ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ತಾಲೂಕಿನ ಸಾಣಿಕೆರೆ ಗ್ರಾಮಪಂಚಾಯಿತಿ ಅಧ್ಯಕ್ಷೆಯಾಗಿ ಶೃತಿ ಚಂದ್ರಕಾಂತ್, ಉಪಾಧ್ಯಕ್ಷರಾಗಿ ನಾಗರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಎನ್. ರಘುಮೂರ್ತಿ ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ಸಿಗುವುದು ಕಷ್ಟ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕೆಲಸ ಮಾಡುವುದರೊಂದಿಗೆ ಜನರಿಗೆ ಉತ್ತಮ ಸೇವೆ ನೀಡುವಂತೆ ಸಲಹೆ ನೀಡಿದರು.
ಗಾಂಧೀಜಿಯವರು ಕಂಡ ಕನಸು ನನಸಾಗಿಸಲು ಗ್ರಾಮಸ್ವರಾಜ್, ಪಂಚಾಯಿತಿ ಮಟ್ಟದಲ್ಲಿ ನೈರ್ಮಲೀಕರಣ ಸ್ವಚ್ಚತೆ, ಶಿಕ್ಷಣಕ್ಕೆ ಹೆಚ್ಚು ಒತ್ತು, ನಿವೇಶನ ಹಾಗೂ ವಾಸಕ್ಕೆ ಸೂರುಗಳ ವ್ಯವಸ್ಥೆ, ಕುಡಿಯುವ ನೀರಿಗೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿದಾಗ ಮಾತ್ರ ಅವರ ಸಂದೇಶಗಳಿಗೆ ನಾವು ಕೊಡುವಂತಹ ಕಾಣಿಕೆಯಾಗುತ್ತದೆ ಎಂದರು.
ಬಡವರು, ನಿರ್ಗತಿಕರು ಹಾಗೂ ವಿಕಲಚೇತನರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು. ಅವರಿಗೆ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗುವಂತೆ ಶ್ರಮವಹಿಸಬೇಕು. ಗ್ರಾಮ ಪಂಚಾಯಿತಿ ಯೋಜನೆ ರೋಪಿಸುವಾಗ ಮುಂದಿನ ೩೦ ವರ್ಷದ ದೃಷ್ಟಿಕೋನ ಇಟ್ಟುಕೊಂಡು ಯೋಜನೆಗಳನ್ನು ರೂಪಿಸವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶೃತಿ ಚಂದ್ರಕಾಂತ್, ಉಪಾಧ್ಯಕ್ಷರಾದ ನಾಗರಾಜ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ರಾಜಸ್ವನಿರೀಕ್ಷಕರ ಲಿಂಗೇಗೌಡ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾಮಲೆಕ್ಕಿಗ ಉಮೇಶ್, ಕೇಶವಾಚಾರಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪೋಲಿಸ್ ಸಿಬ್ಬಂದಿಗಳು ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post