨ರಲ್ಲಿ ನಡೆದ ನಿತೀಶ್ ಕಟಾರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಇಬ್ಬರ ಜೈಲು ಶಿಕ್ಷೆಯ ಅವಧಿಯಲ್ಲಿ ೩೦ ರಿಂದ ೨೫ ವರ್ಷಕ್ಕೆ ಇಳಿಕೆ ಮಾಡಿದೆ.
ಕೊಲೆ ಅಪರಾಧಿಗಳಾದ ವಿಕಾಸ್ ಯಾದವ್ ಮತ್ತು ವಿಶಾಲ್ ಯಾದವ್ ಅವರ ಜೈಲು ವಾಸದ ಶಿಕ್ಷೆಯ ಅವಧಿಯನ್ನು ೩೦ರಿಂದ ೨೫ ವರ್ಷ ಇಳಿಸಿದ ಸುಪ್ರೀಂ ಕೋರ್ಟ್, ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಈ ಅಪರಾಧಿಗಳು ೨೫ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಮತ್ತು ಇವರಿಗೆ ಸಹಾಯಕನಾಗಿ ಕೆಲಸ ಮಾಡಿದ ನಿಕಟವರ್ತಿ ಸುಖದೇವ್ ಪೆಹಲ್ವಾನ್ ೨೦ ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಹೇಳಿದೆ.
ರಾಜಕಾರಣಿ ಡಿ.ಪಿ. ಯಾದವ್ ಪುತ್ರ ವಿಕಾಸ್ ಯಾದವ್ನ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟಿಗೆ ಜೀವಾವಧಿ ಶಿಕ್ಷೆಯ ಅವಧಿಯನ್ನು ತೀರ್ಮಾನಿಸುವ ಅಧಿಕಾರವಿದೆ ಎಂದು ಹೇಳಿತಲ್ಲದೆ ವಿಕಾಸ್ ಯಾದವ್ ಮತ್ತು ಸುಖದೇವ್ ಪೆಹಲ್ವಾನ್ ಅವರ ಶಿಕ್ಷಾ ಅವಧಿಯು ಏಕಕಾಲದಲ್ಲಿ ಸಾಗತ್ತದೆ. ದೆಹಲಿ ಹೈಕೋರ್ಟ್ ಆದೇಶಿಸಿರುವ ಪ್ರಕಾರ ಒಂದರ ಬಳಿಕ ಒಂದಾಗಿ ಅಲ್ಲ ಎಂದು ಸ್ಪಷ್ಟಪಡಿಸಿತು. ಜಸ್ಟಿಸ್ ದೀಪಕ್ ಮಿಶ್ರಾ ಮತ್ತು ಜಸ್ಟಿಸ್ ಸಿ. ನಾಗಪ್ಪನ್ ಅವರನ್ನು ಸುಪ್ರೀಂ ಕೋರ್ಟ್ ಪೀಠ ಒಳಗೊಂಡಿತ್ತು.
Discussion about this post