ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಜಿಎಫ್ 2 KGF 2 ಮೂಲಕ ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶಕ ಎಂಬ ಖ್ಯಾತಿಗೆ ಪಾತ್ರವಾಗಿರುವ ಪ್ರಶಾಂತ್ ನೀಲ್ Prashanth Neel ಸದ್ಯಕ್ಕೆ ಸ್ಯಾಂಡಲ್’ವುಡ್’ಗೆ ಸಿಗುವುದಿಲ್ಲ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿವೆ.
ಕೆಜಿಎಫ್ ಸಕ್ಸಸ್ ನಂತರ ತೆಲುಗು ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾದಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಅಗಿದ್ದಾರೆ. ಈಗಾಗಲೇ ಶೇ.35ರಿಂದ 40 ರಷ್ಟು ಚಿತ್ರೀಕರಣ ಮುಗಿಸಿರುವ ಪ್ರಶಾಂತ್ ನೀಲ್ ಸದ್ಯದಲ್ಲೇ ಸಲಾರ್ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.
ಇದಾದ ನಂತರ ಜ್ಯೂನಿಯರ್ ಎನ್’ಟಿಆರ್ ಜೊತೆ ಹೊಸ ಸಿನಿಮಾ ಆರಂಭಿಸಲಿದ್ದಾರೆ ನೀಲ್. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಫಸ್ಟ್ ಲುಕ್ ಸಖತ್ ವೈರಲ್ ಆಗಿದೆ.
Also read: ವಿಐಎಸ್’ಎಲ್ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಸೌಲಭ್ಯ
ಈ ಸಿನಿಮಾದ ನಂತರ ಇನ್ನೊಂದು ತೆಲುಗು ಸಿನಿಮಾ ನಿರ್ದೇಶಿಸಲಿದ್ದಾರೆ ನೀಲ್. ಹೀಗಾಗಿ, ಸದ್ಯ ನಾಲ್ಕೈದು ವರ್ಷ ಪ್ರಶಾಂತ್ ನೀಲ್ ಸ್ಯಾಂಡಲ್’ವುಡ್’ಗೆ ಬರುವುದಿಲ್ಲ ಎಂಬ ಮಾತುಗಳು ಗಾಂಧಿ ನಗರದ ಗಲ್ಲಿಯಲ್ಲಿ ಹರಿದಾಡುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post