Read - < 1 minute
ನವದೆಹಲಿ, ಸೆ.29: ಉತ್ತಮ ಮೂಲ ಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಗಳ ಮೂಲಕ ಭಾರತ, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ 39ನೇ ಸ್ಥಾನಕ್ಕೇರಿದೆ. ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಹೋರಾಟದ ನಡುವೆಯೂ ಭಾರತ ವಿಶ್ವ ಆರ್ಥಿಕ ವೇದಿಕೆಪಟ್ಟಿಯಲ್ಲಿ ಅಭಿವೃದ್ಧಿ ಪಡೆಯುತ್ತಿರುವುದು ಜಾಗತಿಕ ಮತ್ಟದಲ್ಲಿ ನಿಜಕ್ಕೂ ಶ್ಲಾಘನೆಗೆ ಕಾರಣವಾಗಿದೆ.
ಪ್ರಬಲ ಆರ್ಥಿಕ ಬೆಳವಣಿಗೆ ಭಾರತದ ಈ ಸಾಧನೆಗೆ ಕಾರಣವಾಗಿದ್ದು, 138 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 39ನೇ ಸ್ಥಾನ ಪಡೆದಿದೆ. ಕಳೆದೆರಡು ವರ್ಷಗಳಲ್ಲಿಯೇ ಭಾರತ ಈ ಬಾರಿ ಗರಿಷ್ಠ ಸಾಧನೆ ಮಾಡಿದ್ದು, ಒಟ್ಟು 32 ರ್ಯಾಂಕ್ ಗಳ ಏರಿಕೆ ಕಂಡಿದೆ.
ಸಾರ್ವಜನಿಕ ಸೇವಗಳಲ್ಲಿ ಅಭಿವೃದ್ಧಿ, ವಿದೇಶಿ ಹೂಡಿಕೆ ಹೆಚ್ಚೆಚ್ಚು ಅವಕಾಶ ಹಾಗೂ ಹಣಕಾಸು ವ್ಯವಹಾರಗಳಲ್ಲಿನ ಪಾರದರ್ಶಕತೆಯೇ ಭಾರತದ ಸ್ಥಾನ ಏರಿಕೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಅಂತೆಯೇ ಭಾರತ ಹಲುವ ವಿಚಾರಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದು, ಪ್ರಮುಖವಾಗಿ ಕಾರ್ಮಿಕರ ಸಮಸ್ಯೆ, ಸಾರ್ವಜನಿಕ ಮಾರುಕಟ್ಟೆಯ ದಕ್ಷತೆ ಹಾಗೂ ಮೂಲಸೌಕರ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿದೆ ಎಂದು ಆರ್ಥಿಕ ವೇದಿಕೆ ಅಭಿಪ್ರಾಯಪಟ್ಟಿದೆ.
ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಪಟ್ಟಿಯಲ್ಲಿ ಭಾರತ ಪ್ರಬಲ ಪೈಪೋಟಿ ನೀಡುತ್ತಿದ್ದ ರಷ್ಯಾ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಹಿಂದಿಕ್ಕಿದ್ದು, ಚೀನಾ 28ನೇ ಸ್ಥಾನಗಳಿಸಿ ಭಾರತಕ್ಕಿಂತ ಮುಂದಿದೆ. ಉಳಿದಂತೆ ಶ್ರೀಲಂಕಾ 71ನೇ ಸ್ಥಾನ, ಭೂತಾನ್ 97ನೇ ಸ್ಥಾನ, ನೇಪಾಳ 98ನೇ ಸ್ಥಾನ ಹಾಗೂ ಬಾಂಗ್ಲಾದೇಶ 106ನೇ ಸ್ಥಾನ ಪಡೆದಿದೆ.
ಕುಸಿದ ಪಾಕಿಸ್ಥಾನ
ಪಾಕಿಸ್ತಾನೆಯನ್ನು ಪ್ರಾಯೋಜಿಸುತ್ತಿರುವ ಆರ್ಥಿಕ ವೇದಿಕೆ ಪಟ್ಟಿಯಲ್ಲಿ 122ನೇ ಸ್ಥಾನ ಪಡೆದಿದೆ. ಭಯೋತ್ಪಾದನೆ ಪಾಕಿಸ್ತಾನ ಪ್ರಗತಿಗೆ ಮುಳುವಾಗಿದ್ದು, ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಪಾಕಿಸ್ತಾನ ಅಲ್ಪ ಪ್ರಗತಿ ಸಾಧಿಸಿದೆ. ಭ್ರಷ್ಟಾಚಾರ, ಅಸ್ಥಿರ ಆಡಳಿತ, ಕ್ರಿಮಿನಲ್ ಪ್ರಕರಣಗಳ ಏರಿಕೆ, ತೆರಿಗೆ ಪಾಕಿಸ್ತಾನ ಪ್ರಗತಿಗೆ ಅಡ್ಡಗಾಲು ಹಾಕಿದೆ ಎಂದು ಆರ್ಥಿಕ ವೇದಿಕೆ ಹೇಳಿದೆ.
ವಿಶ್ವ ಆರ್ಥಿಕ ವೇದಿಕೆ ಪಟ್ಟಿಯಲ್ಲಿ ಸ್ವಿಟ್ಜರ್ ಲೆಂಡ್ ಅಗ್ರಸ್ಥಾನ ಪಡೆದಿದ್ದು, ಸಿಂಗಾಪುರ, ಅಮೆರಿಕ ನೆದರ್ ಲೆಂಡ್ ಹಾಗೂ ಜರ್ಮನಿ ನಂತರದ ಸ್ಥಾನ ಪಡೆದಿವೆ.
Discussion about this post