ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಶ್ರೀ ಉಮಾಮಹೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕೃಷ್ಣ ಪ್ರಸಾದ್ ಆಚಾರ್ಯ ಕೈಂತಿಲ ಛಾಯಾಗ್ರಹಣದಲ್ಲಿ ಮೂಡಿಬಂದ ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತೆ ವೀಡಿಯೋ ” shutter up films ” youtube channel ನಲ್ಲಿ ಬಿಡುಗಡೆಗೊಳಿಸಲಾಯಿತು.
ವಿಟ್ಲ ಅರಮನೆಯ ಕ್ರಷ್ಣಯ್ಯ ಕೆ ಇವರ ದಿವ್ಯ ಉಪಸ್ಥಿತಿಯಲ್ಲಿ ಕುಂಟುಕುಡೇಲು ಬ್ರಹ್ಮ ಶ್ರೀ ವೇದಮೂರ್ತಿ ರಘುರಾಮ ತಂತ್ರಿಗಳ ದಿವ್ಯಹಸ್ತದಲ್ಲಿ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಭಕ್ತಿಗೀತೆ ವೀಡಿಯೋ ಬಿಡುಗಡೆಗೊಂಡಿದೆ.
” Shutterup films ” creations ” ಧ್ವನಿ ತರಂಗ ” ಪ್ರಸ್ತುತಿ “ಧರೆಯಾಳೋ ಸ್ವಾಮಿ ನೀನೇ ” ಭಕ್ತಿಗೀತೆಗೆ ಕಾರ್ತಿಕ್ ಆಚಾರ್ಯ ಕೈಂತಿಲ ಸಾಹಿತ್ಯ ಬರೆದಿದ್ದಾರೆ. ಮಾನಸ ಆಚಾರ್ಯ ಕಲ್ಲಡ್ಕ ಇವರ ಮಧುರವಾದ ಧ್ವನಿಯಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಭರತನಾಟ್ಯ ವಿಧುಷಿ ಕಾವ್ಯ ಶ್ರೀ ಅಡ್ಡಾಳಿ ಇವರು ಹೆಜ್ಜೆ ಹಾಕಿದ್ದಾರೆ ಹಾಗೂ ಹಲವಾರು ವೇದಿಕೆಗಳಲ್ಲಿ ಅಬಿನಯಿಸಿದ ಬಾಲಪ್ರತಿಭೆಗಳಾದ ಮೋನಿಷ್ ಮತ್ತು ಪ್ರಾಪ್ತಿ ಮಾಮೆಶ್ವರ ಪಾತ್ರವನ್ನು ನಿರ್ವಹಿಸಿದ್ದಾರೆ.
Also read: ಸೊರಬ: ರಾಜಕೀಯ ವೈಷಮ್ಯ ಹಿನ್ನೆಲೆ ವ್ಯಕ್ತಿ ಕೊಲೆ – ಆರೋಪಿ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post