ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಿನ್ನೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ Power star Puneeth Rajkumar ಅವರ ಜನ್ಮದಿನ ಆಚರಣೆ ಹಾಗೂ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಅವರ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ದಂಡೇ ಹರಿದುಬರುತ್ತಿದೆ.
ಅಪ್ಪು ಜನ್ಮದಿನದ ಅಂಗವಾಗಿ ನಿನ್ನೆ ಒಂದೇ ದಿನ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಸಮಾಧಿ ದರ್ಶನ ಪಡೆದಿದ್ದಾರೆ. ನಿನ್ನೆ ಬೆಳಗಿನ ಜಾವದಿಂದಲೇ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸುತ್ತಿದ್ದು, ನೆಚ್ಚಿನ ನಟನ ಸಮಾಧಿ ಮುಂಭಾಗದಲ್ಲಿ ಪುಷ್ಪಗುಚ್ಚ ಇಟ್ಟು ನಮನ ಸಲ್ಲಿಸುತ್ತಿದ್ದರು.
Also read: ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಜೇಮ್ಸ್: ರೆಕಾರ್ಡ್ ಸೃಷ್ಠಿಸಿದ ಮೊದಲ ಕಲೆಕ್ಷನ್ ಎಷ್ಟು ಗೊತ್ತಾ?
ಇಡಿಯ ಕಂಠೀರವ ಸ್ಟುಡಿಯೋ ಪ್ರದೇಶ ಸಂಫೂರ್ಣ ಅಪ್ಪು ಮಯವಾಗಿದ್ದು, ಎಲ್ಲೆಲ್ಲೂ ಅವರ ಕುರಿತಾಗಿನ ಘೋಷಣೆ ಮೊಳಗುತ್ತಿದೆ. ಸಾವಿರಾರು ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಿದೆ. ಅಲ್ಲದೇ, ಅಭಿಮಾನಿಗಳಿಂದ ಅನ್ನದಾನ ನಿರಂತರವಾಗಿ ಸಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post