ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಸರಾ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಇಬ್ಬರು ಗಂಭೀರ ಗಾಯಗೊಂಡಿರುವ ಎರಡು ಪ್ರತ್ಯೇಕ ಘಟನೆ ವಿಜಯ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೊಣ್ಣೆ ಮತ್ತು ಮಾರಕಾಸ್ತ್ರಗಳಿಂದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ. ಮಾಗಡಿ ರೋಡ್ ಹಾಗೂ ವಿಜಯ ನಗರ ಠಾಣಾ ವ್ಯಾಪ್ತಿಯ ಬಾರ್‌ಗಳ ಮುಂದೆ ಚೇತನ್ ಶೆಟ್ಟಿ ಹಾಗೂ ಚೇತನ್ ಸೋಮಶೇಖರ್ ಎಂಬುವರ ಮೇಲೆ ದಾಳಿ ನಡೆದಿದ್ದು, ಘಟನೆ ಬಳಿಕ ಕಿಡಿಗೇಡಿಗಳ ಗುಂಪು ಪರಾರಿಯಾಗಿದೆ ಎನ್ನಲಾಗಿದೆ.
Also read: ಬ್ಯಾಂಕ್‌ನಲ್ಲಿ 12ಕೋಟಿ ರೂ. ಲೂಟಿ ಮಾಡಿದ್ದ ಕದೀಮನ ಬಂಧನ! ಹೇಗಿತ್ತು ಕಾರ್ಯಾಚರಣೆ? ಇಲ್ಲಿದೆ ಮಾಹಿತಿ
ಈ ಸಂಬಂಧ ಮಾಗಡಿ ರೋಡ್ ಹಾಗೂ ವಿಜಯ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post