ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿರುವ ಚಾರ್ಲಿ 777 Charlie 777 ಚಿತ್ರವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರು ಅಕ್ಷರಶಃ ಮಕ್ಕಳಂತೆ ಗಳಗಳನೆ ಕಣ್ಣೀರು ಸುರಿಸಿದ್ದಾರೆ.
ಬೆಂಗಳೂರಿನ ಓರಿಯನ್ ಮಾಲ್’ನಲ್ಲಿ ನಾಯಕ ರಕ್ಷಿತ್ ಶೆಟ್ಟಿ, Rakshith Shetty ಕೆಲವು ಸಂಪುಟ ಸದಸ್ಯರೊಂದಿ ಚಾರ್ಲಿ 777 ವೀಕ್ಷಿಸಿದ ಮುಖ್ಯಮಂತ್ರಿಗಳು ಚಿತ್ರದಲ್ಲಿ ಬರುವ ಚಾರ್ಲಿ ಹೆಸರಿನ ನಾಯಿಯ ಪಾತ್ರವನ್ನು ವೀಕ್ಷಿಸಿ ಅವರ ಮನೆಯಲ್ಲಿದ್ದ ಸನ್ನಿ ನಾಯಿಯ ತುಂಟಾಟವನ್ನು ಮೆಲಕುಕಾಕಿದರು.
ಚಲನಚಿತ್ರದ ಕೊನೆಯಲ್ಲಿ ಚಾರ್ಲಿ ನಾಯಿಯು ಸಾವನ್ನಪ್ಪುತ್ತದೆ. ಅತೀ ಆತ್ಮಿಯವಾಗಿದ್ದ ಸಾಕು ಪ್ರಾಣಿಯು ತಮ್ಮನ್ನು ಅಗಲುವ ಸನ್ನಿವೇಶವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳ ಮಾತೃಹೃದಯವು ಭಾವುಕವಾಗಿ ಕಣ್ಣಿನಲ್ಲಿ ಕಂಬನಿಯನ್ನು ತರಸಿತ್ತು.
Also read: ನ್ಯಾಯಮಾರ್ಗದಲ್ಲಿ ಸಂಪಾದಿಸಿದ ಹಣ ಎಂದಿಗೂ ಸುರಕ್ಷಿತ: ವಿಧುಶೇಖರ ಭಾರತೀ ಸ್ವಾಮೀಜಿ
ಮುಖ್ಯಮಂತ್ರಿಗಳು ಆ ಕ್ಷಣದಲ್ಲಿ ದುಃಖವನ್ನು ತಡೆಯದೇ ಮುದ್ದು ಮಕ್ಕಳಂತೆ ಗಳಗಳನೇ ಅತ್ತುಬಿಟ್ಟರು. ಎಲ್ಲರೆದುರು ಅಳಬಾರದೆಂದು ತಮ್ಮ ಮನಸ್ಸನ್ನು ಹತೋಟಿಯಲ್ಲಿರಿಸಲು ಪ್ರಯತ್ನಿಸಿದರೂ ಸಹ ತಮ್ಮ ಮುಗ್ದ ಮನಸ್ಸು ಹಾಗೂ ಮುಗ್ದ ಭಾವನೆಗಳ ಪರಿಣಾಮ ಕಣ್ಣಿನಲ್ಲಿ ಕಂಬನಿಗಳು ತಾವಾಗಿಯೇ ಹೊರಗೆ ಬರಲು ಪ್ರಾರಂಭಿಸಿದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post