ನವದೆಹಲಿ, ಅ.3: ಭಾರತ ಹಾಗೂ ಪಾಕಿಸ್ಥಾನದ ನಡುವಿನ ವಿವಾದ ತಾರಕಕ್ಕೇರಿರುವಂತೆಯೇ ಭಾರತದ ಮೇಲೆ ಪಾಕ್ ಮೂಲದ ದುಷ್ಕರ್ಮಿಗಳು ದಾಳಿ ನಡೆಸುವ ಸಾಧ್ಯತೆಯಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ದೇಶದ ಕರಾವಳಿ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಈ ಕುರಿತಂತೆ ಸರ್ಕಾರಕ್ಕೆ ಹಾಗೂ ಭದ್ರತಾ ಇಲಾಖೆಗೆ ಎಚ್ಚರಿಕೆ ನೀಡಿರುವ ಭಾರತದ ಮಲ್ಟಿ ಏಜನ್ಸಿ ಸೆಂಟರ್, ಪಾಕಿಸ್ಥಾನದ ಕರಾಚಿಯಿಂದ ಎರಡು ಶಂಕಾಸ್ಪದ ಬೋಟುಗಳು ಹೊರಟಿದ್ದು ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿಯೆಡೆಗೆ ಧಾವಿಸಿ ಬರುತ್ತಿವೆ ಎಂದಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಭಾರತದ ಪ್ಯಾರಾ ಕಮಾಂಡೋಗಳು ಪಾಕ್ ಗಡಿಯೊಳಗೆ ನುಗ್ಗಿ ೩೦ರಿಂದ ೭೦ರಷ್ಟು ಪಾಕ್ ಉಗ್ರರನ್ನು ಮತ್ತು ಸೈನಿಕರನ್ನು ಹತ್ಯೆಗದು ನಡೆಸಿರುವ ಸರ್ಜಿಕಲ್ ಸ್ಟೈಕ್‌ಗೆ ಮುಯ್ಯಿ ತೀರಿಸಿಕೊಳ್ಳುವ ಹವಣಿಕೆಯಲ್ಲಿ ಪಾಕ್, ಯಾವುದೇ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗುತ್ತಿದೆ.
ನಿನ್ನೆಯಷ್ಟೇ ಗುಜರಾತ್‌ನ ಕರಾವಳಿಯಲ್ಲಿ ಪಾಕಿಸ್ಥಾನಕ್ಕೆ ಸೇರಿದ ಶಂಕಾಸ್ಪದ ಬೋಟ್ ಒಂದನ್ನು ಹಾಗೂ ೯ ನಾವಿಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದವರು. ಪಾಕಿಸ್ಥಾನದ ಈ ಶಂಕಾಸ್ಪದ ಬೋಟು ಭಾನುವಾರ ಬೆಳಗ್ಗೆ ೧೦.೧೫ರ ಹೊತ್ತಿಗೆ ಭಾರತೀಯ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಬೋಟ್ ಹಾಗೂ ಅದರಳಗಿನ ನಾವಿಕರನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು.
Discussion about this post