ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಒಂದೆಡೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ Petrol-Diesel Price ಇಳಿಕೆಯಾಗಿದ್ದರೆ ನೆರೆಯ ಪಾಕಿಸ್ಥಾನದಲ್ಲಿ ಇವುಗಳ ಬೆಲೆ ಏರಿಕೆಯಾಗಿದ್ದು, ಜನರು ತತ್ತರಿಸುವಂತಾಗಿದೆ.
ಅಲ್ಲಿನ ಸರ್ಕಾರ ಇವುಗಳ ಬೆಲೆಯಲ್ಲಿ ಲೀಟರ್’ಗೆ ರೂ. 30 ಏರಿಕೆ ಮಾಡಿದ್ದು, ಇದರಂತೆ, ಇಸ್ಲಾಮಾಬಾದ್’ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 129.86 ಹಾಗೂ ಡೀಸೆಲ್ ಬೆಲೆ ರೂ. 178.15ಗೆ ಏರಿಕೆ ಆಗಿದೆ.
ಇದರ ಜೊತೆಗೆ ಸೀಮೆಎಣ್ಣೆ ಕೂಡ ರೂ. 30 ಏರಿಕೆಯಾಗಿದ್ದು, ಲೀಟರ್’ಗೆ 155.56 ರೂ.ಗೆ ಹೆಚ್ಚಳವಾಗಿದೆ.
Also read: ತಲೆಗೆ ಹೇರ್ ಕಲರ್ ಹಾಕುವ ವಿಚಾರದಲ್ಲಿ ವಾಗ್ವಾದ ಜಗಳದಲ್ಲಿ ಅಂತ್ಯ
ಈ ಕುರಿತಂತೆ ಮಾತನಾಡಿರುವ ಅಲ್ಲಿನ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, ಸರ್ಕಾರಕ್ಕೆ ಬೆಲೆ ಏರಿಕೆ ಬಿಟ್ಟು ಬೇರೆ ದಾರಿಯಿಲ್ಲ. ಹೊಸ ಬೆಲೆಯ ಅಡಿಯಲ್ಲಿ, ನಾವು ಇನ್ನೂ ಡೀಸೆಲ್ ಮೇಲೆ ಲೀಟರ್’ಗೆ 56 ರೂ. ನಷ್ಟವನ್ನು ಅನುಭವಿಸುತ್ತಿದ್ದೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post