ಕೋಲ್ಕತ್ತಾ: ಭಾರತ ಕ್ರಿಕೆಟ್ ಆಟಗಾರರ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿದ್ದರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನವಾಗಿದೆ. ಆದರೆ ನ್ಯಾಯಾವಾಧಿ ಲೋಧಾ ಪಂದ್ಯ ನಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದ್ದಾರೆ.
ಕಳೆದ ವಾರ ಸೆ.30ರಂದು ಬಿಸಿಸಿಐ, ಸುಪ್ರೀಂಕೋರ್ಟ್ ನೇಮಿತ ಲೋಧಾ ಸಮಿತಿ ಶಿಫಾರಸ್ಸುಗಳನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಲೋಧಾ ಸಮಿತಿ ಬ್ಯಾಂಕುಗಳಿಗೆ ಪತ್ರ ಬರೆದು ಬಿಸಿಸಿಐ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಪತ್ರ ಬರೆದಿತ್ತು.
ಬ್ಯಾಂಕ್ ಖಾತೆಗಳು ರದ್ದಾಗಿರುವುದರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟೆಸ್ಟ್ ಗೆ ಕರಿನೆರಳು ಬಿದ್ದಿದೆ. ಬ್ಯಾಂಕ್ ಖಾತೆ ರದ್ದಾಗಿರುವುದರಿಂದ ಆಟಗಾರರ ಖಾತೆಗೆ ಹಣದ ಹರಿವು ಸ್ಥಗಿತವಾಗಲಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಅಧಿಕಾರಿಯೊಬ್ಬರ ಪ್ರಕಾರ, ಬಿಸಿಸಿಐ ಖಾತೆ ಸ್ಥಗಿತಗೊಂಡಿದ್ದರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯರದ್ದು ಮಾಡದೇಬೇರೆ ವಿಧಿಯಿಲ್ಲ ಎಂದು ಹೇಳಿದ್ದಾರೆ.
Discussion about this post