ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಜಯನಗರ 8ನೇ ಬ್ಲಾಕ್‌ನ ಜೆ.ಎಸ್.ಎಸ್ ಆಡಿಟೋರಿಯಂನಲ್ಲಿ ಮೇ 7ರ ಶನಿವಾರ ಸಂಜೆ 5.30ಕ್ಕೆ ಸ್ಫೂರ್ತಿ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಎಲ್. ಶ್ರೀಧರ್ ಮತ್ತು ಡಾ. ಎಸ್. ಪದ್ಮಶ್ರೀ ರವರ ಪುತ್ರಿ ಕು. ಎಸ್. ರಸಜ್ಞ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ನಟುವಾಂಗದಲ್ಲಿ ಗುರು ವಿದುಷಿ ಸುಮ ರಾಜೇಶ್ , ವಿದ್ವಾನ್ ಡಿ ಎಸ್ ಶ್ರೀವತ್ಸ – ಗಾಯನ , ಮೃದಂಗ- ವಿ.ನಾರಾಯಣಸ್ವಾಮಿ, ಕೊಳಲು- ವಿ.ಮಹೇಶ್ ಸ್ವಾಮಿ , ವೀಣ- ವಿ.ಗೋಪಾಲ್ ವೆಂಕಟರಮಣ, ಚಿ. ಸಹಿಷ್ಣು ಶ್ರೀಧರ ಶಾಸ್ತ್ರೀ – ನಿರೂಪಣೆಯೊಂದಿಗೆ ರಂಗಪ್ರವೇಶದ ಸಂಭ್ರಮ ರಂಗೇರಲಿದೆ.
Also read: ಸಿದ್ಧಾರೂಢ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೃಂದಾವನಕ್ಕೆ ಗಂಧದ ಲೇಪನ…
ಜಯದೇವ ಇನ್ಸ್ ಟ್ಯೂಟ್ ಆಫ್ ಕಾರ್ಡಿಯಾಲಜಿಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್ .ಮಂಜುನಾಥ್, ಉಡುಪ ಫೌಂಡೇಷನ್ ಟ್ರಸ್ಟೀ ಸಂಧ್ಯಾ ಉಡುಪ ಹಾಗೂ ಪದ್ಮಾಲಯ ಡ್ಯಾನ್ಸ್ ಫೌಂಡೇಷನ್‌ನ ಸಹ ಕಲಾತ್ಮಕ ನಿರ್ದೇಶಕಿ ಜನನಿ ಮುರಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post