ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಶಿ ರಾಶಿ ಚಿನ್ನ, ಬೆಳ್ಳಿ, ನೋಟಿನ ಕಂತೆಗಳು, ಅಪಾರ ಆಸ್ತಿ ದಾಖಲೆ ಪತ್ರಗಳು… ಹೌದು ಇದೆಲ್ಲಾ ಎಸಿಬಿ ಅಧಿಕಾರಗಳ ದಾಳಿ ACB Raid ವೇಳೆ ಪತ್ತೆಯಾಗಿದ್ದು. ರಾಜ್ಯದ 75ಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಇಲಾಖೆಗಳ 18 ಅಧಿಕಾರಿಗಳ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಶೋಧ ನಡೆಸುತ್ತಾ ಹೋದ ಅಧಿಕಾರಿಗಳಿಗೆ ಶಾಕ್ ಆಗಿದೆ.
ಎಸ್ಪಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಸುಮಾರು 100 ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಬೆಂಗಳೂರು ನಗರ ಸೇರಿದಂತೆ 9 ವಿವಿಧ ಸ್ಥಳಗಳಲ್ಲಿ 9 ಮಧ್ಯವರ್ತಿಗಳು/ಏಜೆಂಟರು/ ಭ್ರಷ್ಟ/ಅಕ್ರಮ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರುವ/ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ ಅವ್ಯವಹಾರಗಳು ಮತ್ತು ಇತರ ಅಕ್ರಮಗಳಲ್ಲಿ ತೊಡಗಿರುವ ಶಂಕಿತರಿಗೆ ಸಂಬಂಧಿಸಿದಂತೆ ಶೋಧ ನಡೆಸಿದೆ.
ಚಿಕ್ಕಮಗಳೂರಿನ ಪಿಡಬ್ಲ್ಯುಡಿ ಎಇಇ ಗವಿ ರಂಗಪ್ಪ ಮನೆಯಲ್ಲಿ ಅಪಾರ ಚಿನ್ನದ ಬಿಸ್ಕತ್ ಪತ್ತೆಯಾಗಿದೆ. ಚಿಕ್ಕಮಗಳೂರಿನ ಗಾಂಧಿನಗರ ಬಡಾವಣೆಯಲ್ಲಿ ಇವರ ಮನೆಯಿದ್ದು, ದಾಳಿ ನಡೆಸಿದ ವೇಳೆ ಅಧಿಕಾರಿಗಳಿಗೆ 750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2.74 ಲಕ್ಷ ರೂ. ಪತ್ತೆಯಾಗಿದೆ.
Also read: ಬಿಗ್ ಶಾಕ್! ಗೃಹ ಬಳಕೆಯ ಸಿಲಿಂಡರ್ ಬೆಲೆ 50ರೂ. ಹೆಚ್ಚಳ
ದಾಳಿಯ ವಿವರ ಇಂತಿದೆ:
ರಘು ಬಿ ಎನ್.ಚಾಮರಾಜಪೇಟೆ.
ಮೋಹನ್, ಮನೋರಾಯನಪಾಳ್ಯ. ಆರ್.ಟಿ. ನಗರ.
ಮನೋಜ್, ದೊಮ್ಮಲೂರು.
ಮುನಿರತ್ನ @ ರತ್ನವೇಲು, ಕೆನಗುಂಟೆ, ಮಲ್ತಳ್ಳಿ.
ತೇಜು@ತೇಜಸ್ವಿ.ಆರ್ ಆರ್ ನಾಗರಾ.
ಅಶ್ವತ್#ಮುದ್ದಿನಪಾಳ್ಯ ಅಶ್ವತ್.ಕೆಜಿ ಸರ್ಕಲ್,ಮುದ್ದಿನಪಾಳ್ಯ.
ರಾಮ ಚಾಮುಂಡೇಶ್ವರಿನಗರ, ಬಿಡಿಎ ಬಡಾವಣೆ.
ಲಕ್ಷ್ಮಣ, ಚಾಮುಂಡೇಶ್ವರಿ ನಗರ, ಬಿಡಿಎ ಲೇಔಟ್.
ಚಿಕ್ಕಹನುಮ್ಮಯ್ಯ, ಮುದ್ದಿನಪಾಳ್ಯ, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post