ಮನಿಲಾ, ಸೆ.3: ಇಲ್ಲಿನ ದಾವಾವೋ ಮಾರುಕಟ್ಟೆಯಲ್ಲಿ ನಿನ್ನೆ ರಾತ್ರಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 14ಕ್ಕೂ ಹೆಚ್ಚು ಜನ ಮೃತಪಟ್ಟು, 67ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ನಗರ ಕೆಂಡ ಭಾಗದಲ್ಲಿರುವ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ. ಹತ್ತಿರದ ಆಸ್ಪತ್ರೆಗಳು ನೀಡಿರುವ ಮಾಹಿತಿ ಪ್ರಕಾರ ಈ ಸಾವಿನ ಸಂಖ್ಯೆ ತಿಳಿದಿದೆ ಎಂದು ಪೊಲೀಸ್‌ಠಾಣೆ ಕಮ್ಯಾಂರ್ಡ ಮಿಲ್ಗೆಸ್ ಡ್ರಿಜ್ ಹೇಳಿದ್ದಾರೆ.
ಸುಮಾರು ಬೆಳಗ್ಗೆ ೪ ಘಂಟೆಗೆ ರಾಷ್ಟ್ರಪತಿ ರೋಡ್ರಿಗೋ ದೂತೆರ್ಟ್ ಸ್ಫೋಟಗೊಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ರಾಜಧಾನಿ ಮನಿಲಾದಲ್ಲಿ ಕೂಡ ಕಟ್ಟೆಚ್ಚರ ವಹಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಸ್ಫೋಟದ ಹೊಣೆಯಲ್ಲಿ ಅಬು ಸೈಯಫ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
Discussion about this post