ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಸಾಮಾನ್ಯವಾಗಿ ರಸ್ತೆಗಳಲ್ಲಿ ಗುಂಡಿಬಿದ್ದಾಗ ಪಿಡಬ್ಲುಡಿ ಇಲಾಖೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತದೆ. ಆದರೆ ಇಲ್ಲಿ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳು ತಾವೇ ಗುಂಡಿ ಮುಚ್ಚುವ ಮೂಲಕ ನಡೆಯಲಿದ್ದ ಅನಾಹುತಗಳಿಗೆ ತೆರೆ ಎಳೆದಿದ್ದಾರೆ.
ಈ ಘಟನೆ ನಡೆದಿರುವುದು ಎಲ್ಲಿ ಅಂತೀರಾ ಹೌದು… ಚಳ್ಳಕೆರೆ ಹಾಗೂ ಪಾವಗಡ ಮುಖ್ಯರಸ್ತೆಯ ಮಧ್ಯದ ದ್ಯಾವರನಹಳ್ಳಿ ಏರ್ ಔಟ್ ಸಮೀಪ ಮುಖ್ಯರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಅಪಘಾತಗಳು ಸಂಭವಿಸುತ್ತಿದ್ದವು. ಹಾಗೂ ಆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಇನ್ನೂ ಕೆಲವರು ಅಫಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ದಿನ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ತಹಶೀಲ್ದರ್ ರಘುಮೂರ್ತಿ ಅವರೇ ಖುದ್ದ ತಮ್ಮ ಸಿಬ್ಬಂದಿಯೊಂದಿಗೆ ಪಿಎನ್‌ಸಿ ಕಂಪನಿಯ ಸಹಕಾರದೊಂದಿಗೆ ಸ್ವತಃ ಚಲಿಕೆ ಹಿಡಿದು ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿ ಮಾನವೀಯತೆ ಮೆರೆದಿದ್ದಾರೆ.
Also read: ಜೂ.30ರಂದು ಬೃಹತ್ ಉದ್ಯೋಗ ಮೇಳ
ಈ ಕಾರ್ಯವನ್ನು ಗಮನಿಸಿದ ಸವಾರರು ಹಾಗೂ ಸಾರ್ವಜನಿಕರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರ್.ಐ. ಲಿಂಗೆಗೌಡ, ಗ್ರಾಮಲೆಕ್ಕಿಗರಾದ ರಘುನಾಥ ಸಿಂಗ್, ಕೇಶವಚಾರಿ, ಸಂಘರ್ಷ ಬಾದ್ದರುಬು, ಶಿವಮೂರ್ತಿ, ಉಮೇಶ, ಗ್ರಾಮ ಸಹಾಯಕರಾದ ರಾಜಬಾಬು ಓಬಳೇಶ ಹಾಗೂ ಸಾರ್ವಜನಿಕರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post