ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಭಾರೀ ಮಳೆಯ ಪರಿಣಾಮ ಇಲ್ಲಿನ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.
ಹೊರನಾಡು ಹಾಗೂ ಕಳಸ Horanadu-Kalasa ನಡುವೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಭದ್ರಾ ನದಿಯ ಅಬ್ಬರಕ್ಕೆ ಮುಳುಗಡೆಗೊಂಡಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಸೇತುವೆ ಮುಳುಗಡೆಗೊಂಡಿದ್ದರೂ ಕೆಲವು ವಾಹನಗಳು ಇದರ ಮೇಲೆಯೇ ಚಲಿಸುತ್ತಿವೆ ಎಂದು ಹೇಳಲಾಗಿದ್ದು, ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post