ಕಲ್ಪ ಮೀಡಿಯಾ ಹೌಸ್ | ಛತ್ತರ್‌ಪುರ |
ಮಗುವಿನ ಮೃತದೇಹ ಸಾಗಿಸಲು ವಾಹನ ವ್ಯವಸ್ಥೆ ಸಿಗದ ಹಿನ್ನೆಲೆ ಬಾಲಕಿ ಶವವನ್ನು ತಂದೆಯೇ ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವ ಘಟನೆ ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ಮಗುವಿನ ಆರೋಗ್ಯ ಹದಗೆಟ್ಟಿದ್ದರಿಂದ ಚಿಕಿತ್ಸೆಗಾಗಿ ದಮೋಹ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ. ಅದೇದಿನ ಬಾಲಕಿ ಸಾವನ್ನಪ್ಪಿದ್ದು, ಮಗುವಿನ ಮೃತದೇಹ ಕೊಂಡೊಯ್ಯಲು ಅಂಬ್ಯುಲೆನ್ಸ್ ಸಿಗದ ಹಿನ್ನೆಲೆ ತಂದೆ ಲಕ್ಷ್ಮಣ್ ಅಹಿರ್ವಾರ್ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ ಎನ್ನಲಾಗಿದೆ.
Ambulance Missing: In Madhya Pradesh a family had to carry the deadbody of 4-year-child on shoulders as he couldn’t get a hearse van or an ambulance. @TheQuint @QuintHindi pic.twitter.com/NiMupXfgJj
— Vishnukant (@vishnukant_7) June 10, 2022
ಮಗುವಿನ ಮೃತ ದೇಹ ಕೊಂಡೊಯ್ಯಲು ಆಂಬ್ಯುಲೆನ್ಸ್ ಕೇಳಿದರೂ ಆಸ್ಪತ್ರೆ ಸಿಬ್ಬಂದಿಯವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಲಿಲ್ಲ. ಖಾಸಗಿ ವಾಹನ ವ್ಯವಸ್ಥೆ ಮಾಡಲು ನಮ್ಮಲ್ಲಿ ಹಣವಿಲ್ಲದ ಕಾರಣ ಬಾಲಕಿಯ ದೇಹವನ್ನು ಬಟ್ಟೆಯಲ್ಲಿ ಸುತ್ತಿ ಬಕ್ಸ್ವಾಹಾಗೆ ಬಸ್‌ನಲ್ಲಿ ತೆರಳಿದೆವು ಎಂದು ಬಾಲಕಿಯ ಅಜ್ಜ ಮನ್ಸುಖ್ ಅಹಿರ್ವಾರ್ ಹೇಳಿದ್ದಾರೆ.
ಪೌಡಿ ಗ್ರಾಮಕ್ಕೆ ಶವ ಸಾಗಿಸಲು ವಾಹನ ವ್ಯವಸ್ಥೆ ಒದಗಿಸುವಂತೆ ನಗರ ಪಂಚಾಯತ್‌ಗೆ ಮನವಿ ಮಾಡಿದರೂ ಅವರು ಸಹ ನಿರಾಕರಿಸಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post