ಕಲ್ಪ ಮೀಡಿಯಾ ಹೌಸ್ | ದಕ್ಷಿಣ ಕನ್ನಡ |
ಕಾರ್ಕಳ ಸಾಮಾಜಿಕ ಜಾಲತಾಣಗಳು ಸೇರಿದಂತೆ ಕಾರ್ಕಳ, ಹೆಬ್ರಿ ಭಾಗದಲ್ಲಿ ಅನ್ಯಾಯದ ವಿರುದ್ಧ ಸದಾ ಹೋರಾಡುತ್ತಿದ್ದ ಸ್ವಯಂ ಸೇವಕ ಸುದೀಪ್ ಶೆಟ್ಟಿ Sudeep Shetty ಅಕಾಲಿಕ ನಿಧನರಾಗಿದ್ದಾರೆ.
ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೊಕೇದ ಉಡಲ್ ಸುದೀಪ್ ಎಂದೇ ಖ್ಯಾತರಾಗಿದ್ದ ಇವರು, ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದರು.
ಜಿಲ್ಲೆ ಹಾಗೂ ಹಿಂದೂ ಧರ್ಮದ ಪರ ಸದಾ ಸಾಮಾಜಿಕ ಜಾಲತಾಣಗಳ ಮುಖಾಂತರ ಹೋರಾಡುವುದು, ಅನ್ಯಾಯವನ್ನು ಧಿಕ್ಕರಿಸುವುದು ಸೇರಿ ಸಮಾಜಕ್ಕಾಗಿ ಸದಾ ಮಿಡಿಯುತ್ತಿದ್ದರು. ಇವರ ಅಕಾಲಿಕ ನಿಧನ ತೀರಾ ನಷ್ಟವನ್ನುಂಟು ಮಾಡಿದೆ. ಸುದೀಪ್ ಶೆಟ್ಟಿ ನಿಧನಕ್ಕೆ ಕಲ್ಪ ಮೀಡಿಯಾ ಹೌಸ್ ಕಂಬನಿ ಮಿಡಿಯುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post