ಸೋಮವಾರಪೇಟೆ:ಅ:29 ಸಮೀಪದ ನಿಡ್ತ ಮೀಸಲು ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಕೊರಡು ಹಾಗು ಚಕ್ಕೆಗಳನ್ನಾಗಿಸುತ್ತಿದ್ದ ಸಂದರ್ಭ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಾಣಾವಾರ ಗಿರಿಜನರ ಹಾಡಿಯ ಶಂಕರ, ಆಲೂರು ಸಿದ್ದಾಪುರದ ಶರತ್ ಬಂಧಿತ ಆರೋಪಿಗಳು. ಕಡ್ಲೆಮಕ್ಕಿ ಹಾಡಿಯ ರಮೇಶ್, ನೇಗಳ್ಳೆ ಹಾಡಿಯ ಗಣೇಶ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಅಂದಾಜು 40ಸಾವಿರ ರೂ.ಮೌಲ್ಯದ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕಾರ್ಯಚರಣೆಯಲ್ಲಿ ಆರ್ಎಫ್ಒ ಮೊಯಿಸಿನ್ ಭಾಷ, ಸಿಬ್ಬಂದಿಗಳಾದ ಎಚ್.ಎಸ್.ಶಿವಕುಮಾರ್, ಎಚ್.ನಾಗರಾಜು, ಡಿ.ಎಂ.ಪರಮೇಶ್, ವಾಹನ ಚಾಲಕ ಚಂದ್ರನ್, ವಾಸು, ನಾಣಯ್ಯ ಭಾಗವಹಿಸಿದ್ದರು.
28ಎಸ್ಪಿಟಿ1-ಸೋಮವಾರಪೇಟೆ ಸಮೀಪದ ನಿಡ್ತ ಮೀಸಲು ಅರಣ್ಯದಲ್ಲಿ ಶ್ರೀಗಂಧ ಮರಗಳನ್ನು ಕಡಿದು ಸಾಗಿಸುತ್ತಿದ್ದ ಆರೋಪಿಗಳನ್ನು ಇಲ್ಲಿನ ಅರಣ್ಯ ಇಲಾಖೆ ಆರ್ಎಫ್ಒ ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ.
Discussion about this post