ಷಹಜಹಾನ್ಪುರ: ಸೆ:22; ದೇಶದಲ್ಲಿನ ಜನರು ತಮ್ಮ ತಮ್ಮ ಧರ್ಮದ ದೇವರ ಮೊರೆ ಹೋಗಿ ಪೂಜೆ-ಪುನಸ್ಕಾರ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪುಟಾಣಿ ಬಾಲಕ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿದಿನ ತಪ್ಪದೆ ಪೂಜೆ ಮಾಡುತ್ತಾ ಗಮನ ಸೆಳೆದಿದ್ದಾನೆ.
ಉತ್ತರ ಪ್ರದೇಶದ ಷಹಜಹಾನ್ಪುರ್ದಲ್ಲಿರುವ 12 ವರ್ಷದ ಬಾಲಕ ಕಾತರ್ಿಕ್ ಎಂಬ ಬಾಲಕ ಮನೆಯಲ್ಲಿ ಪ್ರತಿದಿನ ಪ್ರಧಾನಿ ಮೋದಿ ಭಾವಚಿತ್ರಕ್ಕೆ ತಪ್ಪದೆ ಪೂಜೆ ಸಲ್ಲಿಸುತ್ತಾನೆ. ಈತ ಮಾಡುವ ಊಟ ತಪ್ಪಿದ್ರೂ ಸಹ ಮೋದಿಗೆ ಸಲ್ಲಿಸುವ ಪೂಜೆ ಮಾತ್ರ ತಪ್ಪಿಸುವುದಿಲ್ಲವಂತೆ.
ಸದ್ಯ ಖಾಸಗಿ ಶಾಲೆಯಲ್ಲಿ 8ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾತರ್ಿಕ್, ಶಾಲೆಗೆ ಹೋಗುವ ಮೊದಲು ಬೆಳಗ್ಗೆ ಮೋದಿಗೆ ಪೂಜೆ ಸಲ್ಲಿಸಿ, ನಂತರ ಊಟ ಮಾಡುತ್ತಾನೆ. ಸಂಜೆ ಶಾಲೆಯಿಂದ ಮನೆಗೆ ಬಂದ ಮೇಲೆ ಅವರ ಮೇಲೆ ಗೀತೆ ಸಹ ರಚನೆ ಮಾಡುತ್ತಾನೆ.
ಪ್ರಧಾನಿ ಮೋದಿ ಭೇಟಿ ಮಾಡುವ ಆಸೆ:
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಮಹತ್ವದ ಆಸೆ ಇಟ್ಟುಕೊಂಡಿರುವ ಪುಟಾಣಿ ಬಾಲಕ ಕಾತರ್ಿಕ್, ಆಸೆ ಈಡೇರುವವರೆಗೆ ಈ ಪೂಜೆ ಮಾಡುತ್ತಾನಂತೆ. ಈಗಾಗಲೇ ಪ್ರಧಾನಿ ಮೋದಿಯವರಿಗಾಗಿ ಸುಮಾರು 12ಕ್ಕೂ ಹೆಚ್ಚು ಹಾಡು ಬರೆದಿದ್ದಾನೆ ಈ ಬಾಲಕ.
Discussion about this post