ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡ ಭದ್ರಾವತಿಯ ನ್ಯೂಟೌನ್ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾಯಾವತಿ ಅವರು ಪ್ರಥಮ ಸ್ಥಾನ ಪಡೆದು, ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಡಯಟ್’ನಲ್ಲಿ ನಿನ್ನೆ ನಡೆದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ ಮಾಯಾವತಿ, ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತಮ್ಮ ವಿಚಾರವನ್ನು ಪರಿಣಾಮಕಾರಿಯಾಗಿ ಮಂಡಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಜಿಲ್ಲಾ ಮಟ್ಟದಿಂದ ವಿಭಾಗೀಯ ಮಟ್ಟಕ್ಕೆ ಈಕೆ ಆಯ್ಕೆಯಾಗಿದ್ದಾರೆ.
ಈಕೆಗೆ ಡಯಟ್ ಉಪನಿರ್ದೇಶಕ ಬಸವರಾಜಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.
Also read: ಗಂಗಾಮತ ಸಮಾಜ ಅಧ್ಯಕ್ಷ ಸ್ಥಾನದಿಂದ ದೇವೇಂದ್ರಪ್ಪರನ್ನು ಪದಚ್ಯುತಗೊಳಿಸಲು ನಿರ್ಣಯ
ಈ ಪ್ರತಿಭಾನ್ವಿಯ ವಿದ್ಯಾರ್ಥಿನಿಯನ್ನು ತರಬೇತುಗೊಳಿಸಿದ ವಿಜ್ಞಾನ ಶಿಕ್ಷಕಿ ಜಯಲಕ್ಷ್ಮೀ ಅವರನ್ನು ಕ್ಷೇತ್ರ ಕ್ಷಣಾಧಿಕಾರಿ ನಾಗೇಂದ್ರಪ್ಪ, ಉಪಪ್ರಾಚಾರ್ಯರಾದ ಟಿ.ಎಸ್. ಸುಮನಾ, ಎಸ್’ಡಿಎಂಸಿ ಸಮಿತಿ ಸದಸ್ಯರು ಮತ್ತು ಎಲ್ಲಾ ಶಿಕ್ಷಕ ವರ್ಗದವರು ಹಾರ್ದಿಕವಾಗಿ ಶುಭ ಕೋರಿ ಅಭಿನಂದಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















