Read - < 1 minute
ಪಡುಬಿದ್ರಿ, ಆ.28: ಭಾರತೀಯ ಜನತಾ ಪಾರ್ಟಿ, ಕಾಪು ವಿಧಾನಸಭಾ ಕ್ಷೇತ್ರ ಮಜೂರು ಗ್ರಾಮ ಸಮಿತಿಯ ಆಶ್ರಯದಲ್ಲಿ ಪಾದೂರು ಕುರಾಲ್ ಗದ್ದೆಯಲ್ಲಿ ಭಾನುವಾರ ನಡೆದ ಕೆಸರ್ಡ್ ಒಂಜಿ ಕಮಲ ಕೂಟದ-ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಸರ್ವಾಂಗೀಣ ಸಾಧನೆಗೈದ ಕುರ್ಕಾಲು ಗ್ರಾಮ ಸಮಿತಿ ನಗದು ಸಹಿತ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಕೊಂಡಿದೆ.
ಕಟಪಾಡಿ ಗ್ರಾಮ ಸಮಿತಿ ನಗದು ಸಹಿತ ದ್ವಿತೀಯ ಸ್ಥಾನಿಯಾಗಿದ್ದು, ಮಜೂರು ಗ್ರಾಮ ಸಮಿತಿ ನಗದು ತೃತೀಯ ಸಮಗ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುತ್ತದೆ.
ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರೀಡಾ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ವೈಯಕ್ತಿಕ, ಸಮಗ್ರ ತಂಡ ಪ್ರಶಸ್ತಿ, ಶಾಶ್ವತ ಫಲಕ, ಆಕರ್ಷಕ ನಗದು ಬಹುಮಾನಗಳನ್ನು ವಿತರಸಿಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಜಿ.ಪಂ. ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರ.ಕಾರ್ಯದರ್ಶಿಗಳಾದ ಮುರಲೀಧರ ಪೈ, ಜಿತೇಂದ್ರ ಶೆಟ್ಟಿ, ಯುವಮೋರ್ಚಾ ಕ್ಷೇತ್ರಾಧ್ಯಕ್ಷ ಪ್ರವೀಣ್ ಪೂಜಾರಿ, ಮಹಿಳಾಮೋರ್ಚಾ ಅಧ್ಯಕ್ಷೆ ಕೇಸರಿ ಯು., ಪ.ಜಾತಿ ಮೋರ್ಚಾ ಅಧ್ಯಕ್ಷ ಚಂದ್ರ ಮಲ್ಲಾರು, ಬಿಜೆಪಿ ಮುಖಂಡ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಸುಮಾಲಿನಿ, ರಮಾ ವೈ. ಶೆಟ್ಟಿ, ಶಿವರಾಮ ಶೆಟ್ಟಿ, ಜಿ.ಪಂ.ಸದಸ್ಯೆ ಶಿಲ್ಪಾ ಜಿ. ಸುವರ್ಣ, ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷೆ ಸಹನಾ ತಂತ್ರಿ ಬಹುಮಾನ ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಜೂರು ಗ್ರಾಮಸಮಿತಿ ಅಧ್ಯಕ್ಷ ಗಣೇಶ್ಶೆಟ್ಟಿ ಸ್ವಾಗತಿಸಿದರು. ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಟ್ಟಿ ವಾಚಿಸಿದರು. ಎಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Discussion about this post